ಟಿ 20 ಜಿಂಬಾಬ್ವೆ ಪ್ರವಾಸ: ಶುಭಮನ್ ಗಿಲ್ ನಾಯಕ
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದ ತಂಡದಲ್ಲಿ ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ ಮತ್ತು ರಿಯಾನ್ ಪರಾಗ್ ಇದ್ದಾರೆ.;
ಐಸಿಸಿ ಟಿ 20 ವಿಶ್ವಕಪ್ ಗೆ ಆಯ್ಕೆಯಾಗದ ಶುಭಮನ್ ಗಿಲ್ ಅವರನ್ನು ಜುಲೈನಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿರುವ ಪ್ರವಾಸಕ್ಕೆ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಜುಲೈ 6ರಿಂದ 14ರವರೆಗೆ ಜಿಂಬಾಬ್ವೆ ವಿರುದ್ಧ ಭಾರತ ಐದು ಟಿ20 ಪಂದ್ಯಗಳನ್ನು ಆಡಲಿದೆ.
ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಹಿರಿಯ ಆಟಗಾರರಿರುವ 15 ಸದಸ್ಯರ ತಂಡ ಇದಾಗಿದ್ದು, ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಐಪಿಎಲ್ 2024 ರಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಮೂಲಕ ಬಹುಮಾನ ನೀಡಲಾಗಿದೆ.
ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಪ್ರಕಟಿಸಿದ ತಂಡದಲ್ಲಿ ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ ಮತ್ತು ರಿಯಾನ್ ಪರಾಗ್ ಸೇರಿದ್ದಾರೆ.
ʻಜಿಂಬಾಬ್ವೆ ಪ್ರವಾಸಕ್ಕಾಗಿ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಜುಲೈ ಮೊದಲ ವಾರ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಲು ಹರಾರೆಗೆ ತೆರಳಲಿದೆ,ʼ ಎಂದು ಬಿಸಿಸಿಐ ಹೇಳಿದೆ.
ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್/ ಧ್ರುವ್ ಜುರೆಲ್ (ವಿಕೆಟ್ ಕೀಪರ್ ಗಳು), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.
ಎಲ್ಲ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿವೆ. ಪಂದ್ಯಗಳು ಮಧ್ಯಾಹ್ನ 4:30ಕ್ಕೆ(ಭಾರತೀಯ ಕಾಲಮಾನ) ಆರಂಭವಾಗುತ್ತವೆ (ಸ್ಥಳೀಯ ಮಧ್ಯಾಹ್ನ1 ಗಂಟೆ)
1 ನೇ ಪಂದ್ಯ : ಜುಲೈ 6 (ಶನಿವಾರ)
2 ನೇ ಪಂದ್ಯ : ಜುಲೈ 7 (ಭಾನುವಾರ)
3ನೇ ಪಂದ್ಯ : ಜುಲೈ 10 (ಬುಧವಾರ)
4 ನೇ ಪಂದ್ಯ : ಜುಲೈ 13 (ಶನಿವಾರ)
5 ನೇ ಪಂದ್ಯ : ಜುಲೈ 14 (ಭಾನುವಾರ)