ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್​ಎಫ್​ ಯೋಧನೆಗೆ ಚಿತ್ರ ಹಿಂಸೆ ನೀಡಿದ್ದ ಪಾಕಿಸ್ತಾನದ ಸೇನೆ

ಪೂರ್ಣಂ ಶಾ ಅವರ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಅವರನ್ನು ಎಲ್ಲಿಗೂ ಕರೆದುಕೊಂಡು ಹೋಗಬೇಕಾದರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಕರೆದೊಯ್ದುತ್ತಿದ್ದರು. ಅವರನ್ನು ದೈಹಿಕವಾಗಿ ಹಿಂಸಿಸಲಾಗಿಲ್ಲವಾದರೂ, ಗಡಿಯಲ್ಲಿ ಬಿಎಸ್‌ಎಫ್ ನಿಯೋಜನೆಯ ಬಗ್ಗೆ ಅವರನ್ನು ಪ್ರಶ್ನಿಸಲಾಗಿತ್ತು.;

Update: 2025-05-15 12:10 GMT

ಬಿಎಸ್‌ಎಫ್ ಜವಾನ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಅವಕಾಶ ನೀಡುವ ಮೊದಲು ಸಮಗ್ರ ವಿಚಾರಣೆಗೆ ಒಳಗಾದರು. 

ಏಪ್ರಿಲ್ 23 ರಂದು ಫಿರೋಜ್‌ಪುರ ವಲಯದಲ್ಲಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ದಾಟಿದ್ದ ಬಿಎಸ್‌ಎಫ್ ಜವಾನ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕ್ ಸೇನೆ ಬಂಧಿಸಿತ್ತು. ಬುಧವಾರ (ಮೇ 14) ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಿದೆ.

ಆದರೆ ಇದೀಗ ಬಂಧನದಲ್ಲಿದ್ದ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕಿಸ್ತಾನಿಗಳು ಹಲವು ರೀತಿಯ ದೌರ್ಜನ್ಯಗಳನ್ನು ಎಸಗಿದ್ದು, ಅವರಿಗೆ ನಿದ್ದೆ ಮಾಡಲು ಬಿಡಲಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಪೂರ್ಣಂ ಶಾ ಅವರ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಅವರನ್ನು ಎಲ್ಲಿಗೂ ಕರೆದುಕೊಂಡು ಹೋಗಬೇಕಾದರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಕರೆದೊಯ್ದುತ್ತಿದ್ದರು. ಅವರನ್ನು ದೈಹಿಕವಾಗಿ ಹಿಂಸಿಸಲಾಗಿಲ್ಲವಾದರೂ, ಗಡಿಯಲ್ಲಿ ಬಿಎಸ್‌ಎಫ್ ನಿಯೋಜನೆಯ ಬಗ್ಗೆ ಅವರನ್ನು ಪ್ರಶ್ನಿಸಲಾಗಿತ್ತು. ಅವರಿಗೆ ಹಲ್ಲುಜ್ಜಲು ಕೂಡ ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.

ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್ ನಿಯೋಜನೆಗೆ ಸಂಬಂಧಿಸಿದಂತೆ ನಾಗರಿಕ ಉಡುಪಿನಲ್ಲಿರುವ ಪಾಕಿಸ್ತಾನಿ ಅಧಿಕಾರಿಗಳು ಪೂರ್ಣಮ್ ಕುಮಾರ್ ಶಾ ಅವರನ್ನು ವಿಚಾರಣೆ ನಡೆಸಿದರು. ಪಾಕಿಸ್ತಾನಿ ಅಧಿಕಾರಿಗಳು ಅಂತರರಾಷ್ಟ್ರೀಯ ಗಡಿಯಲ್ಲಿ ನಿಯೋಜಿಸಲಾದ ಹಿರಿಯ ಬಿಎಸ್‌ಎಫ್ ಅಧಿಕಾರಿಗಳ ಬಗ್ಗೆ ವಿವರಗಳನ್ನು ಕೋರಿದ್ದಲ್ಲದೆ, ಅವರ ಫೋನ್ ಸಂಖ್ಯೆಗಳನ್ನು ನೀಡುವಂತೆಯೂ ಕೇಳಿದ್ದರು. ಆದರೆ ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ ಸಮಯದಲ್ಲಿ ಕುಮಾರ್ ಶಾ ಅವರ ಬಳಿ ಸೆಲ್ ಫೋನ್ ಇರಲಿಲ್ಲ. ಹೀಗಾಗಿ ಅವರಿಗೆ ಸಂಖ್ಯೆಗಳನ್ನು ನೀಡಲು ಸಾಧ್ಯವಾಗಲಿಲ್ಲ. ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್‌ಎಫ್ ಜವಾನನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬಳಿಕ ಶಾ ಅವರಿಗೆ ಅವರ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು.

