ಅಧೀರ್ ರಂಜನ್ ಚೌಧರಿ ಅವರನ್ನು ಶ್ಲಾಘಿಸಿದ ಖರ್ಗೆ

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ನಂಬುವುದು ಕಷ್ಟ ಎಂದು ಬೆಹ್ರಾಂಪುರದಿಂದ ಐದು ಬಾರಿ ಲೋಕಸಭೆ ಸದಸ್ಯರಾಗಿರುವ ಅಧೀರ್ ರಂಜನ್ ಚೌಧರಿ ಕಳೆದ ವಾರ ಹೇಳಿದ್ದರು. ಖರ್ಗೆ ಈ ಹೇಳಿಕೆಗೆ ಚೌಧರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.;

Update: 2024-05-20 08:49 GMT

ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್‌ ರಂಜನ್‌ ಚೌಧರಿ ಅವರನ್ನು ಪಕ್ಷದ ʻಹೋರಾಟಗಾರ ಸೈನಿಕʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಹೊಗಳಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ನಂಬುವುದು ಕಷ್ಟ.ಚುನಾವಣೆ ಬಳಿಕ ಅವರು ಬಿಜೆಪಿ ಜೊತೆಗೆ ಹೋಗಬಹುದು ಎಂದು ಬೆಹ್ರಾಂಪುರದಿಂದ ಐದು ಬಾರಿ ಲೋಕಸಭೆ ಸದಸ್ಯರಾಗಿರುವ ಅಧೀರ್ ರಂಜನ್ ಚೌಧರಿ ಕಳೆದ ವಾರ ಹೇಳಿದ್ದರು. ಖರ್ಗೆ ಅವರು ಈ ಹೇಳಿಕೆಗೆ ಚೌಧರಿ ಅವರನ್ನುತರಾಟೆಗೆ ತೆಗೆದುಕೊಂಡಿದ್ದರು. 

ಪಕ್ಷದ ಸೈನಿಕ: ʻಅವರು ನಮ್ಮ ಹೋರಾಟದ ಸೈನಿಕʼ ಎಂದು ಸೋಮವಾರ ಖರ್ಗೆ ಹೇಳಿದರು. ʻರಾಜ್ಯದಲ್ಲಿ ಕಾಂಗ್ರೆಸ್ ನ್ನು ಹತ್ತಿಕ್ಕಲು ಹಿಂಸಾಚಾರವನ್ನು ಬಳಸಿದ್ದಾರೆ ಮತ್ತು ಬಿಜೆಪಿಗೆ ಗುಪ್ತವಾಗಿ ಸಹಾಯ ಮಾಡುತ್ತಿದ್ದಾರೆ,ʼ ಎಂದು ಚೌಧರಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ʻಅವರು ಕಾಂಗ್ರೆಸ್ ಪಕ್ಷದ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನಮ್ಮ ನಾಯಕ,ʼ ಎಂದು ಖರ್ಗೆ ಹೇಳಿದರು. 

ಕಾಂಗ್ರೆಸ್-ಎಡ ಪಕ್ಷಗಳ ನಂಟು: ʻಕೆಲವು ಟಿಎಂಸಿ ನಾಯಕರು ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿ ಬಗ್ಗೆ ಈಗ ಪ್ರಸ್ತಾಪಿಸುತ್ತಿದ್ದಾರೆ. ಅವರು ಮೈತ್ರಿಯನ್ನು ವಿಭಿನ್ನವಾಗಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪ್ರಬಲವಾಗಿದೆ ಮತ್ತು ಪಕ್ಷಗಳು ಪರಸ್ಪರ ಅರ್ಥ ಮಾಡಿಕೊಂಡಿರುವುದರಿಂದ, ಆ ರೀತಿ ಆಗುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಡ ಪಕ್ಷಗಳೊಂದಿಗೆ ಮೈತ್ರಿ ನಿರ್ಧಾರ ತೆಗೆದುಕೊಂಡಿದೆ ಮತ್ತು ನಾವು ಆ ಪಕ್ಷಗಳೊಂದಿಗೆ ಮುನ್ನಡೆಯುತ್ತೇವೆ,ʼ ಎಂದು ಹೇಳಿದರು. 

ಅಧೀರ್ ಟೀಕೆ: ಶನಿವಾರ ಮುಂಬೈನಲ್ಲಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರೊಂದಿಗೆ ನಡೆಸಿಕೊಟ್ಟ ಪತ್ರಿಕಾಗೋಷ್ಠಿಯಲ್ಲಿ ಖರ್ಗೆ, ಬ್ಯಾನರ್ಜಿ ವಿರುದ್ಧದ ಚೌಧರಿ ಅವರ ಟೀಕೆಗಳನ್ನು ತಳ್ಳಿಹಾಕಿದರು. ʻಮಮತಾ ಬ್ಯಾನರ್ಜಿ ಮೈತ್ರಿಕೂಟದ ಜೊತೆಗಿದ್ದಾರೆ. ಇತ್ತೀಚೆಗೆ ಸರ್ಕಾರಕ್ಕೆ ಸೇರುವುದಾಗಿ ಹೇಳಿದ್ದಾರೆ. ಈಸಂಬಂಧ ನಿರ್ಧಾರಗಳನ್ನು ನಾನು ಮತ್ತು ಹೈಕಮಾಂಡ್ ತೆಗೆದುಕೊಳ್ಳುತ್ತದೆ; ಅಧೀರ್ ರಂಜನ್ ಚೌಧರಿ ಅವರಲ್ಲ. ಒಪ್ಪದವರು ಹೊರಹೋಗುತ್ತಾರೆ, ʼಎಂದು ಖರ್ಗೆ ಹೇಳಿದ್ದರು.

ಖರ್ಗೆಯವರ ಹೇಳಿಕೆ ನಂತರ ಭಾನುವಾರ ಕೋಲ್ಕತ್ತಾದಲ್ಲಿ ಪಕ್ಷದ ಪ್ರಧಾನ ಕಚೇರಿ ಮುಂದಿನ ಅವರ ಭಿತ್ತಿಚಿತ್ರಗಳು ಮತ್ತು ಫಲಕಗಳನ್ನು ಶಾಯಿಯಿಂದ ವಿರೂಪಗೊಳಿಸಲಾಗಿದೆ.

Tags:    

Similar News