ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಬೆಂಗಳೂರಿನಲ್ಲಿ ಆಡುವ ಪಂದ್ಯಗಳ ಟಿಕೆಟ್ ಲಭ್ಯವಿಲ್ಲ ಎಂಬ ಸುದ್ದಿಗೆ ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಟಿಕೆಟ್‌ಗಳ ಆನ್‌ಲೈನ್ ಮಾರಾಟದಲ್ಲಿನ ಸಂವಹನದ ಕೊರತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾರ್ಚ್ 31 ರಂದು ಆರ್ಸಿಬಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ʻಮೂರನೇ ವ್ಯಕ್ತಿಯ ವೆಬ್‌ಸೈಟ್ʼ ಮತ್ತು ʻಟಿಕೆಟ್ ಮಾರಾಟಗಾರʼ ರಿಗೆ ಬಲಿಯಾಗಬಾರದೆಂದು ಎಚ್ಚರಿಸಿತು. ಅಧಿಕೃತ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾತ್ರ ಟಿಕೆಟ್ ಖರೀದಿಸಲು ಸೂಚಿಸಿತು. ಅದೇ ಪೋಸ್ಟ್‌ನಲ್ಲಿ ʻ2ನೇ ಹಂತದ ಟಿಕೆಟ್‌ಗಳ ಹೆಚ್ಚಿನ ವಿವರಕ್ಕಾಗಿ ಕಾಯುತ್ತಿರಿ!ʼ ಎಂದು ಹೇಳಲಾಗಿತ್ತು.
ಆದರೆ, ಆನಂತರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ ತವರು ಪಂದ್ಯದ ಟಿಕೆಟ್‌ಗಳ ಮಾರಾಟದ ಕುರಿತು ಹೆಚ್ಚಿನ ನವೀಕರಣಗಳಿಲ್ಲ. ಆದರೆ ಏಪ್ರಿಲ್ 4ರಂದು ಅಧಿಕೃತ ಆರ್‌ಸಿಬಿ ವೆಬ್‌ಸೈಟಿನಲ್ಲಿ ಮುಂದಿನ ಮೂರು ಪಂದ್ಯಗಳಿಗೆ (ಏಪ್ರಿಲ್ 15 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಮೇ 4 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಮತ್ತು ಮೇ 12 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ) ಟಿಕೆಟ್‌ಗಳು ʻಮಾರಾಟವಾಗಿವೆʼ ಎಂದು ಹೇಳುತ್ತದೆ. ಇದು ಅಭಿಮಾನಿಗಳ ಅಸಮಾಧಾನ ಮತ್ತು ಕೋಪಕ್ಕೆ ಕಾರಣವಾಗಿದೆ.
ಅಭಿಮಾನಿಗಳಿಂದ ಟ್ವೀಟ್:
@KarunChakki- ʻಆತ್ಮೀಯ @RCBTweets for tomorro̧w, RCB vs LSG ಪಂದ್ಯದ ಹಂತ 2ರ ಟಿಕೆಟ್‌ಗಳನ್ನು RCB ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಮಾರಾಟ ಮಾಡಿಲ್ಲ. ಟಿಕೆಟ್ ಮಾರಾಟವಾದಾಗ ದಯವಿಟ್ಟು ಅಭಿಮಾನಿಗಳಿಗೆ ಸರಿಯಾಗಿ ಮತ್ತು ಪ್ರಾಮಾಣಿಕವಾಗಿ ತಿಳಿಸಿ. KKR ಪಂದ್ಯಕ್ಕಾಗಿ 2 ನೇ ಹಂತದ ಟಿಕೆಟ್‌ಗಳನ್ನು ಮಾರಾಟ ಮಾಡಿಲ್ಲʼ
@aryandastaan- ʻಸಂವಹನದ ಕೊರತೆ ಮತ್ತು @rcbtweets ನ ಅಸಮರ್ಥತೆಯಿಂದಾಗಿ ಹಗರಣಗಳು ನಡೆಯುತ್ತಿವೆʼ.
@piyushverma0304- ʻನಾವು ಎಂದಿಗೂ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯುವುದಿಲ್ಲ. ಹಂತ 1 ಕ್ಕೆ ನಾನು 2 ಗಂಟೆಗಳ ಕಾಲ ಸರದಿಯಲ್ಲಿದ್ದೆ ಮತ್ತುಆನಂತರ, ಯಾವುದೇ ಟಿಕೆಟ್ ಸಿಗಲಿಲ್ಲʼ
@sidhuwrites- ʻಆರ್‌ಸಿಬಿಗಿಂತ ಅಭಿಮಾನಿಗಳನ್ನು ದುರುಪಯೋಗಪಡಿಸಿಕೊಂಡ ಫ್ರಾಂಚೈಸಿ ಮತ್ತೊಂದಿಲ್ಲ. ನಿಷ್ಠೆಯ ಹೆಸರಿನಲ್ಲಿ ಅವಮಾನಿಸಿಲ್ಲ. ಅವರ ಜರ್ಸಿಗಳು ದುಬಾರಿ, ಟಿಕೆಟ್ ದುಬಾರಿ. ಅಭಿಮಾನಿಗಳು ತಮ್ಮ ಟಿಕೆಟ್‌ನ 'ZERO' ಮೌಲ್ಯವನ್ನು ಪಡೆಯುತ್ತಾರೆʼ