ಜಾರ್ಜಂಡ್‌ನಲ್ಲಿ ಮತ್ತೆ ವಿಜಯ ಪತಾಕೆ ಹಾರಿಸಿದ ʼಬಂಟಿ ಔರ್‌ ಬಬ್ಲಿʼ

ಈ ವರ್ಷದ ಆರಂಭದಲ್ಲಿ ಪತಿ ಹೇಮಂತ್‌ ಸೊರೆನ್‌ ಜೈಲು ಸೇರಿದಾಗ ಪಕ್ಷವನ್ನು ಮುನ್ನಡೆಸು ಜವಾಬ್ದಾರಿ ವಹಿಸಿಕೊಂಡ ಪತ್ನಿ ಮತ್ತು ಶಾಸಕಿ ಕಲ್ಪನಾ ಸೊರೆನ್ ಈ ಗೆಲುವಿನ ರೂವಾರಿಗಳು ಎಂಬುದನ್ನು ಎರಡು ಮಾತಿಲ್ಲ.;

Update: 2024-11-23 15:18 GMT

ಒಂದು ಕಾಲದಲ್ಲಿ ಬಿಜೆಪಿಯಿಂದ 'ಬಂಟಿ ಔರ್ ಬಬ್ಲಿ' ಎಂದು ಕರೆಸಿಕೊಂಡಿದ್ದ ಪವರ್‌ ದಂಪತಿ ಹೇಮಂತ್ ಸೊರೆನ್ ಮತ್ತು ಕಲ್ಪನಾ ಸೊರೆನ್ ಮತ್ತೊಂದು ಬಾರಿ ಪ್ರಭಾವ ಬೀರಿದ್ದಾರೆ. ಜಾರ್ಖಂಡ್‌ನಲ್ಲಿ ಮತ್ತೊಂದು ಬಾರಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷವನ್ನುಅಧಿಕಾರಕ್ಕೆ ತರಲು ಯಶಸ್ವಿಯಾಗಿದ್ದಾರೆ. ಇಂಡಿಯಾ ಒಕ್ಕೂಟಕ್ಕೆ ಶಕ್ತಿ ತುಂಬಿದ್ದಾರೆ.

ಈ ವರ್ಷದ ಆರಂಭದಲ್ಲಿ ಪತಿ ಹೇಮಂತ್‌ ಸೊರೆನ್‌ ಜೈಲು ಸೇರಿದಾಗ ಪಕ್ಷವನ್ನು ಮುನ್ನಡೆಸು ಜವಾಬ್ದಾರಿ ವಹಿಸಿಕೊಂಡ ಪತ್ನಿ ಮತ್ತು ಶಾಸಕಿ ಕಲ್ಪನಾ ಸೊರೆನ್ ಈ ಗೆಲುವಿನ ರೂವಾರಿಗಳು ಎಂಬುದನ್ನು ಎರಡು ಮಾತಿಲ್ಲ. ಈ ಜೋಡಿ ಚುನಾವಣೆ ಘೋಷಣೆಯಾದ ನಂತರ ಸುಮಾರು 200 ಚುನಾವಣಾ ರ್ಯಾಲಿಗಳನ್ನು ನಡೆಸಿದ್ದಾರೆ ಎಂಬುದು ಗಮನಾರ್ಹ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಈಗಾಗಲೇ ಪಟಾಕಿಗಳನ್ನು ಸಿಡಿಸುವುದು ಮತ್ತು ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಸಂಭ್ರಮಾಚರಣೆ ಪ್ರಾರಂಭಿಸಿದ್ದಾರೆ. ಮತದಾನದ ನಂತರ ಗುರುವಾರ ಪವರ್ ದಂಪತಿಗಳು ತಮ್ಮ ಪ್ರೀತಿಯ ನಾಯಿಗಳೊಂದಿಗೆ ಆಟವಾಡುತ್ತಾ ವಿಶ್ರಾಂತಿ ಪಡೆಯುತ್ತಿದ್ದರು. ಹೇಮಂತ್ ಸೊರೆನ್ ಎಕ್ಸ್‌ನಲ್ಲಿ ಆ ಚಿತ್ರಗಳನ್ನು ಹಂಚಿಕೊಂಡಿದ್ದರು.

