10 ವರ್ಷಗಳಲ್ಲಿ 740 ಶಾಸಕರು, ಸಂಸದರು ಬಿಜೆಪಿ ಸೇರ್ಪಡೆ: ಜೆಎಂಎಂ

Update: 2024-02-19 13:58 GMT

ರಾಂಚಿ, ಫೆ 19- ಕಳೆದ 10 ವರ್ಷಗಳಲ್ಲಿ 740 ಶಾಸಕರು ಮತ್ತು ಸಂಸದರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರ ವಿರುದ್ಧ ಬಿಜೆಪಿ ನೇರವಾಗಿ ಅಥವಾ ಪರೋಕ್ಷವಾಗಿ ಭ್ರಷ್ಟಾಚಾರದ ಆರೋಪ ಮಾಡಿತ್ತು ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೋಮವಾರ ಹೇಳಿದೆ. 

ಕೇಂದ್ರದ ಮೇಲೆ ವಾಗ್ದಾಳಿ ನಡೆಸಿರುವ ಜೆಎಂಎಂ, ಬಿಜೆಪಿಯು 'ನನ್ನ ದಾರಿ ಅಥವಾ ಹೆದ್ದಾರಿ' ಎಂಬ ಗಾದೆಯನ್ನು ಅನುಸರಿಸುತ್ತಿದೆ. ಇದಕ್ಕೆ ಜಾರ್ಖಂಡ್ ಒಂದು ಉದಾಹರಣೆ ಎಂದಿದೆ.  ಸುದ್ದಿಗಾರರೊಂದಿಗೆ ಮಾತನಾಡಿದ ಜೆಎಂಎಂ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ, ʻ2014 ರಿಂದ 2024 ರವರೆಗೆ ಏನು ತಿನ್ನಬೇಕು, ಧರಿಸಬೇಕು, ಅಧ್ಯಯನ ಮಾಡಬೇಕು ಮತ್ತು ಕೇಳಬೇಕು ಎಂಬ ನಿರ್ದೇಶನಗಳು ಸೇರಿದಂತೆ ಹಲವು ವಿಚಿತ್ರ ಸಂಗತಿಗಳಿಗೆ ದೇಶ ಸಾಕ್ಷಿಯಾಗಿದೆʼ ಎಂದು ಆರೋಪಿಸಿದರು. 

ʻಅವರ ಪ್ರಕಾರ, ವಿರೋಧ ಪಕ್ಷದವರು ಭ್ರಷ್ಟರು; ಆದರೆ, ಬಿಜೆಪಿಯಲ್ಲಿರುವವರು ಶುದ್ಧರು. ಅವರ ಸರ್ಕಾರದ ನೀತಿಗಳ ವಿರುದ್ಧ ಇರುವವರು ದೇಶ ವಿರೋಧಿಗಳುʼ ಎಂದು ಹೇಳಿದರು. ʻಕಳೆದ 10 ವರ್ಷಗಳಲ್ಲಿ 740 ಶಾಸಕರು ಮತ್ತು ಸಂಸದರು, ಬಹುತೇಕರು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇವರ ವಿರುದ್ಕೇಧ ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿತ್ತು. ಬಿಜೆಪಿ ಸೇರಿದ ಬಳಿಕ ಇವರೆಲ್ಲರೂ ಪರಿಶುದ್ಧರಾಗಿದ್ದಾರೆ. ಬಿಜೆಪಿ ಈಹಿಂದೆ ಕಾಂಗ್ರೆಸ್‌ ಮುಕ್ತ ಭಾರತದ ಘೋಷಣೆ ಮಾಡಿತ್ತು. ಈಗ ಅದು ಕಾಂಗ್ರೆಸ್‌ ಯುಕ್ತ ಬಿಜೆಪಿಯಾಗಿದೆʼ ಎಂದು ಹೇಳಿದರು. 

ʻಬಿಜೆಪಿ ಬುಡಕಟ್ಟು ಗೌರವ ತಮ್ಮ ಆದ್ಯತೆ ಎನ್ನುತ್ತದೆ. ಆದರೆ, ಬಿಜೆಪಿ ಬುಡಕಟ್ಟು ಮುಖ್ಯಮಂತ್ರಿಯನ್ನು ಬಯಸುವುದಿಲ್ಲ.ಒಂದುವೇಳೆ ಅಂಥವರು ಇದ್ದರೆ , ಅವರ ಸ್ಥಾನ ಜೈಲಿನಲ್ಲಿರುತ್ತದೆ,ʼ ಎಂದು ಭಟ್ಟಾಚಾರ್ಯ ಹೇಳಿದರು.

Tags:    

Similar News