ತೆಯ್ಯಂಕೆಟ್ಟು ಉತ್ಸವ ದುರಂತ| ಪಟಾಕಿ ಗೋದಾಮು ಸ್ಫೋಟ;150 ಮಂದಿಗೆ ಗಾಯ, ಎಂಟು ಮಂದಿ ಚಿಂತಾಜನಕ

ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂಕಟ್ಟೆ ಮಹೋತ್ಸವದ ವೇಳೆ ಪಟಾಕಿ ಸಿಡಿಸುವಾಗ ಪಕ್ಕದಲ್ಲೇ ಇದ್ದ ಪಟಾಕಿ ಗೋದಾಮಿಗೆ ಕಿಡಿ ತಾಕಿ ಗೋದಾಮು ಸ್ಫೋಟಿಸಿದೆ.;

Update: 2024-10-29 04:11 GMT

ಕೇರಳದ ಕಾಸರಗೋಡಿನ ನೀಲೇಶ್ವರಂ ಬಳಿ ತೆಯ್ಯಂಕೆಟ್ಟು ಉತ್ಸವದ ವೇಳೆ ಪಟಾಕಿ ಗೋದಾಮಿಗೆ ಬೆಂಕಿಯ ಕಿಡಿ ತಗುಲಿ ಸ್ಫೋಟಿಸಿದ ಪರಿಣಾಮ 150 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. 

ನೀಲೇಶ್ವರಂ ಸಮೀಪದ ವೀರನಾರ್ಕವ್‌ ದೇವಸ್ಥಾನದಲ್ಲಿ ಸೋಮವಾರ ಮಧ್ಯರಾತ್ರಿ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂಕಟ್ಟೆ ಮಹೋತ್ಸವ ನಡೆಯುತ್ತಿತ್ತು. ಈ ವೇಳೆ ಪಟಾಕಿಗಳನ್ನು ಸಿಡಿಸುವಾಗ ಪಕ್ಕದಲ್ಲೇ ಇದ್ದ ಪಟಾಕಿ ಗೋದಾಮಿಗೆ ಕಿಡಿ ತಾಕಿದೆ. ಪರಿಣಾಮ ಗೋದಾಮಿನಲ್ಲಿ ದೊಡ್ಡ ಸ್ಫೋಟ ಸಂಭವಿಸಿ, ಅದರ ಕಿಡಿಗಳು ಭಕ್ತರ ಮೇಲೆ ಬಿದ್ದಿವೆ.

ತೆಯ್ಯಂಕೆಟ್ಟು ಉತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನರು ವೀರನಾರ್ಕವ್‌ ದೇವಸ್ಥಾನದಲ್ಲಿ ಸೇರಿದ್ದರು. ಪಟಾಕಿ ಕಿಡಿಗಳು ಸೋಕಿ ಕೆಲವರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಭಕ್ತರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಗಾಯಾಳುಗಳ ಪೈಕಿ ಎಂಟು ಜನರ ಸ್ಥಿತಿ ಗಂಭೀರವಾಗಿದೆ ಎಂದು ಕೇರಳ ಪೋಲಿಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಸ್ಪೋಟದ ತೀವ್ರತೆಗೆ ಪಟಾಕಿ ಗೋದಾಮಿನ ಗೋಡೆಗಳು ಛಿದ್ರಗೊಂಡಿವೆ.

Tags:    

Similar News