ಮಹಾರಾಜ ಟ್ರೋಫಿ: 52 ಸಿಕ್ಸರ್ ಸಿಡಿಸಿದ ಅಭಿನವ್ ಮನೋಹರ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಪರ ಆಡುತ್ತಿರುವ ಬಲಗೈ ಆಟಗಾರ ಅಭಿನವ್, 10 ಇನ್ನಿಂಗ್ಸ್‌ನಲ್ಲಿ 507 ರನ್ ಗಳಿಸಿದ್ದಾರೆ.;

Update: 2024-08-29 10:56 GMT

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಪರ 10 ಪಂದ್ಯಗಳಲ್ಲಿ 52 ಸಿಕ್ಸರ್ ಸಿಡಿಸಿರುವ ಅಭಿನವ್ ಮನೋಹರ್, ಹೊಸ ದಾಖಲೆ ಬರೆದಿದ್ದಾರೆ. 

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಪರ ಆಡುತ್ತಿರುವ ಬಲಗೈ ಆಟಗಾರ ಅಭಿನವ್, 10 ಇನ್ನಿಂಗ್ಸ್‌, 258 ಎಸೆತಗಳಲ್ಲಿ 84.50 ಸರಾಸರಿಯಲ್ಲಿ 507 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 196.51 ಇದೆ. ಅವರು ಆರು ಅರ್ಧ ಶತಕ ಗಳಿಸಿದ್ದು, 10 ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹೊಡೆದಿದ್ದಾರೆ. 

ಅಭಿನವ್ ಅವರ ಸಿಕ್ಸರ್ ಬಾರಿಸುವ ಸಾಮರ್ಥ್ಯ ಎಲ್ಲರಿಗೂ ತಿಳಿದಿತ್ತು. ಆದರೆ, ಮಹಾರಾಜ ಟ್ರೋಫಿಯಲ್ಲಿ ಅದನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ರತಿ ಪಂದ್ಯದಲ್ಲಿ ಸರಾಸರಿ ಐದು ಸಿಕ್ಸರ್‌ ಸಿಡಿಸಿದ್ದಾರೆ. ಇದೊಂದು ನಂಬ ಲಾಗದ ಸಾಧನೆ. ಅವರ ನಂತರ ಮಹಾರಾಜ ಟ್ರೋಫಿಯಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವುದು ಕರುಣ್ ನಾಯರ್ (ಮೈಸೂರು ವಾರಿಯರ್ಸ್), 27. 

ಹೀಗಿದ್ದರೂ, ಅಭಿನವ್ ಅವರ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿಲ್ಲ. ಬುಧವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಸೋತಿತು. ಈ ಪಂದ್ಯದಲ್ಲಿ ಒಟ್ಟು 30 ಸಿಕ್ಸರ್‌ ಬಂದಿತು.

ಗೇಲ್‌ ಮತ್ತು ರಸೆಲ್:‌ ಐಪಿಎಲ್ ಟಿ 20 ಪಂದ್ಯಾವಳಿಯ ಒಂದೇ ಆವೃತ್ತಿಯಲ್ಲಿ ಕೆಲವೇ ಕೆಲವು ಬ್ಯಾಟರ್‌ಗಳು 50 ಸಿಕ್ಸರ್‌‌ ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಮತ್ತು ಆಂಡ್ರೆ ರಸೆಲ್ ಮಾತ್ರ ಒಂದು ಋತುವಿನಲ್ಲಿ 50 ಕ್ಕೂ ಅಧಿಕ ಸಿಕ್ಸರ್‌ ಬಾರಿಸಿದ್ದಾರೆ. ಗೇಲ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್‌ 2012 ರಲ್ಲಿ ಅವರು 59 ಸಿಕ್ಸರ್‌ ಹೊಡೆದರು. ಅದೇ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರವಾಗಿ 733 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಗೆದ್ದರು. ಐಪಿಎಲ್ 2013ರಲ್ಲಿ ಅವರು 51 ಸಿಕ್ಸರ್‌ ಸಿಡಿಸಿದ್ದರು.

ಆಂಡ್ರೆ ರಸೆಲ್ ಐಪಿಎಲ್ 2019ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ 52 ಸಿಕ್ಸರ್‌ ಸಿಡಿಸಿದ್ದರು.

Tags:    

Similar News