Hema Committee fallout: ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಎರಡನೇ ಪ್ರಕರಣ ದಾಖಲು

Update: 2024-08-31 10:59 GMT

ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಕೇರಳ ಪೊಲೀಸರು ಎರಡನೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ನಟನೊಬ್ಬನ ದೂರಿನ ಆಧಾರದ ಮೇಲೆ ಕೋಯಿಕ್ಕೋಡ್‌ನಲ್ಲಿ ಪ್ರಕರಣ ದಾಖಲಾಗಿದೆ. 

ರಂಜಿತ್‌ ಅವರು ತನ್ನನ್ನು ಬೆತ್ತಲೆಯಾಗುವಂತೆ ಒತ್ತಾಯಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಯುವ ನಟ ಆರೋಪಿಸಿದ್ದಾರೆ. 2012ರಲ್ಲಿ ರಂಜಿತ್ ತನ್ನನ್ನು ಆಡಿಷನ್‌ಗಾಗಿ ಬೆಂಗಳೂರಿನ ಹೋಟೆಲ್‌ಗೆ ಕರೆದಿದ್ದರು. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ನಟ ಹೇಳಿದ್ದಾರೆ.

ಇದು ಆಡಿಷನ್‌ನ ಭಾಗ ಎಂದು ಭಾವಿಸಿದ್ದೆ. ರಂಜಿತ್ ಹಲ್ಲೆಯ ಮರುದಿನ ತನಗೆ ಹಣ ನೀಡುವುದಾಗಿ ಹೇಳಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೇರಳ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಪ್ರಕರಣದ ತನಿಖೆ ನಡೆಸಲಿದೆ. 

2009 ರಲ್ಲಿ ರಂಜಿತ್‌ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ, ಈ ವಾರದ ಆರಂಭದಲ್ಲಿ ಬಂಗಾಳಿ ನಟಿ ಶ್ರೀಲೇಖಾ ಮಿತ್ರ ಅವರು ರಂಜಿತ್ ವಿರುದ್ಧ ಮೊದಲ ಪ್ರಕರಣ ದಾಖಲಿಸಿದ್ದರು.

Tags:    

Similar News