ಹೊಸದಿಲ್ಲಿ, ಜೂ.6- 18ನೇ ಲೋಕಸಭೆಯಲ್ಲಿ ಮೊದಲ ಬಾರಿಗೆ ಚುನಾಯಿತರಾದ 280 ಸಂಸದರು ಇದ್ದಾರೆ. 2019ರಲ್ಲಿ ಈ ಸಂಖ್ಯೆ 267 ಮಂದಿ ಮೊದಲ ಬಾರಿಗೆ ಆಯ್ಕೆಯಾದವರು ಇದ್ದರು.
ಆಯ್ಕೆಯಾದವರಲ್ಲಿ 263 ಸಂಸದರು ಈ ಹಿಂದೆ ಲೋಕಸಭೆಯ ಸದಸ್ಯರಾಗಿದ್ದರು. 16 ಸಂಸದರು ರಾಜ್ಯಸಭೆ ಸದಸ್ಯರಾಗಿದ್ದರು ಮತ್ತು ಒಬ್ಬ ಸಂಸದರು ಏಳು ಅವಧಿಗೆ ಆಯ್ಕೆಯಾಗಿದ್ದಾರೆ ಎಂದು ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಚಿಂತಕರ ಚಾವಡಿ ಹೇಳಿದೆ.
ಪುನರಾಯ್ಕೆಯಾದವರಲ್ಲಿ ಎಂಟು ಮಂದಿ ಕ್ಷೇತ್ರವನ್ನು ಬದಲಿಸಿದ್ದಾರೆ ಮತ್ತು ಒಬ್ಬರು ಎರಡು ಕ್ಷೇತ್ರಗಳಿಂದ ಮರು ಆಯ್ಕೆಯಾಗಿದ್ದಾರೆ. 9 ಮರು ಚುನಾಯಿತ ಸಂಸದರು 17 ನೇ ಲೋಕಸಭೆಯಲ್ಲಿ ಬೇರೆ ಪಕ್ಷವನ್ನು ಪ್ರತಿನಿಧಿಸಿದ್ದು,ಎಂಟು ಮಂದಿ ತಮ್ಮ ಹಿಂದಿನ ಪಕ್ಷದಿಂದ ಬೇರ್ಪಟ್ಟ ಪಕ್ಷವನ್ನು ಪ್ರತಿನಿಧಿಸಿದ್ದಾರೆ. ಸ್ಪರ್ಧಿಸಿದ್ದ 53 ಸಚಿವರ ಪೈಕಿ 35 ಮಂದಿ ಗೆದ್ದಿದ್ದಾರೆ.