Paris Olympics 2024| ಪ್ರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಪಿ.ವಿ. ಸಿಂಧು

Update: 2024-07-31 09:23 GMT

ಪ್ಯಾರಿಸ್, ಜು.31- ಖ್ಯಾತ ಷಟ್ಲರ್ ಪಿ.ವಿ. ಸಿಂಧು ಅವರು ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿ, ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು, ತನ್ನ ಎರಡನೆಯ ಮತ್ತು ಎಂ ಗುಂಪಿನ ಕೊನೆಯ ಪಂದ್ಯದಲ್ಲಿ 21-5 21-10 ರಿಂದ ಗೆದ್ದರು. 

ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಜಾಕ್ ಅವರನ್ನು 21-9 21-6 ಅಂತರದಿಂದ ಸೋಲಿಸಿದ ಸಿಂಧು, ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 

16 ಗುಂಪುಗಳ ಪ್ರತಿ ವಿಜೇತರು 16 ರ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. ಸಿಂಧು ಈ ಹಿಂದೆ 2016 ರ ರಿಯೊ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು ಟೋಕಿಯೊ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

Tags:    

Similar News