ರೈತ ಹೋರಾಟ | ದೆಹಲಿಯಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144 ಜಾರಿ

Update: 2024-02-12 08:10 GMT
Image courtesy:Wikimedia

ನವದೆಹಲಿ, ಫೆ. 12 (ಪಿಟಿಐ): ರೈತರ ಜಾಥಾದಿಂದ ವ್ಯಾಪಕ ಉದ್ವಿಗ್ನತೆ ಮತ್ತು ʻಸಾಮಾಜಿಕ ಅಶಾಂತಿʼ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ, ದೆಹಲಿ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಆದೇಶ ಒಂದು ತಿಂಗಳ ಕಾಲ ಜಾರಿಯಲ್ಲಿರುತ್ತದೆ.

ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸೋಮವಾರ ಹೊರಡಿಸಿದ ಆದೇಶದನ್ವಯ, ಯಾವುದೇ ಮೆರವಣಿಗೆ, ಪ್ರತಿಭಟನೆ ಮತ್ತು ರಸ್ತೆ ತಡೆಗಳನ್ನುನಿಷೇಧಿಸಲಾಗಿದೆ. ದೆಹಲಿ ಪೊಲೀಸರು ರಾಜಧಾನಿಯ ಗಡಿಯನ್ನು ದಾಟಲು ಪ್ರಯತ್ನಿಸುವ ಟ್ರ್ಯಾಕ್ಟರ್‌ಗಳ ಮೇಲೆ ನಿಷೇಧ ಹೇರಲಾಗಿದೆ. ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣದ ರೈತರು ದೆಹಲಿ ಪ್ರವೇಶಿಸುವ ನಿರೀಕ್ಷೆಯಿದೆ. 

Similar News