ಜನರಿಗಾಗಿ ಕೆಲಸ ಮಾಡುವ ಸಮಯ ಬಂದಿದೆ: ಪವನ್ ಕಲ್ಯಾಣ್

ಜನಸೇನಾ 15 ವಿಧಾನಸಭೆ ಸ್ಥಾನಗಳನ್ನು ಗೆದ್ದಿದೆ ಮತ್ತು ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎರಡು ಲೋಕಸಭೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Update: 2024-06-04 14:49 GMT

ಅಮರಾವತಿ (ಆಂಧ್ರಪ್ರದೇಶ), ಜೂನ್ 4: ಸ್ಪರ್ಧಿಸಿದ ಶೇ.100 ರಷ್ಟು ಸ್ಥಾನಗಳನ್ನು ಗೆದ್ದ ಏಕೈಕ ಪಕ್ಷ ತಮ್ಮದು ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ ಅವರು ಮಂಗಳವಾರ ಹೇಳಿದ್ದಾರೆ. 

ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ʻಆಂಧ್ರಪ್ರದೇಶದಲ್ಲಿ ಎನ್‌ಡಿಎ ಜವಾಬ್ದಾರಿಯುತ ಸರ್ಕಾರವನ್ನು ರಚಿಸಲಿದೆ. ಜನಸೇನಾ ನೀಡಿದ ಭರವಸೆಗಳನ್ನು ಈಡೇರಿಸಲಿದೆ. ಇದು ಐತಿಹಾಸಿಕ ತೀರ್ಪಿನ ದಿನ. ಆಂಧ್ರಪ್ರದೇಶದ ಜನರಿಗೆ ಜವಾಬ್ದಾರಿಯುತ ಸರ್ಕಾರ ನೀಡಲು ಬದ್ಧರಾಗಿದ್ದೇವೆ,ʼ ಎಂದು ಹೇಳಿದರು. 

ʻವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ಸೇಡಿನ ರಾಜಕಾರಣಕ್ಕೆ ಮುಂದಾಗುವುದಿಲ್ಲ. ಇದು ಸೇಡು ತೀರಿಸಿಕೊಳ್ಳುವ ಸಮಯವಲ್ಲ. ಆಂಧ್ರಪ್ರದೇಶದ ಐದು ಕೋಟಿ ಜನರಿಗಾಗಿ ಕೆಲಸ ಮಾಡುವ ಸಮಯ ಇದು,ʼ ಎಂದು ಹೇಳಿದರು. 

ಟಿಡಿಪಿ ಮತ್ತು ಬಿಜೆಪಿ ಜೊತೆಗಿನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, 21 ವಿಧಾನಸಭೆ ಮತ್ತು ಎರಡು ಲೋಕಸಭೆ ಸ್ಥಾನಗಳಲ್ಲಿ ಜನಸೇನೆ ಸ್ಪರ್ಧಿಸಿದೆ. ಇತ್ತೀಚಿನ ವರದಿ ಪ್ರಕಾರ, ಜನಸೇನಾ 15 ವಿಧಾನಸಭೆ ಸ್ಥಾನಗಳನ್ನು ಗೆದ್ದಿದೆ ಮತ್ತು ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎರಡು ಲೋಕಸಭೆ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದೆ.

Tags:    

Similar News