ರಾಜ್ಯಪಾಲರಿಗೆ ವಿನಾಯಿತಿ: ಸಾಂವಿಧಾನಿಕ ನಿಬಂಧನೆಗಳ ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ

Update: 2024-07-19 08:28 GMT

ನವದೆಹಲಿ, ಜುಲೈ 19- ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಯಿಂದ ರಾಜ್ಯಪಾಲರಿಗೆ ವಿನಾಯಿತಿ ನೀಡುವ ಸಂವಿಧಾನದ 361 ನೇ ವಿಧಿಯ ಎಲ್ಲೆಕಟ್ಟುಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮಹಿಳಾ ಗುತ್ತಿಗೆ ಉದ್ಯೋಗಿ ಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ ಮನವಿ ಮೇರೆಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

ರಾಜ್ಯಪಾಲರಿಗೆ ವಿನಾಯಿತಿ ನೀಡುವ ಸಂವಿಧಾನದ 361 ನೇ ವಿಧಿಯ ನ್ಯಾಯಾಂಗ ಪರಿಶೀಲನೆಯನ್ನು ಮಹಿಳೆ ಕೋರಿದ್ದಾರೆ. ವಿಷಯವನ್ನು ಬಗೆಹರಿಸಲು ಸುಪ್ರೀಂ ಕೋರ್ಟ್, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವು ಕೋರಿದೆ. 

ರಾಜಭವನದ ಮಹಿಳಾ ಉದ್ಯೋಗಿಯು ತಮ್ಮ ಮನವಿಯಲ್ಲಿ ಕೇಂದ್ರವನ್ನೂ ಪಕ್ಷವನ್ನಾಗಿ ಮಾಡುವಂತೆ ನ್ಯಾಯಾಲಯ ಕೇಳಿಕೊಂಡಿದೆ.

361ನೇ ವಿಧಿಯು ವಿಧಿ 14 (ಸಮಾನತೆಯ ಹಕ್ಕು)ಕ್ಕೆ ಅಪವಾದವಾಗಿದ್ದು, ರಾಷ್ಟ್ರಪತಿ ಅಥವಾ ರಾಜ್ಯಪಾಲರು ತಮ್ಮ ಅಧಿಕಾರ ಮತ್ತು ಕರ್ತವ್ಯಗಳನ್ನು ಚಲಾಯಿಸುವಲ್ಲಿ ಯಾವುದೇ ನ್ಯಾಯಾಲಯಕ್ಕೆ ಉತ್ತರ ನೀಡಬೇಕಿಲ್ಲ ಎಂದು ಹೇಳುತ್ತದೆ.

ಮಹಿಳಾ ಅರ್ಜಿದಾರರು ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. 

Tags:    

Similar News