ಉತ್ತರ ಭಾರತದಲ್ಲಿ ದಟ್ಟ ಮಂಜು; 100ಕ್ಕೂ ಹೆಚ್ಚು ವಿಮಾನಗಳ ಹಾರಾಟಕ್ಕೆ ಅಡಚಣೆ
ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್) ಬೆಳಿಗ್ಗೆ 6 ಗಂಟೆಯ ಬುಲೆಟಿನ್‌ನಲ್ಲಿ ವಿಮಾನ ನಿರ್ಗಮನದಲ್ಲಿ ವಿಳಂಬವಾಗಿರುವುದನ್ನು ಪ್ರಕಟಿಸಿತು.;
ದೆಹಲಿ ನಿವಾಸಿಗಳು ಚಳಿಯ ಬೆಳಿಗ್ಗೆ ಎಚ್ಚರಗೊಂಡರೆ, ದಟ್ಟವಾದ ಮಂಜು ಶುಕ್ರವಾರ (ಜನವರಿ 10) ರಾಜಧಾನಿಯ ಅನೇಕ ಭಾಗಗಳಲ್ಲಿ ಗೋಚರತೆ ಕಡಿಮೆ ಮಾಡಿತು. ಇದು ವಿಮಾನಯಾನದ ಮೇಲೆ ಪರಿಣಾಮ ಬೀರಿತು.
ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್) ಬೆಳಿಗ್ಗೆ 6 ಗಂಟೆಯ ಬುಲೆಟಿನ್‌ನಲ್ಲಿ ವಿಮಾನ ನಿರ್ಗಮನದಲ್ಲಿ ವಿಳಂಬವಾಗಿರುವುದನ್ನು ಪ್ರಕಟಿಸಿತು. ಅದೇ ರೀತಿ ರೈಲು ಕಾರ್ಯಾಚರಣೆಯೂ ವಿಳಂಬವಾಯಿತು.
ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ Flightradar.com ಪ್ರಕಾರ ಮಂಜಿನಿಂದ ಉಂಟಾಗಿರುವ ಗೋಚರತೆ ಸಮಸ್ಯೆಗಳಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ 100 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ.
"ದಟ್ಟ ಮಂಜಿನಿಂದಾಗಿ, ವಿಮಾನ ನಿರ್ಗಮನದ ಮೇಲೆ ಪರಿಣಾಮ ಬೀರಿದೆ, ಆದಾಗ್ಯೂ, ಸಿಎಟಿ 3 ಹೊಂದಿರುವ ವಿಮಾನಗಳು ದೆಹಲಿ ವಿಮಾನ ನಿಲ್ದಾಣದಿಂದ ಇಳಿಯಲು ಮತ್ತು ನಿರ್ಗಮಿಸಲು ಸಾಧ್ಯವಾಗಿದೆ " ಎಂದು ವಿಮಾನ ನಿಲ್ದಾಣ ಆಪರೇಟರ್ ಡಿಐಎಎಲ್ ಬೆಳಿಗ್ಗೆ 5.52 ಕ್ಕೆ ಪೋಸ್ಟ್‌ನಲ್ಲಿ ತಿಳಿಸಿದೆ.
ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಐಜಿಐಎ) ಪ್ರತಿದಿನ ಸುಮಾರು 1,300 ವಿಮಾನಗಳು ಹಾರಾಟ ನಡೆಸುತ್ತಿವೆ ಎಂದ ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಅನೇಕ ಭಾಗಗಳು ಶುಕ್ರವಾರ ಅತ್ಯಂತ ದಟ್ಟವಾದ ಮಂಜಿಗೆ ಸಾಕ್ಷಿಯಾಗಿವೆ. ದೆಹಲಿಯಲ್ಲಿ ಶುಕ್ರವಾರ 9.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ವಾಯುಗುಣಮಟ್ಟ ಕುಸಿತ
ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟವೂ ಕಳಪೆಯಾಗಿದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ 408ರ ಸೂಚ್ಯಂಕ ಹೊಂದಿತ್ತು. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಗುರುವಾರ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್ಎಪಿ) ನ 3 ನೇ ಹಂತದ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿತ್ತು.