Coconut Production: ಕೇರಳವಲ್ಲ ಈಗ ಕರ್ನಾಟಕ ಭಾರತದ ತೆಂಗಿನ ರಾಜಧಾನಿ
Coconut Production: ತಮಿಳುನಾಡಿನಲ್ಲೂ ತೆಂಗಿನ ಉತ್ಪಾದನೆ ಹೆಚ್ಚಳಗೊಂಡಿದ್ದು ಮೊದಲ ಸ್ಥಾನದಲ್ಲಿದ್ದ ಕೇರಳವನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.;
ಕೇರಳವನ್ನು 'ತೆಂಗಿನ ರಾಜಧಾನಿ ' ಎಂದು ಕರೆಯಲಾಗುತ್ತದೆ. 2016ವರೆಗೆ ಅದು ಸತ್ಯವಾಗಿತ್ತು. ಆ ರಾಜ್ಯದಲ್ಲಿ ಅತಿ ಹೆಚ್ಚು ಉತ್ಪಾದನೆಯಿತ್ತು. ಉಪ ಉತ್ಪಾದನೆ ಹಾಗೂ ಬೆಳೆಯಲ್ಲಿನ ಪ್ರಾಬಲ್ಯದಿಂದಾಗಿ ಅದು ಕಲ್ಪವೃಕ್ಷದ ವಿಚಾರಕ್ಕೆ ಬಂದಾಗ ಅಗ್ರ ಸ್ಥಾನದಲ್ಲಿ ನಿಲ್ಲುತ್ತಿತ್ತು. ಆದರೆ, 2016ರಿಂದ ಆ ಸ್ಥಾನವನ್ನು ಕರ್ನಾಟಕ ಕಸಿದುಕೊಂಡಿದೆ. ಕರ್ನಾಟಕ ಈಗ ಅತಿ ಹೆಚ್ಚು ತೆಂಗು ಉತ್ಪಾದನೆ ಮಾಡುತ್ತಿದೆ.
ಕೇರಳದಲ್ಲಿ ತೆಂಗಿನಕಾಯಿ ಉತ್ಪಾದನೆ ಕುಸಿತ
ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿಯ (ಸಿಡಿಬಿ) ಅಂಕಿಅಂಶಗಳ ಪ್ರಕಾರ, 2022-23ರಲ್ಲಿ ಕರ್ನಾಟಕವು 595 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದಿಸಿದರೆ, ಕೇರಳದ ಉತ್ಪಾದನೆ 563 ಕೋಟಿ.
2023-24ರ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕಗಳ ಸಿಡಿಬಿಯ ತಾತ್ಕಾಲಿಕ ಅಂಕಿ ಅಂಶದಲಲಿ ಕೇರಳವು ಮತ್ತಷ್ಟು ಕುಸಿತ ಕಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಅವಧಿಯಲ್ಲಿ, ಕರ್ನಾಟಕವು 726 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದಿಸಿದರೆ, ಕೇರಳದ ಉತ್ಪಾದನೆ 564 ಕೋಟಿಗೆ ಸೀಮಿತವಾಗಿದೆ. ತಮಿಳುನಾಡಿನ ಉತ್ಪಾದನೆಯೂ ಹೆಚ್ಚಾಗಿದ್ದು 578 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದಿಸುವ ಮೂಲಕ ಕೇರಳವನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.
ಭಾರತದ ತೆಂಗು ಉತ್ಪಾದನೆಯಲ್ಲಿ ಕರ್ನಾಟಕವು ಈಗ ಶೇಕಡಾ 28.5ರಷ್ಟು ಕೊಡುಗೆ ನೀಡುತ್ತಿದೆ ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ವಾರಾಂತ್ಯದ ಕೃಷಿ ಮೋಹ
ಕರ್ನಾಟಕದಲ್ಲಿ ತೆಂಗು ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ರಾಜ್ಯದ ಯುವಜನರಲ್ಲಿ ಹಿಡಿದಿರುವ 'ವಾರಾಂತ್ಯದ ಕೃಷಿ' ಮೋಹವೇ ಕಾರಣ ಎಂದು ಸಿಡಿಬಿ ಅಧಿಕಾರಿಗಳು ಹೇಳುತ್ತಾರೆ.
