ʻಕಾಂಗ್ರೆಸ್ ಸರ್ಕಾರವು ದೇಶದ ಎಲ್ಲ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಪಡಿತರ ನೀಡಲಿದೆʼ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದರು.
ʻದೇಶದ ಬಡ ಕುಟುಂಬಗಳಿಗಾಗಿ ಕಾಂಗ್ರೆಸ್ ಮತ್ತೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ನಮ್ಮ ಸರ್ಕಾರ ಪ್ರತಿ ತಿಂಗಳು 5 ಕೆಜಿ ಬದಲು 10 ಕೆಜಿ ಪಡಿತರ ಉಚಿತವಾಗಿ ನೀಡಲಿದೆ.ಯುಪಿಎ ಸರ್ಕಾರದ ಅವಧಿಯಲ್ಲಿ ʻಆಹಾರ ಭದ್ರತಾ ಕಾಯ್ದೆ' ಮೂಲಕ ಆಹಾರದ ಹಕ್ಕಿಗೆ ಕಾನೂನು ಸ್ಥಾನಮಾನ ನೀಡಿದ್ದೆವು. 10 ಕೆಜಿ ಪಡಿತರ ಈ ದಿಕ್ಕಿನಲ್ಲಿ ಮುಂದಿನ ಹೆಜ್ಜೆ,ʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಮೋದಿ ವರ್ಸಸ್ ರಾಹುಲ್: ʻ 10 ಕೆಜಿ ಪಡಿತರ ಮತ್ತು ಮಾಸಿಕ 8,500 ರೂ. ನೆರವು ಶಿಕ್ಷಣ ಮತ್ತು ಸ್ವಯಂಉದ್ಯೋಗವನ್ನು ಉತ್ತೇಜಿಸು ತ್ತವೆ. ಲಕ್ಷಾಂತರ ಕುಟುಂಬಗಳು ಬಡತನದಿಂದ ಹೊರಬರಲು ಮತ್ತು ದೇಶದ ಆರ್ಥಿಕ ಬಲ ಹೆಚ್ಚಿಸಲು ನೆರವಾತ್ತವೆ. ನರೇಂದ್ರ ಮೋದಿ ಅವರು 20-25 ಬಿಲಿಯನೇರ್‌ಗಳನ್ನು ಮಾಡಿದರು ಮತ್ತು 'ಅದಾನಿ' ಸರ್ಕಾರವನ್ನು ನಡೆಸಿದರು. ನಾವು ಕೋಟಿಗಟ್ಟಲೆ ಲಕ್ಷಪತಿಗಳನ್ನು ಸೃಷ್ಟಿಸುತ್ತೇವೆ ಮತ್ತು 'ಭಾರತೀಯʼರ ಸರ್ಕಾರವನ್ನು ನಡೆಸುತ್ತೇವೆʼ ಎಂದು ರಾಹುಲ್ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಉಚಿತ ಪಡಿತರ ನೀಡುವುದಾಗಿ ಇತ್ತೀಚೆಗೆ ಘೋಷಿಸಿದ್ದರು .