ಕೇರಳ: ರಥದ ಚಕ್ರಕ್ಕೆ ಸಿಲುಕಿ ಮಗು ಸಾವು

Update: 2024-03-25 08:48 GMT

ಕೊಲ್ಲಂ, ಮಾ.25- ಸಮೀಪದ ಕೊಟ್ಟನ್‌ಕುಲಂಗರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಐದು ವರ್ಷದ ಮಗುವೊಂದು ನಿನ್ನೆ ರಾತ್ರಿ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚವರ ನಿವಾಸಿಗಳಾದ ದಂಪತಿಯ ಪುತ್ರಿ ಕ್ಷೇತ್ರ ಪ್ರಾಣ ಕಳೆದುಕೊಂಡವಳು. ʻಭಾನುವಾರ ರಾತ್ರಿ 11.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ರಥ ಎಳೆಯುತ್ತಿದ್ದ ಬಯಲಿನಲ್ಲಿ ಘಟನೆ ನಡೆದಿದೆ. ಬಾಲಕಿ ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಳುʼ ಎಂದು ಪೊಲೀಸರು ತಿಳಿಸಿದ್ದಾರೆ. 

ʻಕೆಲವೊಮ್ಮೆ ಮಕ್ಕಳು ರಥಕ್ಕೆ ಕಟ್ಟಿದ ಹಗ್ಗವನ್ನು ಎಳೆಯುತ್ತಾರೆ. ಅವಳು ಆಕಸ್ಮಿಕವಾಗಿ ಬಿದ್ದಿದ್ದಾಳೆಂದು ತೋರುತ್ತದೆʼ ಎಂದು ಪೊಲೀಸರು ಹೇಳಿದರು. ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ಪ್ರಯೋಜನ ಆಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. 

Tags:    

Similar News