Paris Olympics 2024| ಮೀರಾಬಾಯಿ ಚಾನು-ಎರಡು ಪದಕದ ಮೇಲೆ ಕಣ್ಣು

Update: 2024-08-06 08:55 GMT

ಪ್ಯಾರಿಸ್: ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಮೀರಾಬಾಯಿ ಚಾನು ಅವರು ಭಾರ ಎತ್ತುವಿಕೆಯಲ್ಲಿ ಎರಡು ಒಲಿಂಪಿಕ್ ಪದಕಗಳ ಮೇಲೆ ದೃಷ್ಟಿಇರಿಸಿಕೊಂಡಿದ್ದಾರೆ. ಆದರೆ, ಸ್ಪರ್ಧೆ ಕಠಿಣವಾಗಿದೆ ಮತ್ತು ದೀರ್ಘಕಾಲದ ಫಿಟ್‌ನೆಸ್ ಕಾಳಜಿಗಳು ಅವರ ದಾರಿಯಲ್ಲಿ ಇವೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ದಿನವೇ ಬೆಳ್ಳಿ ಪದಕ ಗಳಿಸಿದ್ದ ಅವರು, ಕಳೆದ ಅಕ್ಟೋಬರ್‌ನಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಸೊಂಟದ ಸ್ನಾಯುರಜ್ಜು ಉರಿಯೂತದಿಂದ ಬಳಲಿದರು. 

2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು 201 ಕೆಜಿ (88 + 113) ಎತ್ತಿದರು. ಟೋಕಿಯೊದಲ್ಲಿ 202 ಕೆಜಿ (87 +115) ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು. 

49 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಚಾನು, ಎರಡೂ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದಲ್ಲಿ ಬೆಳ್ಳಿ ಅಥವಾ ಕಂಚಿನ ಪದಕ ಗಳಿಸುವ ಸಾಧ್ಯತೆಯಿದೆ. 

ಹಾಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಹೌ ಝಿಹುಯಿ, ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನೆಚ್ಚಿನ ಆಟಗಾರ್ತಿ ಆಗಿದ್ದಾರೆ. 

ಸೊಂಟದ ಗಾಯದಿಂದಾಗಿ ಐದು ತಿಂಗಳು ಅಂಕಣದಿಂದ ದೂರವಿದ್ದರು. ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಇವೆ. ಆದರೆ, ಮುಖ್ಯ ರಾಷ್ಟ್ರೀಯ ಕೋಚ್ ವಿಜಯ್ ಶರ್ಮಾ, ಚಾನು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ʻಮೀರಾ 200 ಕೆಜಿ ಗುರಿ ದಾಟಬೇಕು ಎಂದು ನಮಗೆ ತಿಳಿದಿದೆ. 202 ಕೆಜಿ ಈ ಬಾರಿ ಸಾಲುವುದಿಲ್ಲ. 205-206 ಕೆಜಿ ಅಗತ್ಯವಿದೆ. ನಾವು ಸವಾಲಿಗೆ ಸಿದ್ಧರಾಗಿದ್ದೇವೆ,ʼ ಎಂದು ಕೋಚ್ ಶರ್ಮಾ ತಿಳಿಸಿದರು. 

ಚಾನು ಗುರುವಾರ 30 ನೇ ವರ್ಷಕ್ಕೆ ಕಾಲಿಡಲಿದ್ದು, ಆಕೆ ಹೋರಾಟಗಾರ್ತಿ ಮತ್ತು ದೇಶದ ಅತ್ಯಂತ ಸ್ಥಿರ ಪ್ರದರದಶನ ನೀಡಿರುವ ಕ್ರೀಡಾಪಟು. 

ಉತ್ತರ ಕೊರಿಯದ ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವ ದಾಖಲೆ ಹೊಂದಿರುವ ರಿ ಸಾಂಗ್ ಗಮ್ ಅನುಪಸ್ಥಿತಿಯಿದ್ದರೂ, 49 ಕೆಜಿ ವಿಭಾಗ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಅಮೆರಿಕದ ಮೂರು ಬಾರಿ ಪ್ಯಾನ್ ಅಮೆರಿಕನ್ ಚಾಂಪಿಯನ್ ಮತ್ತು ವಿಶ್ವ ಕಂಚಿನ ಪದಕ ವಿಜೇತೆ ಜೋರ್ಡಾನ್ ಡೆಲಾಕ್ರೂಜ್ ಮತ್ತು 2021 ರ ವಿಶ್ವ ಚಾಂಪಿಯನ್ ಥಾಯ್ಲೆಂಡ್‌ನ ಸುರೋದ್ಚನಾ ಖಂಬಾವೊ 200 ಕೆಜಿ ಎತ್ತಿದ್ದಾರೆ. ಹೌ ಝಿಹುಯಿ 210 ಕೆಜಿ ಮತ್ತು ಎರಡು ಬಾರಿ ಯುರೋಪಿಯನ್ ಚಾಂಪಿಯನ್ ರೊಮೇನಿಯನ್ ಮಿಹೇಲಾ ಕ್ಯಾಂಬೆ ಅವರು 205 ಕೆಜಿ ಎತ್ತಿದ್ದಾರೆ. 

ಚಾನು ಕಳೆದ ಒಂದು ತಿಂಗಳಿನಿಂದ ಪ್ಯಾರಿಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2020ರಿಂದ ಚಾನು ಅವರಿಗೆ ದೈಹಿಕ ಚಿಕಿತ್ಸಕ ಮತ್ತು ಶಕ್ತಿ-ಕಂಡೀಷನಿಂಗ್ ತರಬೇತುದಾರ ಅಮೆರಿಕದ ಡಾ. ಆರನ್ ಹಾರ್ಶಿಗ್ ನೆರವಾಗುತ್ತಿದ್ದಾರೆ.

Tags:    

Similar News