ಈ ಪ್ರವೃತ್ತಿಯ ಪ್ರಕಾರ, ನಗರ ಉದ್ಯೋಗಗಳನ್ನು ಹೊಂದಿರುವ ಅನೇಕ ವ್ಯಕ್ತಿಗಳು ವಾರಾಂತ್ಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ, ಇದು ರಾಜ್ಯದಲ್ಲಿ ತೆಂಗಿನಕಾಯಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ. ಅವರು ಉತ್ತಮ ಫ್ರೇಮಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ತಮ್ಮ ತೆಂಗಿನ ತೋಟಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ವಿಶೇಷವಾಗಿ ತುಮಕೂರು, ಹಾಸನ ಮತ್ತು ಮಂಡ್ಯದ ಮೂರು ಜಿಲ್ಲೆಗಳಲ್ಲಿ ನಡೆಯುತ್ತಿದೆ, ಇದು ಕರ್ನಾಟಕದ ತೆಂಗು ಉತ್ಪಾದನೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಈ ಯುವ ರೈತರು ಗುಣಮಟ್ಟದ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಂತಹ ಸಂಸ್ಥೆಗಳಿಂದ ಸುಧಾರಿತ ಕೃಷಿ ವಿಧಾನಗಳ ಬಗ್ಗೆ ಸಹಾಯ ಪಡೆಯುತ್ತಾರೆ, ಇದು ಅವರ ಇಳುವರಿ ಹೆಚ್ಚಿಸಿದೆ.
ಕೇರಳದಲ್ಲಿ ಉತ್ಪಾದನೆ ಕುಸಿತ
ಕಳೆದ ಕೆಲವು ವರ್ಷಗಳಿಂದ ಕೇರಳದ ತೆಂಗಿನಕಾಯಿ ಉತ್ಪಾದನೆ ಕುಸಿದಿದೆ. ತಜ್ಞರ ಪ್ರಕಾರ, 2000-01 ರಿಂದ 2023-24 ರವರೆಗೆ ತೆಂಗು ಕೃಷಿ ಪ್ರದೇಶವು 9.25 ಲಕ್ಷ ಹೆಕ್ಟೇರ್ ನಿಂದ 7.59 ಲಕ್ಷ ಎಕರೆಗೆ ಇಳಿದಿದೆ.
ಅದೇ ಸಮಯದಲ್ಲಿ, ಕರ್ನಾಟಕವು ತನ್ನ ಕೃಷಿ ಪ್ರದೇಶವನ್ನು 3.33 ಲಕ್ಷ ಹೆಕ್ಟೇರ್ ಗಳಿಂದ 7.33 ಲಕ್ಷ ಹೆಕ್ಟೇರ್ ಗಳಿಗೆ ವಿಸ್ತರಿಸಿದೆ. ಇದಲ್ಲದೆ, ಬೆಳೆ ನಿರ್ವಹಣೆ ಮತ್ತು ಪ್ರವಾಸೋದ್ಯಮದೊಂದಿಗಿನ ಕೇರಳದ ಜಗಳಗಳು ಸಹ ಉತ್ಪಾದನೆಯ ಮೇಲೆ ಪರಿಣಾಮ ಬೀರಿವೆ. ಕಾಕತಾಳೀಯವೆಂಬಂತೆ, ಕೊಬ್ಬರಿ ಉತ್ಪಾದನೆಯಲ್ಲೂ ಕರ್ನಾಟಕವು ಕೇರಳಕ್ಕಿಂತ ಮುಂದಿದೆ.