ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ

Update: 2024-06-01 13:22 GMT

ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಶನಿವಾರ (ಜೂನ್ 1) ಎಲ್ಲಾ ಮಾದರಿಯ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸಿದ್ದಾರೆ.

ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತಿದ್ದರು. 

ಕಾರ್ತಿಕ್ ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಕ್ರಿಕೆಟ್ ಆಟದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಬರೆದಿದ್ದಾರೆ. ತಮ್ಮ 39 ನೇ ಹುಟ್ಟುಹಬ್ಬದಂದು ನಿವೃತ್ತಿಯ ಘೋಷಣೆ ಮಾಡಿದ್ದಾರೆ. 

ʻನಾನು ಅಧಿಕೃತವಾಗಿ ನನ್ನ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ. ನನ್ನ ಆಟದ ದಿನಗಳನ್ನು ಹಿಂದೆ ಬಿಟ್ಟು ಮುಂದಿನ ಸವಾಲುಗಳಿಗೆ ಸಿದ್ಧವಾಗುತ್ತಿದ್ದೇನೆ,ʼ ಎಂದಿದ್ದಾರೆ.

Tags:    

Similar News