ದೇಶದ 41 ವಿಮಾನ ನಿಲ್ದಾಣ, ಶಾಲೆ, ಆಸ್ಪತ್ರೆಗೆಗಳಿಗೆ ಒಂದೇ ದಿನ ಬಾಂಬ್‌ ಬೆದರಿಕೆ

ವಾರಣಾಸಿ, ಚೆನ್ನೈ, ಪಾಟ್ನಾ ಮತ್ತು ಜೈಪುರ ಸೇರಿದಂತೆ ನಲವತ್ತೊಂದು ವಿಮಾನ ನಿಲ್ದಾಣಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಿ, ವಿಮಾನ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು.;

Update: 2024-06-19 10:28 GMT
"KNR" ಎಂಬ ಆನ್‌ಲೈನ್ ಗುಂಪು ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆ ಇ- ಮೇಲ್‌ಗಳನ್ನು ಕಳುಹಿಸಿದೆ.
Click the Play button to listen to article

ವಾರಾಣಸಿ, ಚೆನ್ನೈ, ಪಾಟ್ನಾ ಮತ್ತು ಜೈಪುರ ಸೇರಿದಂತೆ ನಲವತ್ತೊಂದು ವಿಮಾನ ನಿಲ್ದಾಣಗಳಿಗೆ ಮಂಗಳವಾರ (ಜೂನ್ 18) ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಿ, ವಿಮಾನ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು. ಬಳಿಕ ಇದೊಂದು ಕಿಡಿಗೇಡಿಗಳ ಕೃತ್ಯ ಎಂದು ತಿಳಿದು ಬಂದಿದೆ.

exhumedyou888@gmail.com ಐಡಿಯಿಂದ ಮಧ್ಯಾಹ್ನ 12.40 ರ ಸುಮಾರಿಗೆ ಇಮೇಲ್‌ಗಳನ್ನು ಬಂದಿದ್ದು, ತಕ್ಷಣವೇ ಅಲರ್ಟ್‌ ಆದ ಅಧಿಕಾರಿಗಳು ಗಂಟೆಗಟ್ಟಲೆ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎನ್​ಆರ್​ ಗುಂಪಿನಿಂದ ಬೆದರಿಕೆ

"KNR" ಎಂಬ ಆನ್‌ಲೈನ್ ಗುಂಪು ಮೇ 1 ರಂದು ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ ಹಲವಾರು ಶಾಲೆಗಳಿಗೆ ಗುಂಪು ಇದೇ ರೀತಿಯ ಇಮೇಲ್‌ಗಳನ್ನು ಕಳುಹಿಸಿತ್ತು. exhumedyou888@gmail.com ಇಮೇಲ್​ ಐಡಿಯಿಂದ ಮಧ್ಯಾಹ್ನ 12.40 ರ ಸುಮಾರಿಗೆ ಸಂದೇಶ ರವಾನಿಸಲಾಗಿದೆ. ಇದರಲ್ಲಿ ಹಲೋ, ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಬಾಂಬ್‌ಗಳು ಶೀಘ್ರದಲ್ಲೇ ಸ್ಫೋಟಗೊಳ್ಳುತ್ತವೆ. ನೀವೆಲ್ಲರೂ ಸಾಯುತ್ತೀರಿ ಎಂದು ಬರೆಯಲಾಗಿತ್ತು. ಈ ಸಂದೇಶವುಳ್ಳ ಇಮೇಲ್ ಎಲ್ಲ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.  "KNR" ಎಂಬ ಆನ್‌ಲೈನ್ ಗುಂಪು ಈ ಹುಸಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಚೆನ್ನೈ ವಿಮಾನ ವಿಳಂಬ

ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಕರೆಗಳಿಂದ ಸೇವೆಗಳಲ್ಲಿ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಆದರೆ  ಚೆನ್ನೈ ವಿಮಾನ ನಿಲ್ದಾಣದಲ್ಲಿ 286 ಪ್ರಯಾಣಿಕರಿದ್ದ ದುಬೈಗೆ ಹೊರಟಿದ್ದ ವಿಮಾನವು ಬಾಂಬ್‌ ಬೆದರಿಕೆಯ ಕಾರಣದಿಂದ ವಿಳಂಬವಾಗಿತ್ತು. ಶೋಧದ ಬಳಿಕ ಯಾವುದೇ ಸ್ಫೋಟ ವಸ್ತುಗಳು ಸಿಗದ ಹಿನ್ನೆಲೆ ಅಧಿಕಾರಿಗಳು ಅನುಮತಿ ನೀಡಿದ ಬಳಿಕ ವಿಮಾನ ದುಬೈನತ್ತ ಹಾರಿತು.

