Jammu & Kashmir: ಅನಂತ್‌ನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ʼವಿದೇಶಿʼ ಸೇರಿ ಇಬ್ಬರು ಉಗ್ರರ ಹತ್ಯೆ

ಕಾರ್ಯಾಚರಣೆ ಮುಂದುವರಿದಿದ್ದುವಿವರಗಳನ್ನು ನಿರೀಕ್ಷಿಸಲಾಗಿದೆ ಎಂದಿರುವ ಭದ್ರತಾ ಅಧಿಕಾರಿಗಳು ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಮತ್ತೊಂದು ಎನ್‌ಕೌಂಟರ್‌ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.;

Update: 2024-11-02 09:41 GMT
ಜಮ್ಮ ಕಾಶ್ಮೀರದಲ್ಲಿ ಉಗ್ರಗಾಮಿಗಳ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಸತ್ತಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಶಾಂಗಸ್-ಲಾರ್ನೂ ಪ್ರದೇಶದ ಹಲ್ಕಾನ್ ಗಲಿ ಬಳಿ ಈ ಎನ್‌ಕೌಂಟರ್‌ ನಡೆದಿದೆ.  ಹತ್ಯೆಗೀಡಾದ ಇಬ್ಬರು ಉಗ್ರರಲ್ಲಿ ಒಬ್ಬ ವಿದೇಶಿ. ಮತ್ತೊಬ್ಬ ಸ್ಥಳೀಯ ವ್ಯಕ್ತಿ. ಅವರ ನಡುವಿನ ಸಂಬಂಧವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು  ‌ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಮತ್ತೊಂದು ಎನ್‌ಕೌಂಟರ್‌ ನಡೆಯುತ್ತಿದೆ. ಇಲ್ಲಿಯವರೆಗೆ, ಎರಡೂ ಕಡೆ ಯಾವುದೇ ಸಾವುನೋವುಗಳಾಗಿರುವ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ನಿರಂತರ ದಾಳಿ

ನ. 1ರಂದು ಮಧ್ಯ ಕಾಶ್ಮೀರದ ಬುದ್ಗಾಮ್‌ ಜಿಲ್ಲೆಯ ಮಗಮ್‌ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಉತ್ತರ ಪ್ರದೇಶ ಮೂಲದ ಕಾರ್ಮಿಕರೊಬ್ಬರು ಗಾಯಗೊಂಡಿದ್ದರು. ಇದಾಗಿ 1 ದಿನದ ಬಳಿಕ ಸೇನೆ ಎನ್‌ಕೌಂಟರ್‌ ನಡೆಸಿದ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು.  ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿಯೂ ಎನ್‌ಕೌಂಟರ್‌ ನಡೆಸಿದ್ದರು. ಪೊಲೀಸರು ಮತ್ತು ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸುವ ವೇಳೆ ಉಗ್ರರು ದಾಳಿ ಆರಂಭಿಸಿದ್ದರು. 

ವಲಸೆ ಕಾರ್ಮಿಕ ಮೇಲೆ ನಿರಂತರ ದಾಳಿ 

ಇತ್ತೀಚಿನ ದಿನಗಳಲ್ಲಿ ಕಣಿವೆ ರಾಜ್ಯಕ್ಕೆ ಬರುವ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಲು ಆರಂಭಿಸಿದ್ದಾರೆ. ಗಂದರ್‌ಬಾಲ್‌ ಜಿಲ್ಲೆಯ ಗಗಾಂಗೀರ್‌ನಲ್ಲಿ ಅಕ್ಟೋಬರ್. 20ರಂದು ನಡೆದ ‌ ದಾಳಿಯಲ್ಲಿ  ವೈದ್ಯರೊಬ್ಬರು. ವಲಸಿಗ ಕಾರ್ಮಿಕರು ಸೇರಿ 6 ಮಂದಿ ಮೃತಪಟ್ಟಿದ್ದರು., ಗುಂಡ್ ಪ್ರದೇಶದಲ್ಲಿ  ಸುರಂಗ ನಿರ್ಮಾಣ ಕಾರ್ಯದಲ್ಲಿದ್ದಾಗ ಭಯೋತ್ಪಾದಕರು ನಿರಂತರ ಗುಂಡು ಹಾರಿಸಿದ್ದರು.

ದೀರ್ಘಕಾಲದಿಂದ ಶಾಂತಿಯುತ ಪ್ರದೇಶವೆಂದೇ ಹೇಳಲಾಗಿರುವ ಗಂಡರ್ಬಾಲ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದ ಕಳವಳವನ್ನುಂಟು ಮಾಡಿತ್ತು. ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ವಲಸಿಗನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ದಾಳಿಯನ್ನು ಖಂಡಿಸಿದ್ದರು.  

Tags:    

Similar News