ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ | ಆರ್‌ಜಿ ಕರ್ ಮಾಜಿ ಪ್ರಾಂಶುಪಾಲರ ಸಿಬಿಐ ಕಸ್ಟಡಿ ಸೆ.30ರವರೆಗೆ ವಿಸ್ತರಣೆ

ಮುಂದಿನ ವಿಚಾರಣೆ ನಡೆಯುವಾಗ ನಾರ್ಕೋ-ಅನಾಲಿಸಿಸ್ ಮತ್ತು ಪಾಲಿಗ್ರಾಫ್ ಪರೀಕ್ಷೆಗಳಿಗೆ ಕ್ರಮವಾಗಿ ಸಂದೀಪ್ ಘೋಷ್ ಮತ್ತು ಅಮಾನತುಗೊಂಡ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್ ಮೊಂಡಲ್ ಅವರ ಒಪ್ಪಿಗೆಯನ್ನು ಪಡೆಯಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.;

Update: 2024-09-26 11:54 GMT
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯರು ಕೋಲ್ಕತ್ತಾ, ಮಂಗಳವಾರ, ಸೆಪ್ಟೆಂಬರ್ 24, ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
Click the Play button to listen to article

ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್ ಅವರ ಸಿಬಿಐ ಕಸ್ಟಡಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿ ಕೊಲ್ಕತ್ತಾ ನ್ಯಾಯಾಲಯ ಬುಧವಾರ (ಸೆಪ್ಟೆಂಬರ್ 25) ಆದೇಶಿಸಿದೆ. 

ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಇಬ್ಬರನ್ನು ಬಂಧಿಸಿದೆ.ಇವರಿಬ್ಬರ ಸಿಬಿಐ ಕಸ್ಟಡಿಯನ್ನು ಸೆ.30ರವರೆಗೆ ಸೀಲ್ದಾ ನ್ಯಾಯಾಲಯ ವಿಸ್ತರಿಸಿದೆ.

ಮುಂದಿನ ವಿಚಾರಣೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯು ಮನವಿ ಮಾಡಿದಂತೆ ಕ್ರಮವಾಗಿ ನಾರ್ಕೋ-ಅನಾಲಿಸಿಸ್ ಮತ್ತು ಪಾಲಿಗ್ರಾಫ್ ಪರೀಕ್ಷೆಗಳಿಗೆ ಅವರ ಒಪ್ಪಿಗೆಯನ್ನು ಕೋರಲಾಗುವುದು ಎಂದು ತಿಳಿದುಬಂದಿದೆ. 

ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ವೈದ್ಯೆಯ ಶವ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್ ನಾಗರಿಕ ಸ್ವಯಂಸೇವಕನನ್ನು ಪೊಲೀಸರು ಬಂಧಿಸಿದ್ದರು. ಕೊಲ್ಕತ್ತಾ  ಹೈಕೋರ್ಟ್ ನಿರ್ದೇಶನದಂತೆ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ, ಘೋಷ್ ಮತ್ತು ಪೊಲೀಸ್ ಅಧಿಕಾರಿಯನ್ನು ಈ ಪ್ರಕರಣದ ವಿಚಾರಣೆಗಾಗಿ ಬಂಧಿಸಿದೆ. 

Tags:    

Similar News