ಇದೇ ರೀತಿ ರಾಜಸ್ಥಾನದ ಜೈಪುರ, ಮಹಾರಾಷ್ಟ್ರ ಮುಂಬೈ, ಬಿಹಾರದ ಪಾಟ್ನಾ, ಉತ್ತಪ್ರದೇಶದ ವಾರಾಣಸಿ ಸೇರಿ 41 ವಿಮಾನ ನಿಲ್ದಾಣಗಳಿಗೆ ಒಂದೇ ಬಾಂಬ್​ ಸ್ಫೋಟದ ಇಮೇಲ್​ ರವಾನೆ ಮಾಡಲಾಗಿದೆ. ಭದ್ರತಾ ಏಜೆನ್ಸಿಗಳು ವಿಮಾನಗಳ ಸಂಪೂರ್ಣ ಶೋಧನೆ ನಡೆಸಿವೆ. ಆದರೆ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. 

ಮುಂಬೈನಲ್ಲಿ ಶಾಲೆ, ಆಸ್ಪತ್ರೆಗೆ ಹುಸಿ ಬಾಂಬ್‌ ಕರೆ 

ಇದೇ ರೀತಿಯ ಘಟನೆಯಲ್ಲಿ, ಮುಂಬೈನ 60 ಕ್ಕೂ ಹೆಚ್ಚು ಸಂಸ್ಥೆಗಳು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ), ಪ್ರಮುಖ ಆಸ್ಪತ್ರೆಗಳು ಮತ್ತು ಕಾಲೇಜುಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್‌ಗಳು ಬಂದಿವೆ. ಸೋಮವಾರ ಮತ್ತು ಮಂಗಳವಾರ ಒಂದೇ ಮೇಲ್ ಐಡಿಯಿಂದ ಇಮೇಲ್‌ಗಳನ್ನು ಸ್ವೀಕರಿಸಲಾಗಿದೆ. ಮಂಗಳವಾರ ಸ್ವೀಕರಿಸಿದ ಇಮೇಲ್‌ಗಳು ಸೋಮವಾರ ಸ್ವೀಕರಿಸಿದ ಇಮೇಲ್‌ಗಳನ್ನು ಹೋಲುತ್ತವೆ, ಇದು ನಗರದಾದ್ಯಂತ ಪ್ರಮುಖ ಖಾಸಗಿ, ರಾಜ್ಯ ಮತ್ತು ನಾಗರಿಕ-ಚಾಲಿತ ಆಸ್ಪತ್ರೆಗಳು ಮತ್ತು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇದೆ ಎಂಬ ಸಂದೇಶವನ್ನು ರವಾನಿಸಿತ್ತು. ಆದರೆ ತೀವ್ರ ಶೋಧನೆಯ ನಂತರ ಯಾವುದೇ ರೀತಿಯ  ಅನುಮಾನಾಸ್ಪದ ಕಂಡುಬಂದಿಲ್ಲ  ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ತನಿಖೆ ನಡೆಯುತ್ತಿರುವಂತೆಯೇ, BMC ಮತ್ತು ಇತರ ಸಂಸ್ಥೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದವು. ತನಿಖೆಯ ಸಮಯದಲ್ಲಿ, ಮುಂಬೈ ಪೊಲೀಸರು ಆ ಸಂಸ್ಥೆಗಳ ಭದ್ರತಾ ತಪಾಸಣೆಗಳನ್ನು ನಡೆಸಿದರು.  ಈ ಎಲ್ಲಾ ಸ್ಥಳಗಳಲ್ಲಿ ಅನುಮಾನಾಸ್ಪದ ಏನೂ ಪತ್ತೆಯಾಗದ ಕಾರಣ ಯಾರೋ ಕಿಡಿಗೇಡಿತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

ಕೋಲ್ಕತ್ತಾದಲ್ಲಿ ಹುಸಿ ಬಾಂಬ್ ಬೆದರಿಕೆ

ಕೊಲ್ಲತ್ತಾದಲ್ಲೂ ಕೂಡ ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆ ಮತ್ತು ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಪೊಲೀರು ತನಿಖೆ ಮತ್ತು ಶೋಧನೆ ನಡೆಸಿದ್ದರು. ಬಳಿಕ ಇದೂ ಕೂಡ ಹುಸಿ ಬಾಬ್‌ ಬೆದರಿಕೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಜನರಿಗೆ ಭಯಪಡಬೇಡಿ ಎಂದು ನಾವು ಮನವಿ ಮಾಡುತ್ತೇವೆ. ನಾವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ನಮ್ಮ ಸಿಬ್ಬಂದಿಯನ್ನು ಈ ಸಂಸ್ಥೆಗಳಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Tags:    

Similar News