ದೆಹಲಿಯ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಭಾನುವಾರದ ಭೋಜನ ಸವಿದ ಗಾಂಧಿ ಕುಟುಂಬ

ಶುಕ್ರವಾರದವರೆಗೆ ಸಂಸತ್‌ ಅಧಿವೇಶನ ನಡೆದಿತ್ತು. ಈ ಅವಧಿಯಲ್ಲಿ ಸೋನಿಯಾ, ರಾಹುಲ್‌ ಮತ್ತು ಪ್ರಿಯಾಂಕ ಕಲಾಪಗಳಲ್ಲಿ ಪಾಲ್ಗೊಂಡಿದ್ದರು. ಇದೀಗ ಬಿಡುವಿನ ಸಮಯ ಅವರು ಊಟ ಮಾಡಲು ಜತೆಯಾಗಿ ಹೋಗಿದ್ದಾರೆ.

Update: 2024-12-23 05:59 GMT
ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಸೋನಿಯಾ ಗಾಂಧಿ ಕುಟುಂಬ ಊಟ ಸವಿದರು.

ದೆಹಲಿಯಲ್ಲಿರುವ ಕನೌಟ್‌ ಪ್ಲೇಸ್‌ನಲ್ಲಿರುವ ಪ್ರಸಿದ್ಧ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಸೋನಿಯಾ ಗಾಂಧಿ ಕುಟುಂಬ ಭಾನುವಾರದ ಭೋಜನದ ಸಮಯ ಕಳೆದಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಅವರ ಪತಿ ರಾಬರ್ಟ್ ವಾದ್ರಾ, ಮಗಳು ಮಿರಾಯಾ ಮತ್ತು ಅತ್ತೆ ಮೌರೀನ್ ವಾದ್ರಾ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದಾರೆ.

ರಾಹುಲ್ ಗಾಂಧಿ ಮಧ್ಯಾಹ್ನದ ಊಟದ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, "ಐಕಾನಿಕ್ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಕುಟುಂಬದ ಜತೆ ಊಟ ಮಾಡಿದೆವು. ನೀವು ಬಂದರೂ ಚೋಲೆ, ಬಟುರೆ ಸವಿಯಿರಿ" ಈ ರೆಸ್ಟೋರೆಂಟ್ ಪಾಕಶಾಲೆಯ ವೈವಿಧ್ಯತೆಗೆ ಹೆಸರುವಾಸಿ. ವಿಶೇಷವಾಗಿ ಚೋಲೆ ಬಟುರೆ ಹೆಸರುವಾಸಿಯಾಗಿದೆ.  

Tags:    

Similar News