ಬೆಂಗಳೂರು- ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವೆಂಕಟೇಶ್ ಅಯ್ಯರ್ ಅವರ ಅರ್ಧಶತಕದ ಬಲದಿಂದ ಆರ್‌ಸಿಬಿ ಮೇಲೆ 7 ವಿಕೆಟ್‌ಗಳ ಸುಲಭ ಜಯ ಗಳಿಸಿತು.
ವೆಂಕಟೇಶ್ ಅಯ್ಯರ್ 30 ಎಸೆತಗಳಲ್ಲಿ 50 ರನ್ (3x4, 4x6) ಮತ್ತು ಆರಂಭಿಕ ಬ್ಯಾಟರ್ಗಳಾದ ಸುನಿಲ್ ನರೈನ್ (47, 22 ಚಂಡು, 2x4, 5x6) ಮತ್ತು ಫಿಲ್ ಸಾಲ್ಟ್ (30, 20 ಚಂಡು, 2x4, 2x6) ಅವರ ಬಿರುಸಿನ ಆಟದ ನೆರವಿನಿಂದ ನೈಟ್ ರೈಡರ್ಸ್ 183 ರನ್ ಗುರಿ ದಾಟಿತು. ವಿರಾಟ್ ಕೊಹ್ಲಿ ಅವರ ಕೌಶಲಪೂರ್ಣ ಅಜೇಯ 83 ರ ಸುತ್ತ ಆರ್‌ಸಿಬಿ ಕಟ್ಟಿದ್ದ ಮೊತ್ತವನ್ನು ದಾಟಿತು.
ಪಂದ್ಯದ ನಂತರ ಸ್ನೇಹಿತರಲ್ಲದ ಕೊಹ್ಲಿ ಮತ್ತು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್, ಪರಸ್ಪರ ತಬ್ಬಿಕೊಂಡ ಸುಂದರ ದೃಶ್ಯಕ್ಕೆ ವೀಕ್ಷಕರು ಸಾಕ್ಷಿಯಾದರು.
ತಡೆರಹಿತ ಕೆಕೆಆರ್: 16.5 ಓವರ್‌ಗಳಲ್ಲಿ ಗುರಿ ಮುಟ್ಟಿದ ಕೆಕೆಆರ್ ನಿಧಾನಗತಿಯ ಪಿಚ್ ಅಥವಾ ಆರ್‌ಸಿಬಿ ಬೌಲರ್‌ಗಳಿಂದ ಯಾವುದೇ ಸಮಸ್ಕೆ ಎದುರಿಸಲಿಲ್ಲ.ರಾತ್ರಿ ವೇಳೆ ಅವರ ಆಟದ ವಿಧಾನಕ್ಕೆ ಅತ್ಯುತ್ತಮ ಉದಾಹರಣೆ- ವೆಂಕಟೇಶ್ ಅಯ್ಯರ್.ಬಿಳಿ ಚೆಂಡಿನಲ್ಲಿ ಆಟ ಕುದುರಿಸಿಕೊಳ್ಳಲು ಶ್ರಮಿಸುತ್ತಿರುವ ಅವರು ನಾಯಕ ಶ್ರೇಯಸ್ ಅಯ್ಯರ್ (ಅಜೇಯ 39) ಅವರೊಂದಿಗೆ ಮೂರನೇ ವಿಕೆಟ್‌ಗೆ 75 ರನ್ ಸೇರಿಸಿದರು. ಎಡಗೈ ಆಟಗಾರ ಆರಂಭದಿಂದಲೇ ಲಯ ಕಂಡುಕೊಂಡರು ಮತ್ತು ವೇಗಿ ವೆಸ್ಟ್ ಇಂಡೀಸಿನ ಅಲ್ಜಾರಿ ಜೋಸೆಫ್ ಅವರ ಒಂದು ಓವರ್‌ನಲ್ಲಿ ಕವರ್ ಮತ್ತು ಮಿಡ್ ವಿಕೆಟ್‌ನಲ್ಲಿ ಎರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.
ಐದು ರನ್ ಆಗಿದ್ದಾಗ ಸ್ಥಳೀಯ ವೇಗಿ ವೈಶಾಖ್ ವಿಜಯಕುಮಾರ್ (1/23) ಅವರ ಬೌಲಿಂಗಿನಲ್ಲಿ ಯಶ್ ದಯಾಳ್ ಅವರಿಂದ ಜೀವದಾನ ಪಡೆದ ಶ್ರೇಯಸ್, ಆನಂತರ ಉಳಿದವರಿಗೆ ಬೆಂಬಲವಾಗಿ ನಿಂತರು. ನರೈನ್ ಮತ್ತು ಸಾಲ್ಟ್ ಜೋಡಿ ಕೇವಲ 6.3 ಓವರ್‌ಗಳಲ್ಲಿ 86 ರನ್ ಸೇರಿಸಿದ್ದು, ಕೆಕೆಆರ್ ಗೆಲುವಿನ ಗುರಿ ಮುಟ್ಟಲು ನೆರವಾಯಿತು. ಸಾಲ್ಟ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮೊದಲ ಓವರ್‌ನಲ್ಲಿ 18 ರನ್ ಗಳಿಸಿದರು(ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ). ನರೈನ್ ಮೂರನೇ ಓವರ್‌ನಲ್ಲಿ ಜೋಸೆಫ್ ಅವರನ್ನು ಎರಡು ಸಿಕ್ಸರ್ ಸಿಡಿಸಿ, ಎಡಗೈ ವೇಗಿ ದಯಾಳ್ ಅವರ ಓವರ್ ನಲ್ಲಿ 21 ರನ್ ಗಳಿಸಿದರು(ಆರನೇ ಓವರ್, ಮೂರು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್).
