ಸುಮಿತ್ ನಗಾಲ್ ಮುಡಿಗೆ ಚೆನ್ನೈ ಓಪನ್‌

Update: 2024-02-12 05:44 GMT

ಚೆನ್ನೈ, ಫೆ. 11: ದೇಶದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ಅವರು ಚೆನ್ನೈ ಓಪನ್‌ನ ಫೈನಲ್‌ನಲ್ಲಿ ಇಟಲಿಯ ಲುಕಾ ನಾರ್ಡಿ ಅವರನ್ನು ಸೋಲಿಸಿ, ಐದನೇ ಚಾಲೆಂಜರ್ ಮಟ್ಟದ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

ಈ ಗೆಲುವು ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅವರನ್ನು ಟಾಪ್ 100ರಲ್ಲಿ ಇರಿಸಲಿದೆ. ನಾಗಲ್ ಅವರ 6-1, 6-4 ಗೆಲುವು ಅವರನ್ನು 98 ನೇ ಸ್ಥಾನ ಲಭ್ಯವಾಗುವ ಸಾಧ್ಯತೆಯಿದೆ. 2019 ರಲ್ಲಿ ಎಡಗೈ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರ ಬಳಿಕ ಸಿಂಗಲ್ಸ್‌ ನ ಮೊದಲ 100 ಸ್ಥಾನದಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಆಟಗಾರ ನಾಗಲ್.‌

ಆಸ್ಟ್ರೇಲಿಯನ್ ಓಪನ್‌ನ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ ಅವರು, ಮೊದಲ ಸುತ್ತಿನಲ್ಲಿ ಅಗ್ರಶ್ರೇಣಿಯ 30ನೇ ಆಟಗಾರ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸಿದರು. 26 ವರ್ಷದ ನಾಗಲ್‌, 2024 ರ ಋತುವನ್ನು ಉತ್ತಮವಾಗಿ ಆರಂಭಿಸಿದ್ದಾರೆ. ಚೆನ್ನೈ ಓಪನ್‌ನಲ್ಲಿ ಯಾವುದೇ ಸೆಟ್‌ಗಳನ್ನು ಕೈಬಿಡದೆ ಗೆಲುವು ಸಾಧಿಸಿದ್ದು, ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ.

Tags:    

Similar News