ಭಾರತದಲ್ಲಿ ಆಪಲ್‌ನಿಂದ ಐಪ್ಯಾಡ್‌, ಏರ್‌ಪಾಡ್‌ ಉತ್ಪಾದನೆ: ವರದಿ

ಭಾರತದಲ್ಲಿ ಶೇ.14ರಷ್ಟು ಐಫೋನ್‌ಗಳನ್ನು ತಯಾರಾಗುತ್ತಿವೆ (ಸುಮಾರು 14 ಶತಕೋಟಿ ಡಾಲರ್‌ ಮೌಲ್ಯ). ಮುಂದಿನ 3-4 ವರ್ಷಗಳಲ್ಲಿ ಇದನ್ನು ಶೇ.25 ಕ್ಕೆ ಹೆಚ್ಚಿಸಲು ಆಪಲ್ ಯೋಜಿಸಿದೆ. ಇದರಿಂದ ಚೀನಾದ ಪೂರೈಕೆದಾರರ ಮೇಲೆ ಕಂಪನಿಯ ಅವಲಂಬನೆ ಕಡಿಮೆ ಆಗಲಿದ್ದು, ಸ್ಥಳೀಯ ಮಾರಾಟಗಾರರ ಜಾಲವನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ.

Update: 2024-07-08 13:05 GMT

ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಆಪಲ್, ಭಾರತದಲ್ಲಿ ಐಪ್ಯಾಡ್‌ಗಳ ತಯಾರಿಕೆಯನ್ನು ಪುನರಾರಂಭಿಸಬಹುದು ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ, ವರದಿಯೊಂದು ಹೇಳಿದೆ.

ಸರ್ಕಾರದ ನಿರ್ಬಂಧಗಳಿಂದಾಗಿ ಚೀನಾದ ಬಿವೈಡಿ ಸಹಭಾಗಿತ್ವದಲ್ಲಿ ಭಾರತದಲ್ಲಿ ಐಪ್ಯಾಡ್‌ಗಳನ್ನು ಉತ್ಪಾದಿಸುವ ಕ್ಯುಪರ್ಟಿನೋ ಮೂಲದ ಕಂಪನಿಯ ಹಿಂದಿನ ಪ್ರಯತ್ನ ಯಶಸ್ವಿಯಾಗಲಿಲ್ಲ. ಬದಲಿಗೆ, ಕಂಪನಿಯು ವಿಯೆಟ್ನಾಂನಲ್ಲಿ ಬಿವೈಡಿಯೊಂದಿಗೆ ತನ್ನ ಉತ್ಪಾದನೆ ಯೋಜನೆಗಳನ್ನು ಕೈಗೊಂಡಿತು.

ಆಪಲ್‌ನ 2 'ದೊಡ್ಡ ಯೋಜನೆʼ: ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಮತ್ತು ದೇಶದಲ್ಲಿ ಮುಂಬರುವ ವರ್ಷಗಳಲ್ಲಿ ಆಪಲ್ ಐಪ್ಯಾಡ್‌ಗಳನ್ನು ಮಾತ್ರವಲ್ಲದೆ ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್‌ಗಳನ್ನು ಕೂಡ ಉತ್ಪಾದಿಸಬೇಕು ಎಂದು ಸರ್ಕಾರ ಉತ್ಸುಕವಾಗಿದೆ. 

ಭಾರತದಲ್ಲಿ ಆಪಲ್ ಮುಂದಿನ ಎರಡು, ಮೂರು ವರ್ಷಗಳಲ್ಲಿ ದೊಡ್ಡ ಯೋಜನೆಗಳನ್ನು ಹಂಚಿಕೊಂಡಿದೆ ಎಂದು ತಿಳಿದುಬಂದಿದೆ. ಏಕೆಂದರೆ, ಅದು ಚೀನಾದಲ್ಲಿರುವಂಥದ್ಧೇ ಪೂರೈಕೆ ಸರಪಳಿಯನ್ನು ಭಾರತದಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಈ ಯೋಜನೆಗಳು ಫಲಪ್ರದವಾದರೆ, ಇನ್ನಷ್ಟು ಆಪಲ್ ಪಾಲುದಾರರು ಭಾರತಕ್ಕೆ ಬರುತ್ತಾರೆ ಮತ್ತು ಭಾರತದಲ್ಲಿರುವ ಅದರ ಪಾಲುದಾರರು ತಮ್ಮ ಉತ್ಪಾದನೆ ಸಾಮರ್ಥ್ಯವನ್ನು ವಿಸ್ತರಿಸುತ್ತಾರೆ ಎಂದರ್ಥ.

ಐಫೋನ್ ಉತ್ಪಾದನೆ ಹೆಚ್ಚಳ: ಆಪಲ್‌ ಜಾಗತಿಕವಾಗಿ ಮತ್ತು ಭಾರತದಲ್ಲಿ ಫಾಕ್ಸ್‌ಕಾನ್ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಮೂಲಕ ತನ್ನ ಐಫೋನ್ ಉತ್ಪಾದನೆ ಸಾಮರ್ಥ್ಯಗಳನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುತ್ತಿದೆ.

