ಪ್ಯಾರಿಸ್: ಕೊನೆಯ ಎಂಟರ ಹಂತದಲ್ಲಿ ಉಕ್ರೇನಿನ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸಿದ ಕುಸ್ತಿಪಟು ವಿನೇಶ್ ಫೋಗಟ್ ಅವರು 50 ಕೆಜಿ ವಿಭಾಗದಲ್ಲಿ ತಮ್ಮ ಚೊಚ್ಚಲ ಒಲಿಂಪಿಕ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ವಿನೇಶ್(29) ಅವರು ಕಠಿಣ ಹೋರಾಟದಲ್ಲಿ ಲಿವಾಚ್ ಅವರನ್ನು 7-5 ಅಂತರದಲ್ಲಿ ಸೋಲಿಸಿದ್ದು, ತಮ್ಮ ಮೂರನೇ ಪ್ರಯತ್ನದಲ್ಲಿ ಒಲಂಪಿಕ್ ಪದಕಕ್ಕೆ ಹತ್ತಿರವಾಗಿದ್ದಾರೆ.
ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಮತ್ತು ಹಾಲಿ ಚಿನ್ನದ ಪದಕ ವಿಜೇತೆ ಜಪಾನ್‌ನ ಯುಯಿ ಸುಸಾಕಿ ಅವರನ್ನು ಕ್ವಾರ್ಟರ್ ಫೈನಲ್ ನಲ್ಲಿ ಸೋಲಿಸುವ ಮೂಲಕ ಪೋಗಟ್, ಅತಿ ದೊಡ್ಡ ಆಘಾತಕ್ಕೆ ಕಾರಣವಾಗಿದ್ದರು.
ನಿಷ್ಕ್ರಿಯೆಗೆ ಪೆನಾಲ್ಟಿ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟು 0-2 ರಿಂದ ಹಿನ್ನಡೆಯಲ್ಲಿದ್ದ ಪೋಗಟ್, ಕೊನೆಯ ಐದು ಸೆಕೆಂಡುಗಳಲ್ಲಿ ಅದ್ಭುತವಾಗಿ ಸೆಣೆಸಿ ಮೂರು ಅಂಕಗಳನ್ನು ಗಳಿಸಿ, 3-2 ರಿಂದ ಗೆದ್ದುಕೊಂಡರು.
ವಿನೇಶ್ ಅವರು ಹಿಂದಿನ ಎರಡು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದರು.