ಜೂನ್ 4 ರ ನಂತರ ಇಂಡಿಯ ಒಕ್ಕೂಟದ ಸರ್ಕಾರ: ಲಾಲು

Update: 2024-05-28 11:51 GMT

ಪಾಟ್ನಾ, ಮೇ 28: ಪ್ರಧಾನಿ ಮೋದಿಯವರ ʻದೇವರು ಕಳುಹಿಸಿದ್ದಾರೆʼ ಹೇಳಿಕೆಯನ್ನು ಅಣಕಿಸಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌, ಜೂನ್ 4 ರ ನಂತರ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ ಎಂದು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ʻಮೋದಿ ತಮ್ಮನ್ನು 'ಅವತಾರ' (ದೇವರ ಸಂದೇಶವಾಹಕ) ಎಂದು ಕರೆದುಕೊಳ್ಳುತ್ತಾರೆ. ಮೋದಿ ಜೈವಿಕ ಅಲ್ಲ; ಬದಲಾಗಿ, ದೇವರ ಸಂದೇಶವಾಹಕ. ಫಲಿತಾಂಶ ಶೀಘ್ರದಲ್ಲೇ ನಮಗೆ ತಿಳಿಯಲಿವೆ. ಪ್ರಧಾನಿ ಮೋದಿ ಹೊರಗೆ ಹೋಗಲಿದ್ದಾರೆ. ಇಂಡಿಯಾ ಒಕ್ಕೂಟ ಜೂನ್ 4 ರಂದು ಸರ್ಕಾರ ರಚಿಸಲಿದೆ,ʼ ಎಂದರು. 

ಇತ್ತೀಚೆಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ,ʻತಾವು ಜೈವಿಕ ಅಲ್ಲ. ದೇವರಿಂದ ಕಳುಹಿಸಲ್ಪಟ್ಟವರುʼ ಎಂದು ಹೇಳಿದ್ದರು. ಎನ್‌ಡಿಎ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸಲು ಮತ್ತು ಮೀಸಲು ಕೊನೆಗೊಳಿಸಲು ಉದ್ದೇಶಿಸಿದೆ ಎಂದು ಆರೋಪಿಸಿದರು.

ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಲಾಲು, ʻಸಂವಿಧಾನ ನಿರ್ಮಾಪಕ ಬಾಬಾ ಸಾಹೇಬ್ ಡಾ. ಭೀಮ ರಾವ್ ಅಂಬೇಡ್ಕರ್ ಅವರನ್ನು ಧಿಕ್ಕರಿಸುತ್ತಿರುವ ಬಿಜೆಪಿ ಮತ್ತು ಅದರ ನಾಯಕರು ಸಂವಿಧಾನ ಮತ್ತು ಮೀಸಲು ರದ್ದುಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಸಂವಿಧಾನವನ್ನು ಬಾಬಾ ಸಾಹೇಬ್ ಅವರು ಬರೆದಿದ್ದರಿಂದಲೇ, ಮೋದಿ ಮತ್ತು ಕಂಪನಿ ಸಂವಿಧಾನವನ್ನು ದ್ವೇಷಿಸುತ್ತಿದೆ,ʼ ಎಂದು ಬರೆದಿದ್ದರು.

Tags:    

Similar News