Air India Express: ಮಂಗಳೂರು- ದೆಹಲಿ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ವಿಮಾನ

Air India Express : ಉದ್ಘಾಟನಾ ವಿಮಾನ ಐಎಕ್ಸ್ 1552 ಮಂಗಳೂರಿನಿಂದ ಬೆಳಿಗ್ಗೆ 6.40 ಕ್ಕೆ ಹೊರಟು ಫೆಬ್ರವರಿ 1 ರಂದು ಬೆಳಿಗ್ಗೆ 9.35 ಕ್ಕೆ ದೆಹಲಿಯಲ್ಲಿ ಲ್ಯಾಂಡ್‌ ಆಯಿತು ಎಂದು ಎಂಐಎ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.;

Update: 2025-02-02 07:07 GMT
ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ.,

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ವಿಮಾನ ಸೇವೆ ಶನಿವಾರ ಆರಂಭಗೊಂಡಿದೆ. ಈ ಸೇವೆಯು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಉದ್ಘಾಟನಾ ವಿಮಾನ ಐಎಕ್ಸ್ 1552 ಮಂಗಳೂರಿನಿಂದ ಬೆಳಿಗ್ಗೆ 6.40 ಕ್ಕೆ ಹೊರಟು ಫೆಬ್ರವರಿ 1 ರಂದು ಬೆಳಿಗ್ಗೆ 9.35 ಕ್ಕೆ ದೆಹಲಿಯಲ್ಲಿ ಲ್ಯಾಂಡ್‌ ಆಯಿತು ಎಂದು ಎಂಐಎ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದೇ ಸಮಯದಲ್ಲಿ, ಐಎಕ್ಸ್ 2768 ದೆಹಲಿಯಿಂದ ಬೆಳಿಗ್ಗೆ 6.40 ಕ್ಕೆ ಹೊರಟು ಬೆಳಿಗ್ಗೆ 9.35 ಕ್ಕೆ ಮಂಗಳೂರಿನಲ್ಲಿ ಇಳಿದಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರೋಡ್ರೋಮ್ ರೆಸ್ಕ್ಯೂ ಅಂಡ್ ಫೈರ್ ಫೈಟಿಂಗ್ (ಎಆರ್ಎಫ್ಎಫ್) ಘಟಕವು ಮೊದಲ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸ್ವಾಗತಿಸಿತು. ಮೊದಲ ವಿಮಾನದಲ್ಲಿ ದೆಹಲಿಗೆ 167 ಪ್ರಯಾಣಿಕರು ಮತ್ತು ದೆಹಲಿಯಿಂದ ಮಂಗಳೂರಿಗೆ 144 ಪ್ರಯಾಣಿಕರು ಬಂದಿದ್ದರು.

ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, "ಈ ಹೊಸ ಸೇವೆಯು ವ್ಯಾಪಾರ ಮತ್ತು ಪ್ರಯಾಣಿಕರಿಗೆ ಪ್ರಯೋಜನ ನೀಡುವುದಲ್ಲದೆ, ಇತರ ದೇಶೀಯ ಮತ್ತು ಅಂತರರಾಷ್ಟ್ರೀಯ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಸಾರಿಗೆ ಆಯ್ಕೆಗಳನ್ನು ಹೆಚ್ಚಿಸುತ್ತದೆ. ಸಂಪರ್ಕ ಬಲಪಡಿಸಲು ಮತ್ತು ಪ್ರದೇಶದ ಹೆಚ್ಚುತ್ತಿರುವ ಪ್ರಯಾಣದ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ. ಈಗ ಮಂಗಳೂರು ಮತ್ತು ದೆಹಲಿ ನಡುವೆ ಪ್ರತಿದಿನ ಎರಡು ನೇರ ವಿಮಾನ ಆಯ್ಕೆಗಳಿವೆ. ಇಂಡಿಗೊ ಸಂಜೆ ವಿಮಾನ ಯಾನ ನಡೆಸುತ್ತಿದೆ. ವಹೊಸ ಮಾರ್ಗವು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಎರಡು ನಗರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಆಯ್ಕೆಗಳನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ, ಎಂದು ಹೇಳಿದರು.

ಜನವರಿಯಲ್ಲಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮಂಗಳೂರಿನಿಂದ ಪುಣೆಗೆ ಎರಡು ವಾರಾಂತ್ಯದ ವಿಮಾನಗಳನ್ನು ಪ್ರಾರಂಭಿಸಿತ್ತು. ಇದು ಹೆಚ್ಚುತ್ತಿರುವ ಪ್ರಾದೇಶಿಕ ಬೇಡಿಕೆ ಪೂರೈಸುವ ಪ್ರಯತ್ನಗಳಾಗಿವೆ. ದೆಹಲಿ ಮಾರ್ಗವು ಈಗ ಕಾರ್ಯನಿರ್ವಹಿಸುತ್ತಿರುವುದರಿಂದ, ವಿಮಾನಯಾನವು ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಾಗ ವ್ಯಾಪಾರ, ಪ್ರವಾಸೋದ್ಯಮ ಮತ್ತು ಶಿಕ್ಷಣಕ್ಕೆ ಪೂರಕವಾಗಿದೆ. 

Tags:    

Similar News