ದುರ್ಗಾ ಪೂಜೆ ಉಡುಗೊರೆ ; ಕೊಲ್ಕತ್ತಾಗೆ ಬಂದ ಬಾಂಗ್ಲಾದ ಪದ್ಮ ಹಿಲ್ಸಾ ಮೀನು ಪೂರೈಕೆ

ಬಾಂಗ್ಲಾದೇಶ ಇತ್ತೀಚೆಗೆ ದುರ್ಗಾ ಪೂಜೆ ಅಂಗವಾಗಿ ಭಾರತಕ್ಕೆ 1,200 ಟನ್ ಹಿಲ್ಸಾ ಮೀನುಗಳನ್ನು ರಪ್ತು ಮಾಡಲು ನಿರ್ಧರಿಸಿತ್ತು. ಸೆ.16 ಮತ್ತು ಅ.5 ರ ನಡುವೆ ಈ ಮೀನುಗಳನ್ನು ಸಾಗಣೆ ಮಾಡಲು ಗಡುವು ನೀಡಲಾಗಿದೆ.;

Update: 2025-09-17 12:37 GMT

ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 5 ರ ನಡುವೆ 1200 ಟನ್ ಹಿಲ್ಸಾ ಭಾರತಕ್ಕೆ ಬರುವ ನಿರೀಕ್ಷೆಯಿದೆ.


Click the Play button to listen to article

ದುರ್ಗಾ ಪೂಜೆಗೂ ಮುನ್ನ ಬಾಂಗ್ಲಾದೇಶದಿಂದ ʼಹಿಲ್ಸಾ ಮೀನುʼಗಳನ್ನು ಒಳಗೊಂಡ ಎಂಟು ಟ್ರಕ್‌ಗಳು ಭಾರತ-ಬಾಂಗ್ಲಾದೇಶ ಗಡಿ ತಲುಪಿವೆ. 

ಬಾಂಗ್ಲಾದೇಶವು ಇತ್ತೀಚೆಗೆ ದುರ್ಗಾ ಪೂಜೆ ಅಂಗವಾಗಿ ಭಾರತಕ್ಕೆ 1,200 ಟನ್ ಹಿಲ್ಸಾ ಮೀನುಗಳನ್ನು ರಪ್ತು ಮಾಡಲು ಒಪ್ಪಿಕೊಂಡಿತ್ತು. ಅದರಂತೆ ಸೆ.16 ರಿಂದ ಅ.5 ರ ಮಧ್ಯೆ ಮೀನುಗಳನ್ನು ಪೂರೈಸಬೇಕಾಗಿದೆ. ಪ್ರತಿ ಟ್ರಕ್‌ಗೆ ಪದ್ಮಾ ನದಿಯಿಂದ ಸುಮಾರು ನಾಲ್ಕು ಟನ್ ಮೀನುಗಳನ್ನು ತುಂಬಿಸಲಾಗುತ್ತದೆ.

ಬುಧವಾರ ರಾತ್ರಿ ವೇಳೆಗೆ ಈ ಸರಕು ಕೋಲ್ಕತ್ತಾದ ಸಗಟು ಮಾರುಕಟ್ಟೆಗಳಿಗೆ ತಲುಪಲಿದೆ. ಇನ್ನು ಪ್ರತಿದಿನ ಬಾಂಗ್ಲಾದೇಶದಿಂದ ಮೀನುಗಳು ಕೋಲ್ಕತ್ತಾ ಮಾರುಕಟ್ಟೆಗಳಿಗೆ ಬರಲಿವೆ ಎಂದು ಮೀನು ಆಮದುದಾರರ ಸಂಘದ ಕಾರ್ಯದರ್ಶಿ ಸೈಯದ್ ಅನ್ವರ್ ಮಕ್ಸೂದ್ ತಿಳಿಸಿದ್ದಾರೆ. 

ಪದ್ಮ ಹಿಲ್ಸಾ ಕೆಜಿಗೆ 1,800 ರೂ.

ಗ್ರಾಹಕರು 'ಪದ್ಮ ಹಿಲ್ಸಾ' ಮೀನು ಒಂದು ಕೆ.ಜಿ.ಗೆ ಸುಮಾರು 1,800 ರೂ. ಪಾವತಿಸಬೇಕಾಗಿದೆ. ಬಾಂಗ್ಲಾದೇಶವು ಈ ಹಿಂದೆ ಸಾಗಣೆದಾರರು ತನ್ನ ರಫ್ತು ನೀತಿ 2024-27 ಅನ್ನು ಅನುಸರಿಸಬೇಕು ಎಂದು ಹೇಳಿತ್ತು. ಕನಿಷ್ಠ ರಫ್ತು ಬೆಲೆಯನ್ನು ಕೆಜಿಗೆ 12.5 ಡಾಲರ್‌ಗೆ ನಿಗದಿಪಡಿಸಬೇಕು ಎಂದು ಸೂಚಿಸಿತ್ತು. ಅಲ್ಲದೇ ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 5 ರವರೆಗೆ ಮಾತ್ರ ಮೀನುಗಳನ್ನು ರಫ್ತು ಮಾಡಬೇಕು ಎಂದು ಹೇಳಿತ್ತು. 

ಏನಿದು ಪದ್ಮ ಹಿಲ್ಸಾ ಮೀನಿನ ವಿಶೇಷ

ಬಾಂಗ್ಲಾದ ಪದ್ಮಾ ನದಿಯಲ್ಲಿ ದೊರೆಯುವ ಮೀನಿನ ಜಾತಿ. ಇದು ತನ್ನ ವಿಶಿಷ್ಟ ರುಚಿ, ಸುವಾಸನೆ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯಿಂದಾಗಿ ಹೆಸರುವಾಸಿಯಾಗಿದೆ. ಪದ್ಮಾ ಹಿಲ್ಸಾ ಮೀನನ್ನು ಹೆಚ್ಚಾಗಿ ದುರ್ಗಾ ಪೂಜೆ ಮತ್ತು ಇತರ ಹಬ್ಬಗಳಲ್ಲಿ ಪ್ರಮುಖ ಖಾದ್ಯವಾಗಿ ಬಳಸಲಾಗುತ್ತದೆ. ಈ ಮೀನು ಬಂಗಾಳಿ ಭಕ್ಷ್ಯಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.  

ದುರ್ಗಾ ಪೂಜೆಯ ವೇಳೆ ದೇವರಿಗೆ ನೈವೇದ್ಯವಾಗಿಯೂ ಬಳಸಲಾಗುತ್ತದೆ. ಪಶ್ಚಿಮ ಬಂಗಾಳ, ದೆಹಲಿ, ಬೆಂಗಳೂರು ಮತ್ತು ಮುಂಬೈನಂತಹ ನಗರಗಳಲ್ಲಿ ಹಿಲ್ಸಾ ಮೀನಿಗೆ ಹೆಚ್ಚು ಬೇಡಿಕೆಯಿದೆ. 

Tags:    

Similar News