ಗುಕೇಶ್ ವಿರುದ್ಧ ಚೀನಾದ ಡಿಂಗ್​ ಉದ್ದೇಶಪೂರ್ವಕಾಗಿ ಸೋತಿದ್ದಾರೆ; ಹಲವರ ಆರೋಪ

ರಷ್ಯಾದ ಚೆಸ್ ಫೆಡರೇಶನ್ ಮುಖ್ಯಸ್ಥ ಆಂಡ್ರೆ ಫಿಲಾಟೊವ್, ಪಂದ್ಯವನ್ನು ಗುಕೇಶ್ ಪರವಾಗಿ ತಿರುಗಿಸಿದ ಡಿಂಗ್ ಅವರ ಪ್ರಮಾದವು ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳಲ್ಲಿ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ.

Update: 2024-12-13 06:45 GMT
ಗುಕೇಶ್ ಮತ್ತು ಡಿಂಗ್ ಲಿರೆನ್ ನಡುವಿನ ಪಂದ್ಯದ ರೋಚಕ ಕ್ಷಣ

ರಷ್ಯಾದ ಚೆಸ್ ಫೆಡರೇಶನ್ ಮುಖ್ಯಸ್ಥ ಆಂಡ್ರೆ ಫಿಲಾಟೊವ್, ಪಂದ್ಯವನ್ನು ಗುಕೇಶ್ ಪರವಾಗಿ ತಿರುಗಿಸಿದ ಡಿಂಗ್ ಅವರ ಪ್ರಮಾದವು ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳಲ್ಲಿ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ.

ಚೆಸ್​ ವಿಶ್ವಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ಭಾರತದ ಡಿ ಗುಕೇಶ್​ ವಿರುದ್ಧ ಚೀನಾದ ಡಿಂಗ್ ಲಿರೆನ್​ ಉದ್ದೇಶಪೂರ್ವಕವಾಗಿ ಸೋತಿದ್ದಾರೆ ಎಂಬುದಾಗಿ ರಷ್ಯಾದ ಚೆಸ್ ಫೆಡರೇಶನ್ ಮುಖ್ಯಸ್ಥ ಆಂಡ್ರೆ ಫಿಲಾಟೊವ್ ಆರೋಪಿಸಿದ್ದಾರೆ.

ಉಕ್ರೇನಿಯನ್ ಚೆಸ್ ತರಬೇತುದಾರ ಪೀಟರ್ ಹೈನ್ ನೀಲ್ಸನ್ ರಷ್ಯಾದ ಸುದ್ದಿ ಸಂಸ್ಥೆ ಟಾಸ್​ನಲ್ಲಿ ಪ್ರಕಟವಾದ ವರದಿಯನ್ನು ಅನ್ನು ಹಂಚಿಕೊಂಡಿದ್ದಾರೆ. ಸಿಂಗಾಪುರದಲ್ಲಿ ನಡೆದ ಫೈನಲ್​ನಲ್ಲಿ ಡಿಂಗ್ ಮತ್ತು ಗುಕೇಶ್ ನಡುವೆ ನಡೆದ ಫೈನಲ್ ಪಂದ್ಯದ ಬಗ್ಗೆ ಪ್ರತ್ಯೇಕ ತನಿಖೆ ಪ್ರಾರಂಭಿಸುವಂತೆ ಫಿಡೆಗೆ ಫಿಲಾಟೊವ್ ಮನವಿ ಮಾಡಿದ್ದಾರೆ. ಕೊನೆಯ ಪಂದ್ಯವನ್ನು ಗುಕೇಶ್ ಪರವಾಗಿ ತಿರುಗಿಸಿದ ಡಿಂಗ್ ಅವರ ಪ್ರಮಾದ ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳಲ್ಲಿ ದಿಗ್ಭ್ರಮೆ ಮಾಡಿದೆ ಎಂದು ಫಿಲಾಟೊವ್ ಅಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅನುಮಾನಾಸ್ಪದ ಕ್ರಮ

"ಕಳೆದ ಪಂದ್ಯದ ಫಲಿತಾಂಶವು ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳಲ್ಲಿ ದಿಗ್ಭ್ರಮೆಯನ್ನುಂಟು ಮಾಡಿತು. ನಿರ್ಣಾಯಕ ವಿಭಾಗದಲ್ಲಿ ಚೀನಾದ ಚೆಸ್ ಆಟಗಾರನ ನಡೆಗಳು ಅತ್ಯಂತ ಅನುಮಾನಾಸ್ಪದವಾಗಿವೆ. ಫಿಡೆಯಿಂದ ಪ್ರತ್ಯೇಕ ತನಿಖೆಯ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.

