ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ 2024 ರಿಂದ ಅನರ್ಹಗೊಂಡಿದ್ದಾರೆ. ಹೆಚ್ಚು ತೂಕ ಹೊಂದಿರುವುದು ಕಂಡುಬಂದಿದ್ದು, ಇದರಿಂದ ಭಾರತೀಯ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಮಂಗಳವಾರ ರಾತ್ರಿ ನಡೆದ ಕ್ರೀಡಾಕೂಟದಲ್ಲಿ ವಿನೇಶ್ ಚಿನ್ನದ ಪದಕವನ್ನು ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ದಾಖಲಿಸಿದ್ದರು.
ʻವಿನೇಶ್ ಇಂದು ಬೆಳಗ್ಗೆ 100 ಗ್ರಾಂ ಅಧಿಕ ತೂಕ ಹೊಂದಿದ್ದರು. ನಿಯಮಗಳು ಇದನ್ನು ಅನುಮತಿಸುವುದಿಲ್ಲ ಮತ್ತು ಅವರನ್ನು ಅನರ್ಹಗೊಳಿಸಲಾಗಿದೆ,ʼ ಎಂದು ಭಾರತೀಯ ಕೋಚ್ ಹೇಳಿದ್ದಾರೆ.
ʻವಿನೇಶ್ ಪೋಗಟ್ ಅವರನ್ನು ಮಹಿಳಾ ಕುಸ್ತಿಯ 50 ಕೆಜಿ ವಿಭಾಗದಿಂದ ಅನರ್ಹಗೊಳಿಸಿದ ಸುದ್ದಿಯನ್ನು ಭಾರತೀಯ ತಂಡ ವಿಷಾದದಿಂದ ಹಂಚಿಕೊಳ್ಳುತ್ತದೆ. ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ವಿನೇಶ್ ಅವರು ಇಂದು ಬೆಳಗ್ಗೆ 50 ಕೆಜಿಗಿಂತ ಕೆಲವು ಗ್ರಾಂ ಅಧಿಕ ತೂಕ ಹೊಂದಿದ್ದರು. ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ಭಾರತ ತಂಡ ವಿನಂತಿಸುತ್ತದೆ. ನಡೆಯಬೇಕಿರುವ ಸ್ಪರ್ಧೆಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತದೆ,ʼಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಹೇಳಿಕೆಯಲ್ಲಿ ತಿಳಿಸಿದೆ.