ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ; ಪಟ್ಟಿಯಲ್ಲಿದೆ ಬೆಂಗಳೂರಿನ ರೋರಿಚ್ ಎಸ್ಟೇಟ್
ಪ್ರವಾಸೋದ್ಯಮ ಸಚಿವಾಲಯವು ಎಸ್ಎಎಸ್‌ಡಿ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ. ಯೋಜನಾ ವೆಚ್ಚವನ್ನು ರೂಪಿಸಿ ಸಚಿವಾಲಯಕ್ಕೆ ಸಲ್ಲಿಸಲು ಹೇಳಿದೆ.;
ದೇಶದ ರಾಜ್ಯಗಳಲ್ಲಿ ಹೆಚ್ಚು ಪರಿಚಿತವಲ್ಲದ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ 3,295 ಕೋಟಿ ರೂ.ಗೂ ಅನುದಾನಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಬೆಂಗಳೂರು ಸಮೀಪದ ರೋರಿಚ್ ಎಸ್ಟೇಟ್ ಈ ಪಟ್ಟಿಯಲ್ಲಿದೆ. ಒಟ್ಟು 23 ರಾಜ್ಯಗಳಿಗೆ ಈ ಮೊತ್ತವನ್ನು ವಿಂಗಡಿಸಲಾಗಿದ್ದು ನಲವತ್ತು ಯೋಜನೆಗಳು ಆರಂಭಗೊಳ್ಳಲಿವೆ.
ಪ್ರವಾಸೋದ್ಯಮ ಸಚಿವಾಲಯವು ದೇಶಾದ್ಯಂತ ಹರಡಿರುವ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಂಡವಾಳ ಹೂಡಿಕೆಗಾಗಿನ ವಿಶೇಷ ನೆರವು (ಎಸ್ಎಎಸ್‌ಸಿಐ) ಅಡಿಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ವೆಚ್ಚ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರವಾಸೋದ್ಯಮ ಸಚಿವಾಲಯವು ಎಸ್ಎಎಸ್‌ಡಿ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ. ಯೋಜನಾ ವೆಚ್ಚವನ್ನು ರೂಪಿಸಿ ಸಚಿವಾಲಯಕ್ಕೆ ಸಲ್ಲಿಸಲು ಹೇಳಿದೆ. ಪ್ರಾಕೃತಿಕವಾಗಿ ವಿಶಿಷ್ಟವಾಗಿರುವ ಪ್ರವಾಸಿ ತಾಣಗಳನ್ನು ನಿರ್ಮಿಸುವುದೇ ಯೋಜನೆಯ ಗುರಿ.
87 ಯೋಜನಾ ಪ್ರಸ್ತಾವನೆಗಳ ಸ್ವೀಕಾರ
ಪ್ರಸ್ತಾಪ ಸಲ್ಲಿಕೆಯ ಕೊನೆಯ ದಿನಾಂಕವಾದ ಅಕ್ಟೋಬರ್ 15, 2024 ರ ವೇಳೆಗೆ 8,000 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಒಟ್ಟು 87 ಯೋಜನಾ ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ, ಪ್ರವಾಸೋದ್ಯಮ ಸಚಿವಾಲಯವು ಮಾರ್ಗಸೂಚಿಗಳಿಗೆ ಅನುಗುಣವಾಗಿ ಮತ್ತು ಕಾರ್ಯವಿಧಾನ ಅಥವಾ ಮಾನದಂಡಗಳ ಪ್ರಕಾರ 23 ರಾಜ್ಯಗಳಲ್ಲಿ 40 ಯೋಜನೆಗಳನ್ನು 3295.76 ಕೋಟಿ ರೂಪಾಯಿ ಪ್ರಕಾರ ಅಂತಿಮಗೊಳಿಸಲಾಗಿದೆ. ಅವುಗಳನ್ನು ಈಗ ವೆಚ್ಚ ಇಲಾಖೆ ಮಂಜೂರು ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರಿನ ರೋರಿಚ್ ಎಸ್ಟೇಟ್, ರಂಗ್ ಘರ್, ಶಿವಸಾಗರ್ (ಅಸ್ಸಾಂ), ಮತ್ಸ್ಯಗಂಧ ಸರೋವರ, ಸಹರ್ಸಾ (ಬಿಹಾರ), ಪ್ರಸ್ತಾವಿತ ಟೌನ್ ಸ್ಕ್ವೇರ್, ಪೊರ್ವೊರಿಮ್ (ಗೋವಾ) ಮತ್ತು ಒರ್ಚಾ (ಮಧ್ಯಪ್ರದೇಶ) ಕೆಲವು ಆಯ್ದ ಕೆಲವು ಪ್ರವಾಸಿ ತಾಣಗಳಾಗಿವೆ.
ದೀರ್ಘಾವಧಿ ಬಡ್ಡಿ ರಹಿತ ಸಾಲ
ದೇಶದ ಅಪ್ರತಿಮ ಪ್ರವಾಸಿ ಕೇಂದ್ರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡಿಂಗ್ ಮತ್ತು ಮಾರಾಟ ಮಾಡಲು ರಾಜ್ಯಗಳಿಗೆ 50 ವರ್ಷಗಳವರೆಗೆ ದೀರ್ಘಾವಧಿ ಬಡ್ಡಿರಹಿತ ಸಾಲವನ್ನು ನೀಡುವುದು ಈ ಯೋಜನೆಯ ಉದ್ದೇಶ ಎಂದು ಸಚಿವಾಲಯ ತಿಳಿಸಿದೆ.
ಯೋಜನೆಗಳ ರೂಪದಲ್ಲಿ ಬಂಡವಾಳ ಹೂಡಿಕೆ ಮಾಡಿ. ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೆ ನೆರವಾಗುತ್ತದೆ. ಅದೇ ರೀತಿ ಸುಸ್ಥಿರ ಪ್ರವಾಸೋದ್ಯಮ ಯೋಜನೆಗಳ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.
ಈ ಉಪಕ್ರಮವು ಹೆಚ್ಚಿನ ನಿರ್ದಿಷ್ಟ ಪ್ರವಾಸೋದ್ಯಮ ಕೇಂದ್ರಗಳ ಮೇಲಿನ ದಟ್ಟಣೆ ಕಡಿಮೆ ಮಾಡಲು ನೆರವಾಗುತ್ತದೆ. ಅದೇ ರೀತಿ ದೇಶಾದ್ಯಂತ ಪ್ರವಾಸಿಗರ ಹೆಚ್ಚು ಸಮತೋಲಿತವಾಗಿ ಪ್ರವಾಸ ಮಾಡುವಂತೆ ಉತ್ತೇಜಿಸುವ ಗುರಿ ಹೊಂದಲಾಗಿದೆ. ಕಡಿಮೆ ಪರಿಚಿತ ತಾಣಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಒಟ್ಟಾರೆ ಪ್ರವಾಸೋದ್ಯಮ ಅನುಭವ ಹೆಚ್ಚಿಸಿ ಸ್ಥಳೀಯ ಆರ್ಥಿಕತೆ ಆರ್ಥಿಕತೆ ವೃದ್ಧಿಸಲಾಗುವುದು" ಎಂದು ಸಚಿವಾಲಯ ತಿಳಿಸಿದೆ.
ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯಗಳಿಗೆ ಎರಡು ವರ್ಷಗಳ ಕಾಲಮಿತಿ ನೀಡಲಾಗಿದೆ, ಆದರೆ ಮಾರ್ಚ್ 2026 ರೊಳಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಅದು ಹೇಳಿದೆ.