ಅಂಬೇಡ್ಕರ್ ಸಂವಿಧಾನವನ್ನು ತಿರಸ್ಕರಿಸಲು ಬಿಜೆಪಿ, ಆರ್‌ಎಸ್‌ಎಸ್‌ ಯತ್ನ: ಕಾಂಗ್ರೆಸ್ ಆರೋಪ

ಸಂವಿಧಾನ ಮತ್ತು ಮೀಸಲಾತಿಯ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನೇಕ ಅಸಮಾಧಾನಗಳಿವೆ ಎಂದು ಆರೋಪಿಸಿದ ರಮೇಶ್, ಇದು ಐತಿಹಾಸಿಕ ದಾಖಲೆಯ ವಿಷಯ ಎಂದು ಹೇಳಿದರು.;

Update: 2024-11-08 14:10 GMT
ಜೈರಾಮ್‌ ರಮೇಶ್‌

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ನಿರ್ಮೂಲನೆ ಮಾಡಲು ಮುಂದಾಗಿವೆ. ಅವರು ʼಮನುಸ್ಮೃತಿʼ ಗೆ ತಕ್ಕ ಹಾಗೆ ಸಂವಿಧಾನ ರಚಿಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ ಶುಕ್ರವಾರ (ನವೆಂಬರ್‌ 08) ಆರೋಪಿಸಿದೆ. ಕಾಂಗ್ರೆಸ್‌ ಜಾತಿಯ ಆಧಾರದಲ್ಲಿ ಭಾರತವನ್ನು ವಿಭಜನೆ ಮಾಡಲು ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಈ ಹೇಳಕೆ ನೀಡಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸಂವಿಧಾನದ ಬಗ್ಗೆ ಅನೇಕ ಅಸಮಾಧಾನಗಳನ್ನು ಹೊಂದಿದೆ. ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಅವರಿಗೆ ಇಷ್ಟವಿಲ್ಲದ ಸಂಗತಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಸಂವಿಧಾನ ಮತ್ತು ಮೀಸಲಾತಿಯ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನೇಕ ಅಸಮಾಧಾನಗಳಿವೆ ಎಂದು ಆರೋಪಿಸಿದ ರಮೇಶ್, ಇದು ಐತಿಹಾಸಿಕ ದಾಖಲೆಯ ವಿಷಯ ಎಂದು ಹೇಳಿದರು.

1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆ ಸಂವಿಧಾನವನ್ನು ಅಂಗೀಕರಿಸಿದ ನಾಲ್ಕು ದಿನಗಳಲ್ಲಿ ಆರೆಸ್ಸೆಸ್ ಮುಖವಾಣಿ ಆರ್ಗನೈಸರ್‌ ತೀವ್ರ ಟೀಕೆ ಮಾಡಿತ್ತು.

"ಆ ವರ್ಷದ ನವೆಂಬರ್ 30ರ ಸಂಚಿಕೆಯಲ್ಲಿ ಆರ್ಗನೈಸರ್ 'ಭಾರತದ ಹೊಸ ಸಂವಿಧಾನದ ಬಗ್ಗೆ ಕೆಟ್ಟ ವಿಷಯವೆಂದರೆ ಅದರಲ್ಲಿ ಭಾರತೀಯವಾದುದು ಏನೂ ಇಲ್ಲ. ಇಂದಿಗೂ, ಮನುಸ್ಮೃತಿಯಲ್ಲಿ ನಿರೂಪಿಸಲಾದ ‌ನಿಯಮಗಳು ಪ್ರಪಂಚದ ಮೆಚ್ಚುಗೆ ಪಡೆದಿವೆ. ನಮ್ಮ ಸಾಂವಿಧಾನಿಕ ಪಂಡಿತರಿಗೆ ಅದು ಏನೂ ಅರ್ಥವಾಗಿಲ್ಲ ಎಂದು ಬರೆದಿದ್ದರು " ಎಂಬುದಾಗಿ ಕಾಂಗ್ರೆಸ್ ನಾಯಕ ರಮೇಶ್‌ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮನುಸ್ಮೃತಿ ಸಿದ್ದಾಂತ

"ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ತೊಡೆದುಹಾಕಲು ಬಯಸುತ್ತಿವ. ಮನುಸ್ಮೃತಿಯ ಸಿದ್ಧಾಂತ ಆಧರಿಸಿದ ಸಂವಿಧಾನದಿಂದ ಬದಲಾಯಿಸಲು ಬಯಸುತ್ತವೆ" ಎಂದು ಅವರು ಆರೋಪಿಸಿದರು.

"ಈ ಕಾರಣಕ್ಕಾಗಿಯೇ ಮಹಾರಾಷ್ಟ್ರದ ಬಿಜೆಪಿ ನಾಯಕ ಫಡ್ನವೀಸ್ ಅವರು ಸಂವಿಧಾನವನ್ನು 'ನಗರ ನಕ್ಸಲರಿಗೆ' ಸಂಬಂಧಿಸಿದ್ದುʼ ಎಂದು ಟೀಕಿಸಿದರು. ಜೈವಿಕವಲ್ಲದ ಪ್ರಧಾನಿ ಜಾತಿ ಜನಗಣತಿಯನ್ನು, ಬಾಬಾ ಸಾಹೇಬ್ ಅವರ ಸಂವಿಧಾನವನ್ನು ರಾಷ್ಟ್ರವನ್ನು ವಿಭಜಿಸುವ ಪ್ರಯತ್ನ ಎಂದು ಕರೆದಿದ್ದಾರೆ. ಇದು ಮೋದಿ ಶೈಲಿಯ ವಿಶಿಷ್ಟ ಸುಳ್ಳು" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.

ಸಂಪೂರ್ಣ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಜಾತಿ ಜನಗಣತಿ, ನಂತರ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯ ಮೇಲಿನ ಶೇಕಡಾ 50 ರಷ್ಟು ಮಿತಿ ತೆಗೆದುಹಾಕುವುದು ಅತ್ಯಗತ್ಯ ಎಂದು ರಮೇಶ್ ಪ್ರತಿಪಾದಿಸಿದ್ದಾರೆ.

Tags:    

Similar News