ಕೇರಳದಲ್ಲಿ ಅಂಗನವಾಡಿ ಮಕ್ಕಳಿಗೆ ಬಿರಿಯಾನಿ, ಚಿಕನ್ ಫ್ರೈ?
ಶಂಕುವಿನ ತಾಯಿ ವಿಡಿಯೋ ರೆಕಾರ್ಡ್ ಮಾಡಿ ಇನ್ ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಗುವಿನ ಬೇಡಿಕೆ ಕೇರಳ ಆರೋಗ್ಯ ಸಚಿವರ ತನಕ ಮುಟ್ಟಿದೆ. .;
"ಅಂಗನವಾಡಿಯಲ್ಲಿ ನಮಗೆ ಉಪ್ಪಿಟ್ಟು ಕೊಡುವುದು ಬೇಡ, ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡಿ... ಕೇರಳದ ಅಂಗನವಾಡಿ ಬಾಲಕ ಶಂಕು ಎಂಬಾತ ರಾಜ್ಯ ಸರ್ಕಾರಕ್ಕೆ ಇಂಥದ್ದೊಂದು ಬೇಡಿಕೆಯಿಟ್ಟಿದ್ದಾನೆ. ಆತನ ಅಭಿಲಾಷೆಯನ್ನು ಶಂಕುವಿನ ತಾಯಿ ವಿಡಿಯೋ ರೆಕಾರ್ಡ್ ಮಾಡಿ ಇನ್ ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಗುವಿನ ಬೇಡಿಕೆ ಕೇರಳ ಆರೋಗ್ಯ ಸಚಿವರ ತನಕ ಮುಟ್ಟಿದೆ. .
ಶಂಕುವಿನ ಬೇಡಿಕೆ ಉಳಿದೆಲ್ಲ ಮಕ್ಕಳ ಬೇಡಿಕೆಯೂ ಆಗಿದೆ ಎಂಬುದು ಹಲವರ ಅಭಿಪ್ರಾಯ. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ, ಅಂಗನವಾಡಿ ಮಕ್ಕಳ ಆಹಾರದ ಮೆನುವಿನಲ್ಲಿ ಬದಲಾವಣೆ ತರಲು ಮುಂದಾಗಿದ್ದೇವೆ ಎಂಬುದಾಗಿ ಹೇಳಿದ್ದಾರೆ . ಹೀಗೆಂದು ಸ್ವತಃ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಚಿಕನ್ ಬೇಕೆಂದ ಬಾಲಕ ಯಾರು?
ಅಂಗನವಾಡಿಯಲ್ಲಿ ಓದುತ್ತಿರುವ ರಿಜುಲ್ ಎಸ್. ಸುಂದರ್ ( ಎಲ್ಲರ ಪ್ರೀತಿಯ ಶಂಕು) ಇತ್ತೀಚೆಗೆ ಅಮ್ಮ ಮನೆಯಲ್ಲೇ ಮಾಡಿದ ಬಿರಿಯಾನಿ ತಿನ್ನುವಾಗ ವಿಡಿಯೊ ಮಾಡಿದ್ದಾನೆ. "ಅಮ್ಮಾ, ಅಂಗನವಾಡಿಯಲ್ಲಿ ನಮಗೆ ದಿನಾ ಉಪ್ಪಿಟ್ಟು ಕೊಡ್ತಾರೆ. ಅದರ ಬದಲಿಗೆ ಅವರು ಬಿರಿಯಾನಿ ಮತ್ತು ಪೊರಿಚ್ಚ ಕೋಯಿ(ಚಿಕನ್ ಫ್ರೈ) ಕೊಡಬಹುದಲ್ವಾ" ಎಂದು ಮುಗ್ಧನಾಗಿ ಪ್ರಶ್ನಿಸುತ್ತಾನೆ. ಅದನ್ನು ರೆಕಾರ್ಡ್ ಮಾಡಿದ ತಾಯಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಬಾಲಕ ಹೇಳುವ ವಿಡಿಯೊ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಕೊನೆಗೆ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯಿಸಿ, "ಶಂಕುವಿನ ಕೋರಿಕೆ ಪರಿಗಣಿಸಿ ನಾವು ಅಂಗನವಾಡಿ ಆಹಾರದ ಮೆನು ಪರಿಷ್ಕರಿಸಲು ಚಿಂತನೆ ನಡೆಸಿದ್ದೇವೆ. ಶಂಕು ಬಹಳ ಮುಗ್ಧನಾಗಿ ಇಂಥದ್ದೊಂದು ಬೇಡಿಕೆಯಿಟ್ಟಿದ್ದಾನೆ. ಮಕ್ಕಳಿಗೆ ಪೌಷ್ಟಿಕಾಂಶ ದೊರೆಯಲಿ ಎಂಬ ಕಾರಣಕ್ಕೆ ನಾವು ಬೇರೆ ಬೇರೆ ಬಗೆಯ ಆಹಾರಗಳನ್ನು ಒದಗಿಸುತ್ತಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲೇ ಮಕ್ಕಳಿಗೆ ಮೊಟ್ಟೆ ಮತ್ತು ಹಾಲು ಕೊಡುವ ಯೋಜನೆ ಜಾರಿ ಮಾಡಿದ್ದೇವೆ. ಈಗ ಶಂಕುವಿನ ಬೇಡಿಕೆಯನ್ನೂ ಪರಿಗಣಿಸುತ್ತೇವೆ" ಎಂದಿದ್ದಾರೆ.
Heading
Content Area