ಬಾಂಗ್ಲಾದೇಶದ ಪ್ರಜೆಗಳಿಗೆ ಚಿಕಿತ್ಸೆ ನಿರಾಕರಿಸಿದ ಕೋಲ್ಕೊತಾದ ಆಸ್ಪತ್ರೆ
ಬಾಂಗ್ಲಾದೇಶದ ಪ್ರಜೆಗಳು ಭಾರತೀಯ ಧ್ವಜಕ್ಕೆ ಮಾಡಿದ ಅವಮಾನ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಪ್ರಜೆಗಳಿಗೆ ಚಿಕಿತ್ಸೆ ನೀಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜೆಎನ್ ರೇ ಆಸ್ಪತ್ರೆಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.;
ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಭಾರತದಲ್ಲಿ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಗೊಳ್ಳುತ್ತಿವೆ. ಬಾಂಗ್ಲಾದೇಶದಲ್ಲಿಯೂ ತಮ್ಮ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಧರಣಿಗಳು ಆಯೋಜನೆಗೊಳ್ಳುತ್ತಿವೆ. ಏತನ್ಮಧ್ಯೆ, ಕೋಲ್ಕತಾದ ಮಾಣಿಕ್ತಾಲಾ ಪ್ರದೇಶದ ಆಸ್ಪತ್ರೆಯೊಂದು ಬಾಂಗ್ಲಾದೇಶದ ಮೂಲದ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ನಿರಾಕರಿಸಿದೆ.
ಬಾಂಗ್ಲಾದೇಶದ ಪ್ರಜೆಗಳು ಭಾರತೀಯ ಧ್ವಜಕ್ಕೆ ಮಾಡಿದ ಅವಮಾನ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಪ್ರಜೆಗಳಿಗೆ ಚಿಕಿತ್ಸೆ ನೀಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜೆಎನ್ ರೇ ಆಸ್ಪತ್ರೆಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
"ಇಂದಿನಿಂದ ಅನಿರ್ದಿಷ್ಟ ಅವಧಿಯವರೆಗೆ ನಾವು ಬಾಂಗ್ಲಾದೇಶದ ರೋಗಿಯನ್ನು ಚಿಕಿತ್ಸೆಗಾಗಿ ದಾಖಲಿಸುವುದಿಲ್ಲ ಎಂದು ನಾವು ಸೂಚನೆ ಹೊರಡಿಸಿದ್ದೇವೆ. ಅವರು ಭಾರತದ ಬಗ್ಗೆ ತೋರಿಸಿದ ಅವಮಾನವೇ ಇದಕ್ಕೆ ಮುಖ್ಯ ಕಾರಣ" ಎಂದು ಆಸ್ಪತ್ರೆಯ ಅಧಿಕಾರಿ ಸುಭ್ರಾಂಶು ಭಕ್ತ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ನಗರದ ಇತರ ಆಸ್ಪತ್ರೆಗಳು ಇದೇ ರೀತಿ ಮಾಡಬೇಕೆಂದು ಅವರು ಕೋರಿದ್ದಾರೆ .
"ತ್ರಿವರ್ಣ ಧ್ವಜಕ್ಕೆ ಅವಮಾನವಾಗುತ್ತಿರುವುದನ್ನು ನೋಡಿ ನಾವು ಬಾಂಗ್ಲಾದೇಶಿರಿಗೆ ಚಿಕಿತ್ಸೆ ನಿಲ್ಲಿಸಲು ನಿರ್ಧರಿಸಿದ್ದೇವೆ. ಭಾರತವು ಅವರ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ಅದರ ಹೊರತಾಗಿಯೂ, ನಾವು ಭಾರತ ವಿರೋಧಿ ಭಾವನೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಇತರ ಆಸ್ಪತ್ರೆಗಳು ನಮ್ಮನ್ನು ಬೆಂಬಲಿಸುತ್ತವೆ ಮತ್ತು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದ್ದಾರೆ.