ಚುನಾವಣೆ ಆಯೋಗವು 2024 ರ ಲೋಕಸಭೆ ಚುನಾವಣೆಯ ಎಲ್ಲಾ 543 ಕ್ಷೇತ್ರಗಳ ಫಲಿತಾಂಶಗಳನ್ನು ಬುಧವಾರ ಪ್ರಕಟಿಸಿದೆ.
ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆದಿದ್ದು, ಜೂನ್ 4ರಂದು ಮತಗಳ ಎಣಿಕೆ ಮಾಡಲಾಯಿತು. ಎಲ್ಲ ಫಲಿತಾಂಶಗಳನ್ನು ಜೂನ್ 5 ರ ಬುಧವಾರದಂದು ಪ್ರಕಟಿಸಲಾಯಿತು.
ಬಿಜೆಪಿ 240 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) 294 ಸ್ಥಾನ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟ 231 ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ 99 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದ್ದು, ಸಮಾಜವಾದಿ ಪಕ್ಷ (ಎಸ್‌ಪಿ) 37 ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಚಟುವಟಿಕೆಯಲ್ಲಿ 640 ದಶಲಕ್ಷಕ್ಕೂ ಹೆಚ್ಚು ಮತಗಳನ್ನು ಎಣಿಸಲಾಗಿದೆ.
ಪಕ್ಷವಾರು ಸ್ಥಾನಗಳು:
ಭಾರತೀಯ ಜನತಾ ಪಕ್ಷ (ಬಿಜೆಪಿ) - 240
ಕಾಂಗ್ರೆಸ್ - 99
ಸಮಾಜವಾದಿ ಪಕ್ಷ (SP) - 37
ತೃಣಮೂಲ ಕಾಂಗ್ರೆಸ್ (ಟಿಎಂಸಿ) - 29
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) – 22
ತೆಲುಗು ದೇಶಂ ಪಕ್ಷ (ಟಿಡಿಪಿ) - 16
ಜನತಾ ದಳ (ಯುನೈಟೆಡ್) (ಜೆಡಿಯು) – 12
ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) – 9
ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ( ಶರಶ್ಚಂದ್ರ ಪವಾರ್ )- 8
ಶಿವಸೇನೆ (ಎಸ್‌ಎಚ್‌ಎಸ್) – 7
ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) – 5
ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್ ಸಿ ಆರ್ ಪಿ) - 4
ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) - 4
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸಿಪಿಐ(ಎಂ) - 4
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) - 3
ಆಮ್ ಆದ್ಮಿ ಪಕ್ಷ (ಎಎಪಿ) - 3
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) - 3
ಜನಸೇನಾ ಪಕ್ಷ (ಜೆಎನ್‌ಪಿ) - 2
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್, ಲಿಬರೇಶನ್) – ಸಿಪಿಐ(ಎಂಎಲ್,ಎಲ್) – 2
ಜನತಾ ದಳ (ಜಾತ್ಯತೀತ) ಜೆಡಿ (ಎಸ್) - 2
ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) – 2
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) - 2
ರಾಷ್ಟ್ರೀಯ ಲೋಕದಳ (ಆರ್‌ಎಲ್ ಡಿ) -2
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) –2
ಯುನೈಟೆಡ್ ಪೀಪಲ್ಸ್ ಪಾರ್ಟಿ, ಲಿಬರಲ್ (ಯುಪಿಪಿಎಲ್) – 1
ಅಸೋಮ್ ಗಣ ಪರಿಷತ್(ಎಜಿಪಿ) - 1
ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) (ಎಚ್‌ಎಎಂಎಸ್ ) – 1
ಕೇರಳ ಕಾಂಗ್ರೆಸ್ (ಕೆಇಸಿ) - 1
ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್ ಪಿ) - 1
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) - 1
ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ (ವಿಒಟಿಪಿಪಿ) - 1
ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ಝಡ್ ಪಿಎಂ) – 1
ಶಿರೋಮಣಿ ಅಕಾಲಿದಳ (ಎಸ್‌ಎಡಿ) – 1
ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್ ಎಲ್ ಟಿಪಿ) - 1
ಭಾರತ್ ಆದಿವಾಸಿ ಪಕ್ಷ - 1
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) – 1
ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) – 1
ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್) - 1
ಅಪ್ನಾ ದಳ (ಸೋನೆ ಲಾಲ್) - 1
ಎಜೆಎಸ್‌ಯು ಪಕ್ಷ - 1
ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) - 1
ಸ್ವತಂತ್ರ - 7
ಒಟ್ಟು - 543