ಮೂರು ಅಜ್ಞಾತ ಸ್ಥಳಗಳಿಗೆ ಕರೆದೊಯ್ದ ಪಾಕಿಸ್ತಾನ ಸೇನೆ

24ನೇ ಬಿಎಸ್‌ಎಫ್ ಬೆಟಾಲಿಯನ್‌ನ ಸೈನಿಕ ಪೂರ್ಣಂ ಅವರನ್ನು ಸೆರೆಯಲ್ಲಿದ್ದಾಗ ಪಾಕಿಸ್ತಾನದ ಮೂರು ಅಜ್ಞಾತ ಸ್ಥಳಗಳಿಗೆ ಕರೆದೊಯ್ದಿದ್ದರು. ಈ ಸ್ಥಳಗಳಲ್ಲಿ ಒಂದು ವಾಯುನೆಲೆಯ ಬಳಿ ಇತ್ತು. ಅಲ್ಲಿಂದ ಅವರಿಗೆ ವಿಮಾನಗಳ ಶಬ್ದಗಳು ಕೇಳಿಸುತ್ತಿದ್ದವು. ಈ ಸಮಯದಲ್ಲಿ ಸೈನಿಕನ ಕಣ್ಣುಗಳು ಬಟ್ಟೆ ಕಟ್ಟಲ್ಪಟ್ಟಿದ್ದವು. ಒಂದು ಹಂತದಲ್ಲಿ ಅವರನ್ನು ಜೈಲಿನ ಕೋಣೆಯಲ್ಲಿಯೂ ಇರಿಸಲಾಗಿತ್ತು ಎಂದು ತಿಳಿದುಬಂದಿದೆ.

ಕುಮಾರ್ ಶಾ ಅವರು ಭಾರತಕ್ಕೆ ಬಂದ ಬಳಿಕ ಅವರನ್ನು ಔಪಚಾರಿಕವಾಗಿ ವಿಚಾರಣೆ ನಡೆಸಲಾಗಿತ್ತು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆವರು ದೈಹಿಕ ಮತ್ತು ಮಾನಸಿಕ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಶಿಷ್ಟಾಚಾರದ ಪ್ರಕಾರ, ಪಾಕಿಸ್ತಾನದ ವಶದಲ್ಲಿದ್ದಾಗ ಅವರು ಧರಿಸಿದ್ದ ಬಟ್ಟೆಗಳನ್ನು ಪರೀಕ್ಷಿಸಿ ತೆಗೆದುಹಾಕಲಾಯಿತು.

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಮೂರು ದಿನಗಳ ಬಳಿಕ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯವರಾದ ಬಿಎಸ್‌ಎಫ್ ಜವಾನನನ್ನು ಪಾಕಿಸ್ತಾನಿ ಅಧಿಕಾರಿಗಳು ಬಿಡುಗಡೆ ಮಾಡಿದರು. ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್‌ಪೋಸ್ಟ್‌ನಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ಅವರನ್ನು ಬಿಎಸ್‌ಎಫ್‌ಗೆ ಹಸ್ತಾಂತರಿಸಲಾಗಿತ್ತು.

Tags:    

Similar News