Asian Champions Trophy Hockey| 5ನೇ ಬಾರಿ ಗೆಲುವು ಸಾಧಿಸಿದ ಭಾರತ
ಜುಗರಾಜ್ ಸಿಂಗ್ 51ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿ, ಭಾರತಕ್ಕೆ ಚೀನಾ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಲು ನೆರವಾದರು.;
ಚೀನಾದ ಹುಲುನ್‌ಬುಯರ್‌ನಲ್ಲಿರುವ ಮೋಕಿ ಹಾಕಿ ತರಬೇತಿ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಚೀನಾವನ್ನು 1-0 ಗೋಲಿನಿಂದ ಸೋಲಿಸಿದ ಭಾರತ ಹಾಕಿ ತಂಡ, 5ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಜುಗರಾಜ್ ಸಿಂಗ್ 51ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಗಳಿಸಿದರು. ಕಳೆದ ತಿಂಗಳು ಪ್ಯಾರಿಸ್‌ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡ ಕಂಚಿನ ಪದಕ ಗೆದ್ದಿತ್ತು.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಚೀನಾ ಮುಖಾಮುಖಿಯಾಗಿದ್ದು, ಭಾರತ 3-0 ಅಂತರದಲ್ಲಿ ಜಯ ಸಾಧಿಸಿತ್ತು.ಆದ್ದ ರಿಂದ, ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಫೇವರಿಟ್‌ಗಳಾಗಿದ್ದರೂ, ಚೀನಾ ತಂಡ ಹೋರಾಟವಿಲ್ಲದೆ ಬಿಟ್ಟುಕೊಡಲಿಲ್ಲ.
ಮೊದಲ ಕ್ವಾರ್ಟರ್‌ನ ಆರಂಭದಲ್ಲಿ ಸುಖಜೀತ್ ಹೊಡೆತವನ್ನು ಚೀನಾದ ಗೋಲ್‌ಕೀಪರ್ ತಡೆದರು. 9 ನೇ ನಿಮಿಷದಲ್ಲಿ ಭಾರತದ ಮೊದಲ ಪೆನಾಲ್ಟಿ ಕಾರ್ನರ್ ನ್ನು ಚೀನಾದ ರಕ್ಷಣೆ ತಡೆಯಿತು. ಇನ್ನೊಂದು ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಹರ್ಮನ್‌ಪ್ರೀತ್ ವಿಫಲರಾದರು.
ವಿರಾಮದ ವೇಳೆಗೆ ಅದು 0-0: 27 ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಹೊಡೆದ ಪೆನಾಲ್ಟಿ ಕಾರ್ನರ್, ಕಂಬಕ್ಕೆ ಹೊಡೆದು ಪುಟಿಯಿತು. ಶೀಘ್ರದಲ್ಲೇ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಹೊಡೆತ ನೀಡಲಾಯಿತು. ವಿರಾಮದ ವೇಳೆಗೆ ಅದು 0-0 ಆಗಿತ್ತು. ಮೂರನೇ ಅವಧಿಯಲ್ಲಿ ಭಾರತವು ಚೀನಾದ ರಕ್ಷಣೆ ಮೇಲೆ ನಿರಂತರ ದಾಳಿ ನಡೆಸಿತು. ಚೀನಾಕ್ಕೆ ಕೆಲವು ಪೆನಾಲ್ಟಿ ಕಾರ್ನರ್ ಲಭಿಸಿದರೂ, ಭಾರತ ಹಿಮ್ಮೆಟ್ಟಿಸಿತು.
ಅಂತಿಮ ಅವಧಿ: ಭಾರತ 51 ನೇ ನಿಮಿಷದಲ್ಲಿ ತಿರುವು ಪಡೆಯಿತು. ಹರ್ಮನ್‌ಪ್ರೀತ್ ಚೆಂಡನ್ನು ಜುಗ್‌ರಾಜ್‌ಗೆ ತಲುಪಿಸಿದರು. ಅವರು ಯಾವುದೇ ತಪ್ಪು ಮಾಡಲಿಲ್ಲ.
ಹಾಕಿ ಇಂಡಿಯಾ ಪ್ರತಿ ಆಟಗಾರನಿಗೆ 3 ಲಕ್ಷ ರೂ. ಮತ್ತು ಸಹಾಯಕ ಸಿಬ್ಬಂದಿಗೆ 1.5 ಲಕ್ಷ ರೂ. ಘೋಷಿಸಿದೆ.