ಇಂದೋರ್ | ಆಶ್ರಮದಲ್ಲಿ ಆರು ಮಕ್ಕಳ ಸಾವು, ಒಬ್ಬ ಬಾಲಕ ನಾಪತ್ತೆ
ಇಂದೋರ್‌ನಲ್ಲಿರುವ ಆಶ್ರಮವೊಂದರಲ್ಲಿ ಆರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿ, ಓರ್ವ ಅಪ್ರಾಪ್ತ ಬಾಲಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಅಧಿಕೃತ ಪರಿಶೀಲನೆ ನಡೆಸುತ್ತಿದ್ದಾರೆ.;
ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಆಶ್ರಮವೊಂದರಲ್ಲಿ ಆರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿ, ಓರ್ವ ಅಪ್ರಾಪ್ತ ಬಾಲಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಅಧಿಕೃತ ಪರಿಶೀಲನೆ ನಡೆಸುತ್ತಿದ್ದಾರೆ.
ಇಂದೋರ್‌ನ ಮಲ್ಹಾರ್‌ಗಂಜ್ ಪ್ರದೇಶದಲ್ಲಿ ಎನ್‌ಜಿಒ ನಡೆಸುತ್ತಿರುವ ಯುಗಪುರುಷ ಧಾಮ್ ಬಾಲ್ ಆಶ್ರಮದಲ್ಲಿ ಆರು ಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದರು. ಈ ವಿಶೇಷ ಮಕ್ಕಳ ಸಾವುಗಳು ಆಶ್ರಮದಲ್ಲಿ ಮಕ್ಕಳ ದುರುಪಯೋಗ, ಅತಿಯಾದ ಪ್ರವೇಶ ಹಾಗೂ ಏಕಾಏಕಿ ಶಂಕಿತ ಕಾಲರಾ ಕುರಿತು ಕಳವಳವನ್ನು ಹೆಚ್ಚಿಸಿವೆ. ಇನ್ನು ಇದೇ ಆಶ್ರಮದ 16 ವರ್ಷದ ಬಾಲಕನೊಬ್ಬ ಕಾಣೆಯಾಗಿದ್ದು, ಆತನನ್ನು ಅಪಹರಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಾಲಕ ಕಾಣೆಯಾದ ಪ್ರಕರಣ
ಆಶ್ರಮದಲ್ಲಿ ಕಾಲರಾ ಕಾಣಿಸಿಕೊಂಡ ನಂತರ ಜುಲೈ 6 ರಂದು ಕೆಲವು ಮಕ್ಕಳನ್ನು ನಗರದ ಖಾಂಡ್ವಾ ನಾಕಾ ಪ್ರದೇಶದ ಮತ್ತೊಂದು ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಆಶಿಶ್ ಪಟೇಲ್ ತಿಳಿಸಿದ್ದಾರೆ.
ಕಾಣೆಯಾದ ಬಾಲಕನನ್ನು ಆನಂದ್ ಎಂದು ಅವರು ಗುರುತಿಸಿದ್ದು, ಆಶ್ರಮದ ಆಡಳಿತವು ಯಾರೋ ಅಪರಿಚಿತ ದುಷ್ಕರ್ಮಿಗಳು ಆಮಿಷವೊಡ್ಡಿ ಜುಲೈ 8 ರಂದು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಆಶ್ರಮ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದಾಗ ಆ ದಿನ ಹುಡುಗ ಕಾಣಿಸಲಿಲ್ಲ. ನಾವು ಆ ದಿನಾಂಕದ ಮೊದಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಕಾಣೆಯಾದ ಹುಡುಗ ಜನವರಿಯಲ್ಲಿ ಹಾರ್ಡಾದ ಮಕ್ಕಳ ಕಲ್ಯಾಣ ಸಮಿತಿಯಿಂದ ಇಂದೋರ್‌ಗೆ ಬಂದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾಣೆಯಾದ ಬಾಲಕನಿಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಆಶಿಶ್ ಪಟೇಲ್ ತಿಳಿಸಿದ್ದಾರೆ.
ಇನ್ನು ಜುಲೈ 1ರಿಂದ ಜುಲೈ 2 ರ ನಡುವೆ ಕಾಲರಾದಿಂದ ಬಳಲುತ್ತಿದ್ದ ನಾಲ್ಕು ಮಕ್ಕಳು ಆಶ್ರಮದಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 30 ರಂದು ಒಂದು ಮಗು ಮೆದುಳು ಜ್ವರದಿಂದ ಸಾವನ್ನಪ್ಪಿದರೆ ಆಶ್ರಮದ ಇನ್ನೋರ್ವ ಬಾಲಕ ಜೂನ್ 29-30 ರ ರಾತ್ರಿ ಸಾವನ್ನಪ್ಪಿದ್ದ. ಆದರೆ ಆಶ್ರಮದ ಮೇಲ್ವಿಚಾರಕರು ಈ ಸಾವಿನ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಲಿಲ್ಲ. ಮಗು ಮೂರ್ಛೆ ರೋಗದಿಂದ ಸಾವನ್ನಪ್ಪಿದೆ ಎಂದು ಹೇಳಿದ್ದರು.
ಉನ್ನತ ಮಟ್ಟದ ಸಮಿತಿಯ ತನಿಖೆಯು ಆಶ್ರಮದಲ್ಲಿ ಮಕ್ಕಳ ಕಿಕ್ಕಿರಿದು ತುಂಬಿರುವುದು, ಮಕ್ಕಳ ಅಸಮರ್ಪಕ ವೈದ್ಯಕೀಯ ದಾಖಲೆಗಳು ಮತ್ತು ಇತರ ಅಕ್ರಮಗಳನ್ನು ಬಹಿರಂಗಪಡಿಸಿದೆ ಎಂದು ಪಟೇಲ್ ಹೇಳಿದ್ದಾರೆ.