ಜಾರ್ಖಂಡ್‌ನಲ್ಲಿ ಜೆಎಂಎಂ ಮತ್ತೆ ಅಧಿಕಾರಕ್ಕೆ ಬಂದಿರುವುದು ಅದು ಬುಡಕಟ್ಟು ಸಮುದಾಯಗಳಲ್ಲಿ ಸೊರೆನ್‌ ಹೊಂದಿರುವ ಪ್ರಭಾವವನ್ನು ತೋರಿಸುತ್ತದೆ. ಏಕೆಂದರೆ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜನವರಿ 31 ರಂದು ಜಾರಿ ನಿರ್ದೇಶನಾಲಯ (ಇಡಿ) ಹೇಮಂತ್ ಸೊರೆನ್ ಅವರನ್ನು ಬಂಧಿಸಿದ ನಂತರ ಅವರು ಬುಡಕಟ್ಟು ಭಾವನೆಗಳನ್ನು ಸೂರೆಗೊಂಡಿದ್ದರು.

ಸಹಾನುಭೂತಿಯ ಅಲೆ

ಹೇಮಂತ್ ಮತ್ತು ಕಲ್ಪನಾ ಇಬ್ಬರೂ ಬುಡಕಟ್ಟು ಮತದಾರರಲ್ಲಿ ಅನುಕಂಪದ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಡಳಿತ ವಿರೋಧಿ ಭಾವನೆಯ ಹೊರತಾಗಿಯೂ, ಬಿಜೆಪಿ ಇದನ್ನು ಲಾಭ ಮಾಡಿಕೊಳ್ಳಲು ಮತ್ತು ಸರ್ಕಾರ ರಚಿಸಲು ವಿಫಲವಾಗಿದೆ ಎಂದು ಚುನಾವಣಾ ವಿಶ್ಲೇಷಕರು ತಿಳಿಸಿದ್ದಾರೆ.

ಬರ್ಹೈತ್ ವಿಧಾನಸಭಾ ಕ್ಷೇತ್ರದಲ್ಲಿ ಸೊರೆನ್ ಅವರು ಬಿಜೆಪಿಯ ಗಾಮ್ಲಿಯೆಲ್ ಹೆಂಬ್ರೋಮ್ ವಿರುದ್ಧ 17,347 ಮತಗಳ ಅಂತರದಿಂದ ಗೆದ್ದಿದ್ದಾರೆ. ಪತಿಯ ಬಂಧನದ ನಂತರ ಜೆಎಂಎಂಗೆ ಪುನರುಜ್ಜೀವನ ನೀಡಿದ ಕೀರ್ತಿಗೆ ಪಾತ್ರರಾದ ಅವರ ಪತ್ನಿ ಕಲ್ಪನಾ ಸೊರೆನ್ ಗೆದ್ದು ಬೀಗಿದ್ದಾರೆ.

ಕಲ್ಪನಾ ಅವರನ್ನು ಗಂಡೆಯಲ್ಲಿ "ಹೆಲಿಕಾಪ್ಟರ್ ಮೇಡಮ್" ಎಂದು ಕರೆಯುತ್ತಾರೆ ಎಂದು ಜೆಎಂಎಂ ಕಾರ್ಯಕರ್ತರಯ ಹೇಳಿದ್ದಾರೆ. ಈ ಪದವನ್ನು ಬಿಜೆಪಿ ನಾಯಕರು ಅವರನ್ನು ಹೊರಗಿನವರು ಬಿಂಬಿಸುವ ಪ್ರಯತ್ನವಾಗಿದೆ.