ʻಋತು ಇದೀಗ ಪ್ರಾರಂಭವಾಗಿದೆ ಮತ್ತು ನಾವು ಕೇವಲ ಎರಡು ಗೆಲುವು ಕಂಡಿದ್ದೇವೆ. ನಾವು ಇದನ್ನು ಮುಂದುವರಿಸಬೇಕು ಮತ್ತು ಪರಸ್ಪರರ ಯಶಸ್ಸನ್ನು ಆನಂದಿಸಬೇಕುʼ ಎಂದು ಪಂದ್ಯದ ನಂತರದ ಶ್ರೇಯಸ್ ಹೇಳಿದರು. 500ನೇ ಟಿ20 ಪಂದ್ಯದಲ್ಲಿ ಆಡುತ್ತಿರುವ ನರೇನ್, ʻಇಂಥ ಪ್ರದರ್ಶನ ನೀಡುವುದು ಸಂತೋಷ ನೀಡುತ್ತದೆ. ಆತ್ಮವಿಶ್ವಾಸ ಇರಬೇಕು. ಜೊತೆಗಾರರು ಪ್ರೋತ್ಸಾಹ ನೀಡುತ್ತಿದ್ದಾರೆ. ಸ್ವಲ್ಪ ಮಟ್ಟಿನ ಶ್ರಮ ಸಹಾಯ ಮಾಡುತ್ತದೆʼ ಎಂದರು.
ಕೊಹ್ಲಿ ಫಾರ್ಮ್‌ನಲ್ಲಿ: ಕೊಹ್ಲಿ ಅವರ ಅಜೇಯ ಅರ್ಧ ಶತಕದ ನೆರವಿನಿಂದ ಆರ್‌ಸಿಬಿ, ಸ್ಪರ್ಧಾತ್ಮಕ ಎನ್ನಬಹುದಾದ 182 ರನ್ ಪೇರಿಸಿತು. ಕೊಹ್ಲಿ (83, 59 ಚೆಂಡು, 4x4, 4x6) ಮತ್ತು ಕ್ಯಾಮರೂನ್ ಗ್ರೀನ್ (21 ಚಂಡು, 33) ಎರಡನೇ ವಿಕೆಟ್‌ಗೆ 42 ಎಸೆತಗಳಲ್ಲಿ 65 ರನ್ ಗಳಿಸಿದರು, ದಿನೇಶ್ ಕಾರ್ತಿಕ್ (20, 8 ಚೆಂಡು, 3x6) ಎಂದಿನಂತೆ ಆರ್‌ಸಿಬಿ ಮೊತ್ತಕ್ಕೆ ಸೇರಿಸಿದರು. ವೇಗಿ ಹರ್ಷಿತ್ ರಾಣಾ ಅವರನ್ನು ಹೊಡೆಯುವ ಯತ್ನದಲ್ಲಿ ಚೆಂಡು ಮಿಚೆಲ್ ಸ್ಟಾರ್ಕ್ ಕೈ ಸೇರಿತು. ನಾಯಕ ಫಾಫ್ ಡು ಪ್ಲೆಸಿಸ್ ಬೇಗ ನಿರ್ಗಮಿಸಿದರು. ಕೊಹ್ಲಿ 36 ಎಸೆತಗಳಲ್ಲಿ ಅರ್ಧಶತಕ ಮುಗಿಸಿದರು. ಆದರೆ, ಗ್ರೀನ್ ಹೊರತುಪಡಿಸಿ ಇತರ ಬ್ಯಾಟರ್‌ಗಳು ಹೆಣಗಾಡಿದರು. ಗ್ಲೆನ್ ಮ್ಯಾಕ್ಸ್‌ವೆಲ್ (19 ಬಾಲ್, 28) 11 ಮತ್ತು 21 ರಲ್ಲಿ ಎರಡು ಬಾರಿ ಜೀವದಾನ ಪಡೆದರು. ಕೊಹ್ಲಿಯೊಂದಿಗೆ ಮೂರನೇ ವಿಕೆಟ್‌ಗೆ 42 ರನ್ ಸೇರಿಸಿದ ಮ್ಯಾಕ್ಸ್‌ವೆಲ್, ವೆಸ್ಟ್ ಇಂಡಿಯನ್ ಸ್ಪಿನ್ನರ್ ನರೈನ್ ಎಸೆದ ಚೆಂಡಿನಿಂದ ನಿರ್ಗಮಿಸಬೇಕಾಯಿತು.