ಟಾಟಾ ಭಾರತದಲ್ಲಿ ವಿಸ್ಟ್ರಾನ್‌ ನ್ನು ಸ್ವಾಧೀನಪಡಿಸಿಕೊಂಡ ನಂತರ, ಈಗ ಪೆಗಾಟ್ರಾನ್‌ನ ಇಂಡಿಯಾ ಕಾರ್ಯಾಚರಣೆಗಳನ್ನು ಖರೀದಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಪೆಗಾಟ್ರಾನ್ ಚೆನ್ನೈನಲ್ಲಿ ಐಫೋನ್ ತಯಾರಿಕೆ ಘಟಕವನ್ನು ಹೊಂದಿದೆ ಮತ್ತು ನಿರ್ಮಾಣ ಹಂತದಲ್ಲಿರುವ ಇನ್ನೊಂದು ಕಾರ್ಖಾನೆಯನ್ನು ಹೊಂದಿದೆ.

ಪ್ರಸ್ತುತ ಭಾರತದಲ್ಲಿ ಸುಮಾರು ಶೇ. 14 ರಷ್ಟು ಐಫೋನ್‌ಗಳನ್ನು ತಯಾರಾಗುತ್ತಿವೆ (ಸುಮಾರು 14 ಶತಕೋಟಿ ಡಾಲರ್‌ ಮೌಲ್ಯ). ಮುಂದಿನ 3-4 ವರ್ಷಗಳಲ್ಲಿ ಇದನ್ನು ಶೇ.25 ಕ್ಕೆ ಹೆಚ್ಚಿಸಲು ಆಪಲ್ ಯೋಜಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಚೀನಾದ ಪೂರೈಕೆದಾರರ ಮೇಲೆ ಕಂಪನಿಯ ಅವಲಂಬನೆ ಕಡಿಮೆ ಆಗಲಿದ್ದು, ಸ್ಥಳೀಯ ಮಾರಾಟಗಾರರ ಜಾಲವನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ.

2024ರ ಮೊದಲ ಎರಡು ತಿಂಗಳಲ್ಲಿ ಆಪಲ್ ಭಾರತದಿಂದ 2 ಶತಕೋಟಿ ಡಾ. ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ ಎಂದು ವರದಿಯಾಗಿದೆ. 2023ರಲ್ಲಿ ಕಂಪನಿಯು 10 ದಶಲಕ್ಷಕ್ಕಿಂತ ಹೆಚ್ಚು ಐಫೋನ್‌ಗಳನ್ನು ರಫ್ತು ಮಾಡಿದೆ; 2022 ರಲ್ಲಿ ಈ ಪ್ರಮಾಣ 6 ದಶಲಕ್ಷ ಇದ್ದಿತ್ತು.

ಏರ್‌ಪಾಡ್ ಉತ್ಪಾದನೆ: ಆಪಲ್ ಭಾರತದಲ್ಲಿ ಜಬಿಲ್ ಇಂಕ್ ಮೂಲಕ ಏರ್‌ಪಾಡ್ ವೈರ್‌ಲೆಸ್ ಚಾರ್ಜಿಂಗ್ ಘಟಕಗಳ ಉತ್ಪಾದನೆಯನ್ನು ಹೆಚ್ಚಿಸಲು ‌ಪ್ರಯತ್ನಿಸುತ್ತಿದೆ. ಅಮೆರಿಕದ ಬಹುರಾಷ್ಟ್ರೀಯ ಗುತ್ತಿಗೆ ತಯಾರಿಕೆ ಸಂಸ್ಥೆಯಾದ ಜಬಿಲ್‌, ಪುಣೆಯಲ್ಲಿ ವೈರ್‌ಲೆಸ್ ಚಾರ್ಜಿಂಗ್ ಘಟಕಗಳ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಿದೆ. ಆಪಲ್ ಭಾರತದಲ್ಲಿ ಈ ಘಟಕಗಳನ್ನು ತಯಾರಿಸಲು ಫಾಕ್ಸ್‌ಕಾನ್‌ಗೆ ಕೇಳಬಹುದು ಎಂದು ಮೂಲಗಳು ತಿಳಿಸಿವೆ.

ಅಷ್ಟು ಮಾತ್ರವಲ್ಲದೆ, ರಫ್ತು ಮತ್ತು ದೇಶಿ ಅವಶ್ಯಕತೆಗಳನ್ನು ಪೂರೈಸಲು ಆಪಲ್ ದೇಶದಲ್ಲಿ ಏರ್‌ಪಾಡ್‌ (ವೈರ್‌ಲೆಸ್ ಸ್ಟಿರಿಯೊ ಅಥವಾ ಟಿ ಡಬ್ಲ್ಯು ಎಸ್) ಉತ್ಪಾದನೆಯನ್ನು ಪ್ರಾರಂಭಿಸಬಹುದು.‌ ಆಪಲ್ ನ ಏರ್‌ಪಾಡ್‌ಗಳು ಜಾಗತಿಕವಾಗಿ ಅತ್ಯಧಿಕ ಮಾರುಕಟ್ಟೆ ಪಾಲು ಹೊಂದಿವೆ.

ಈ ಎಲ್ಲಾ ಯೋಜನೆಗಳು ಅನುಷ್ಠಾನಗೊಂಡರೆ, ಭಾರತವು ಶೀಘ್ರದಲ್ಲೇ ಆಪಲ್‌ನ ಮೂರು ಉತ್ಪನ್ನಗಳಾದ ಐಫೋನ್‌, ಐ ಪ್ಯಾಡ್‌ ಹಾಗೂ ಏರ್‌ ಪಾಡ್‌ ಗಳ ತಯಾರಿಕೆ ಕೇಂದ್ರವಾಗಲಿದೆ.

Tags:    

Similar News