ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಮತ್ತೊಂದು ಹೊಡೆತ, ಪಕ್ಷದ ಮುಖಂಡ ಬಿ.ಬಿ.ತ್ಯಾಗಿ ಎಎಪಿಗೆ ಸೇರ್ಪಡೆ

ಮೂರು ಬಾರಿ ಮಾಜಿ ಶಾಸಕರಾಗಿದ್ದ ಬ್ರಹ್ಮ ಸಿಂಗ್ ತನ್ವರ್ ಕಳೆದ ವಾರ ಬಿಜೆಪಿ ತೊರೆದು ಎಎಪಿಗೆ ಸೇರಿದ ನಂತರ ಈ ಬೆಳವಣಿಗೆ ನಡೆದಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ದೆಹಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

Update: 2024-11-04 10:33 GMT
ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಜತೆ ಬಿಬಿ ತ್ಯಾಗಿ.

ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಮತ್ತೊಂದು ಹೊಡೆತ, ಪಕ್ಷದ ಮುಖಂಡ ಬಿ.ಬಿ.ತ್ಯಾಗಿ ಎಎಪಿಗೆ ಸೇರ್ಪಡೆಮೂರು ಬಾರಿ ಮಾಜಿ ಶಾಸಕರಾಗಿದ್ದ ಬ್ರಹ್ಮ ಸಿಂಗ್ ತನ್ವರ್ ಕಳೆದ ವಾರ ಪಕ್ಷ ತೊರೆದು ಎಎಪಿಗೆ ಸೇರಿದ ನಂತರ ಈ ಬೆಳವಣಿಗೆ ನಡೆದಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ

ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಆ ಪಕ್ಷದ ಪ್ರಭಾವಿ ನಾಯಕ ಹಾಗೂ ಮಾಜಿ ಮುನ್ಸಿಪಲ್ ಕೌನ್ಸಿಲರ್ ಬಿ.ಬಿ.ತ್ಯಾಗಿ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಬ್ರಹ್ಮ ಸಿಂಗ್ ತನ್ವರ್ ಪಕ್ಷ ತೊರೆದು ಕಳೆದ ವಾರ ಎಎಪಿಗೆ ಸೇರಿದ ನಂತರ ಈ ಬೆಳವಣಿಗೆ ನಡೆದಿದೆ.

ಮಾಜಿ ಎರಡು ಬಾರಿ ಮುನ್ಸಿಪಲ್ ಕೌನ್ಸಿಲರ್ ಮತ್ತು ಹಿಂದಿನ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ತ್ಯಾಗಿ 2015ರಲ್ಲಿ ಲಕ್ಷ್ಮಿ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಪ್ರಸ್ತುತ ಬಿಜೆಪಿ ವಶದಲ್ಲಿರುವ ಲಕ್ಷ್ಮೀ ನಗರ ಕ್ಷೇತ್ರದಿಂದ ತ್ಯಾಗಿ ಅವರನ್ನು ಪಕ್ಷವು ಕಣಕ್ಕಿಳಿಸಬಹುದು ಎಂದು ಎಎಪಿ ಮೂಲಗಳು ತಿಳಿಸಿವೆ.

ಪಕ್ಷ ಸೇರ್ಪಡೆ ಕಾರ್ಯಕ್ರಮʼ

ಪಕ್ಷದ ಪ್ರಧಾನ ಕಚೇರಿಯಲ್ಲಿ ಹಿರಿಯ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಶಾಸಕ ದುರ್ಗೇಶ್ ಪಾಠಕ್ ಅವರ ಸಮ್ಮುಖದಲ್ಲಿ ತ್ಯಾಗಿ ಎಎಪಿಗೆ ಸೇರಿದರು.

ತ್ಯಾಗಿ ಅವರನ್ನು ಎಎಪಿ ಪಕ್ಷಕ್ಕೆ ಸ್ವಾಗತಿಸಿದ ಮನೀಶ್‌ ಸಿಸೋಡಿಯಾ, ತಳಮಟ್ಟದ ಸಂಪರ್ಕ ಹೊಂದಿರುವ ನಾಯಕರಾಗಿರುವ ತ್ಯಾಗಿ ಅವರು ಆಪ್‌ಗೆ ಹೆಚ್ಚಿನ ಮೌಲ್ಯ ತರಲಿದ್ದಾರೆ. ಅವರ ಕೆಲಸವನ್ನು ಪಕ್ಷವು ಸ್ವಾಗತಿಸುತ್ತದೆ ಎಂದು ಹೇಳಿದರು.

ಶಿಕ್ಷಣ, ಆರೋಗ್ಯ ಮತ್ತು ನೀರು ಮತ್ತು ವಿದ್ಯುತ್ ಸರಬರಾಜು ಕ್ಷೇತ್ರಗಳಲ್ಲಿ ಆಪ್‌ ಸರ್ಕಾರ ಮಾಡಿರುವ ಕೆಲಸದಿಂದ ತಾನು ಪ್ರಭಾವಿತನಾಗಿದ್ದೇನೆ. ಜನರಿಗೆ ಸೇವೆ ಸಲ್ಲಿಸಲು ಬಯಸಿದರೆ ಅದರ ಸದಸ್ಯನಾಗಲು ಇದು ಅತ್ಯುತ್ತಮ ಪಕ್ಷ ಎಂದು ತ್ಯಾಗಿ ಹೇಳಿದರು.

ಮುಂದಿನ ವರ್ಷ ಫೆಬ್ರವರಿಯಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ.

Tags:    

Similar News