"ಡಿಂಗ್ ಲಿರೆನ್ ತಾವಿದ್ದ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇದು ಪ್ರಥಮ ದರ್ಜೆ ಆಟಗಾರನಿಂದಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇಂದಿನ ಪಂದ್ಯದಲ್ಲಿ ಚೀನಾದ ಚೆಸ್ ಆಟಗಾರನ ಸೋಲು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಉದ್ದೇಶಪೂರ್ವಕ " ಎಂದು ಅವರು ಹೇಳಿದ್ದಾರೆ.

ಡ್ರಾದತ್ತ ಸಾಗುತ್ತಿದ್ದ ಫೈನಲ್ ಪಂದ್ಯದ ಕೊನೆಯ ಪಂದ್ಯದ (14ನೇ ನಿಮಿಷ) ಕೊನೆಯ ಹಂತದಲ್ಲಿ ಈ ನಡೆಯನ್ನು ಚೀನಾದ ಆಟಗಾರ ಇಟ್ಟಿದ್ದಾರೆ. ಒತ್ತಡದಲ್ಲಿ, ಡಿಂಗ್ ತಪ್ಪು ಲೆಕ್ಕಾಚಾರವನ್ನು ಮಾಡಿದ್ದಾರೆ. ಈ ಕ್ರಮವು ಗುಕೇಶ್ ಗೆಲುವಿಗೆ ಅನುವು ಮಾಡಿಕೊಟ್ಟಿತು ಎಂದು ಅವರು ಆರೋಪಿಸಿದ್ದಾರೆ.

ನಮಗೆ ತಿಳಿದಿರುವಂತೆ ಚೆಸ್ ಅಂತ್ಯ: ಕ್ರಾಮ್ನಿಕ್

ಮಾಜಿ ವಿಶ್ವ ಚಾಂಪಿಯನ್ ವ್ಲಾದಿಮಿರ್ ಕ್ರಾಮ್ನಿಕ್ ಕೂಡ ಫೈನಲ್​ನಲ್ಲಿ ಡಿಂಗ್ ಅವರ ಆಟವನ್ನು ಪ್ರಶ್ನಿಸಿದ್ದಾರೆ. ಪಂದ್ಯದ ನಂತರ, ಕ್ರಾಮ್ನಿಕ್ ಆಟದ ಗುಣಮಟ್ಟದ ಬಗ್ಗೆ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ. ಡಿಂಗ್ ಲಿರೆನ್ ಅವರ ನಿರ್ಣಾಯಕ ಪ್ರಮಾದವನ್ನು "ಬಾಲಿಶ" ಎಂದು ಕರೆದಿದ್ದಾರೆ.

ಕ್ರಾಮ್ನಿಕ್ 'ಎಕ್ಸ್' ನಲ್ಲಿ ಈ ರೀತಿ ಬರೆದಿದ್ದಾರೆ, "ಇದೊಂದು ದುಃಖದ ವಿಷಯ. ಚೆಸ್​ನ ಪ್ರಭಾವದ ಅಂತ್ಯ ಎಂದು ಹೇಳಿದ್ದಾರೆ. ಚಾಂಪಿಯನ್​ಶಿಪ್​ನ ಆರನೇ ಪಂದ್ಯದ ನಂತರ ಆಟದ ಮಟ್ಟವನ್ನು ಕ್ರಾಮ್ನಿಕ್ ಟೀಕಿಸಿದ್ದರು. "ದುರ್ಬಲ" ಆದ ಎಂದು ಕರೆದಿದ್ದರು.

49 ವರ್ಷದ ರಷ್ಯಾದ ಆಟಗಾರ 2000ರಿಂದ 2006ರವರೆಗೆ ಕ್ಲಾಸಿಕಲ್ ವರ್ಲ್ಡ್ ಚೆಸ್ ಚಾಂಪಿಯನ್ ಆಗಿದ್ದರು. 2000ರಲ್ಲಿ, ಕ್ರಾಮ್ನಿಕ್ ಗ್ಯಾರಿ ಕಾಸ್ಪರೋವ್ ಅವರನ್ನು ಸೋಲಿಸಿ ಕ್ಲಾಸಿಕಲ್ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು. 

Tags:    

Similar News