ಹೈಕೋರ್ಟ್ ಜಾಮೀನು ನೀಡಿದ ನಂತರ ಹೇಮಂತ್ ಸೊರೆನ್ ಜೂನ್ 28 ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಜುಲೈ 3ರಂದು ಅವರನ್ನು ಜೆಎಂಎಂನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಚಂಪೈ ಸೊರೆನ್ ತಮ್ಮ ರಾಜೀನಾಮೆ ರಾಜ್ಯಪಾಲರಿಗೆ ಸಲ್ಲಿಸಿದ್ದರು. ಹೇಮಂತ್ ಸೊರೆನ್ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜೆಎಂಎಂನ ಪ್ರಚಾರವು ಕಲ್ಯಾಣ ಯೋಜನೆಗಳ ಭರವಸೆಗಳು ಮತ್ತು ಇಡಿ ಮತ್ತು ಸಿಬಿಐ ಅನ್ನು ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ ಸಾಧನಗಳಾಗಿ ಬಳಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧದ ಆರೋಪಗಳ ಮೇಲೆ ಕೇಂದ್ರೀಕರಿಸಿದೆ. ತನ್ನ ವಿರುದ್ಧ ದುರುದ್ದೇಶಪೂರಿತ ಪ್ರಚಾರಕ್ಕಾಗಿ ಬಿಜೆಪಿ 500 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಹೇಮಂತ್ ಸೊರೆನ್ ಆರೋಪಿಸಿದ್ದರು .

ಜೆಎಂಎಂ ವಿರುದ್ಧ ಬಿಜೆಪಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ವ್ಯಾಪಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವಾಗ ಐದು ತಿಂಗಳು ಜೈಲಿನಲ್ಲಿದ್ದ ಸೊರೆನ್ ಅವರನ್ನೇ ಗುರಿಯಾಗಿಸಿಕೊಂಡಿದ್ದರು.

ಜೂನ್‌ನಲ್ಲಿ ಹೇಮಂತ್ ಸೊರೆನ್ ಜಾಮೀನಿನ ಮೇಲೆ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಬಿಜೆಪಿ ಪ್ರಚಾರದ ಪ್ರಮುಖ ಅಂಶವಾಗಿತ್ತು. ಜೆಎಂಎಂ ನೇತೃತ್ವದ ಮೈತ್ರಿಕೂಟವು ಬುಡಕಟ್ಟು ನಾಯಕನನ್ನು ಹೇಗೆ ಅವಮಾನಿಸಿದೆ ಎಂಬ ಹೇಳಿತ್ತು.

ಜೆಎಂಎಂನ ಜನಪ್ರಿಯ ಯೋಜನೆಗಳು

ಜೆಎಂಎಂನ ಜನಪ್ರಿಯ ಯೋಜನೆಗಳಾದ ʼಮೈಯಾನ್ ಸಮ್ಮಾನ್ʼ ಯೋಜನೆ 18-50 ವರ್ಷ ವಯಸ್ಸಿನ ಮಹಿಳೆಯರಿಗೆ 1,000 ರೂ.ಗಳ ಆರ್ಥಿಕ ನೆರವು ನೀಡುತ್ತದೆ . ಫಲಿತಾಂಶದ ನಂತರ ಅದನ್ನು 2,500 ರೂ.ಗೆ ಹೆಚ್ಚಿಸುವ ಭರವಸೆ ನೀಡಲಾಗಿದೆ .

1.75 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗುವ ಉದ್ದೇಶದಿಂದ ಸೊರೆನ್ 2 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಿದ್ದರು.

ಹೆಚ್ಚುವರಿಯಾಗಿ, ಅವರ ಸರ್ಕಾರವು ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಿತ್ತು. ಸಾರ್ವತ್ರಿಕ ಪಿಂಚಣಿಯಂತಹ ಕಲ್ಯಾಣ ಯೋಜನೆಗಳನ್ನು ಪರಿಚಯಿಸುವುದರ ಜೊತೆಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ಪರಿಚಯಿಸಿತು. 2019 ರಲ್ಲಿ ಜೆಎಂಎಂ 30 ಸ್ಥಾನಗಳನ್ನು ಗೆದ್ದಿತ್ತು.

Tags:    

Similar News