Paris Olympics 2024| ಮನು-ಸರಬ್ಜೋತ್ ಜೋಡಿಯಿಂದ ಭಾರತಕ್ಕೆ ಎರಡನೇ ಕಂಚು
By : The Federal
Update: 2024-07-30 08:34 GMT
ಚಟೆರೋ (ಫ್ರಾನ್ಸ್), ಜು. 30- ಸರಬ್ಜೋತ್ ಸಿಂಗ್ ಮತ್ತು ಮನು ಭಾಕರ್ ಅವರ ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
ಭಾರತದ ಜೋಡಿಯು ಕೊರಿಯನ್ನರನ್ನು 16-10 ರಿಂದ ಸೋಲಿಸಿತು; ಈ ಪ್ರಕ್ರಿಯೆಯಲ್ಲಿ ಭಾಕರ್ ಅವರು ಸ್ವಾತಂತ್ರ್ಯಾನಂತರ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗಳಿಸಿದ ಮೊದಲ ಭಾರತೀಯರಾದರು.
ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಶಾಂತಚಿತ್ತರಾಗಿ ಆಟವಾಡಿದರು. ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದರು.
ಬ್ರಿಟಿಷ್- ಭಾರತೀಯ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ 1900 ರ ಒಲಿಂಪಿಕ್ಸ್‌ನಲ್ಲಿ 200 ಮೀ ಓಟ ಮತ್ತು 200 ಮೀ ಹರ್ಡಲ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದರು. ಆದರೆ, ಈ ಸಾಧನೆಯು ಸ್ವಾತಂತ್ರ್ಯಕ್ಕೆ ಮೊದಲು ಬಂದಿತ್ತು.