ಬಾಹ್ಯಾಕಾಶ-ಸಾಗರದ ಅನ್ವೇಷಣೆಯಲ್ಲಿ ಸಾಮರ್ಥ್ಯ ಪ್ರದರ್ಶನಕ್ಕೆ ಸಿದ್ಧತೆ

2024ರಲ್ಲಿ, ನಾಸಾ ಮತ್ತು ಇಸ್ರೋ, ಎನೈಎಸ್ ಎಆರ್ ಉಪಗ್ರಹವನ್ನು ಉಡಾವಣೆ ಮಾಡಲಿವೆ, ಹವಾಮಾನ ಬದಲಾವಣೆಯ ಅಧ್ಯಯನದ ಉದ್ಧೇಶವುಳ್ಳ ಈ ಉಪಗ್ರಹ, ಇದುವರೆಗೆ ತಯಾರಿಸಿದ ಅತ್ಯಂತ ಬೆಲೆಬಾಳುವ ಉಪಗ್ರಹ.

Update: 2024-02-05 06:30 GMT

ಬಾಹ್ಯಾಕಾಶ-ಸಾಗರದ ಅನ್ವೇಷಣೆಯಲ್ಲಿ ಸಾಮರ್ಥ್ಯ ಪ್ರದರ್ಶನಕ್ಕೆ ಸಿದ್ಧತೆ


……………………………………….

ಇಸ್ರೋ ಚಂದ್ರಯಾನ-3 ರ ನಂತರ ಮಾನವರಹಿತ ಬಾಹ್ಯಾಕಾಶಕ್ಕೆ ಕಳುಹಿಸಲು ಮತ್ತು ಸಮುದ್ರದಾಳದ ಅನ್ವೇಷಣೆಗೆ ಮುಂದಾಗಿದೆ. ಇಸ್ರೋ ಚಂದ್ರಯಾನ ಮಿಷನ್ನ ಆರ್ಬಿಟರ್ ಮೂಲಕ ಚಂದ್ರನಿಂದ ಮಾದರಿಗಳನ್ನು ಸಂಗ್ರಹಿಸಿದೆ. ಮಾದರಿಗಳ ರಹಸ್ಯಗಳ ಅನಾವರಣ ಮತ್ತು ಕಪ್ಪು ಕುಳಿಗಳ ಅಧ್ಯಯನಕ್ಕೆ ಸಿದ್ಧವಾಗುತ್ತಿದೆ. ಹೊಸ ಮೈಲುಗಲ್ಲು ಸಾಧಿಸಲು ಸಜ್ಜಾಗುತ್ತಿದೆ.

ಎಕ್ಸ್ ಪೋಸ್ಯಾಟ್, ಪೋಲಾರಿಮೀಟರ್ ಉಪಗ್ರಹವನ್ನು ಜನವರಿಯಲ್ಲಿ 1 ರಂದು ಉಡಾವಣೆ ಮಾಡಿದ್ದು, ಕ್ಷಕಿರಣಗಳ ಮೂಲಕ ಕಪ್ಪು ಕುಳಿಗಳ ನಿಗೂಢಗಳನ್ನು ಅಧ್ಯಯನ ಮಾಡಲಿದೆ. ಶ್ರೀಹರಿ ಕೋಟಾದಿಂದ ಪಿಎಸ್ಎಲ್ವಿ ಸಿ-58(ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಮೂಲಕ ಉಡ್ಡಯನ ನಡೆದಿದೆ. ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆ ಮತ್ತು ಇಸ್ರೋ ಜಂಟಿ ಪ್ರಯತ್ನ. ನಕ್ಷತ್ರಗಳು ಸಿಡಿದ ಬಳಿಕ ಕಪ್ಪು ಕುಳಿ ಇಲ್ಲವೇ ನ್ಯೂಟ್ರಾನ್‌ ನಕ್ಷತ್ರವೊಂದು ಸೃಷ್ಟಿಯಾಗುತ್ತದೆ. ಇಂಥ ವಿದ್ಯಮಾನವನ್ನು ಅಧ್ಯಯನ ಮಾಡುವುದು ಎಕ್ಸ್ ಪೋಸ್ಯಾಟ್ ಉದ್ಧೇಶ. ಅಮೆರಿಕದ ನಾಸಾ ಡಿಸೆಂಬರ್‌ 2021ರಲ್ಲಿ ಈ ಬಗೆಯ ಸಂಶೋಧನೆ ಯನ್ನು ಕೈಗೊಂಡಿತ್ತು.

ಆದಿತ್ಯ ಎಲ್-1 ನಂತರ ಆದಿತ್ಯ ಎಲ್-1 ಉಪಗ್ರಹ ವನ್ನು ಜನವರಿ 6 ರ ಸಂಜೆ ಲಾಗ್ರೇಂಜ್ ಪಾಯಿಂಟ್ -1 ನಲ್ಲಿ ಉಡಾವಣೆ ಮಾಡಲಾಗುತ್ತದೆ. ಅದು ಐದು ವರ್ಷ ಕಾಲ ಸೂರ್ಯನನ್ನು ಅಧ್ಯಯನ ಮಾಡಲಿದೆ.

ನಾಸಾ ಮತ್ತು ಇಸ್ರೋ ಒಂದಾಗಿ ೧.೨ ಶತಕೋಟಿ ಡಾಲರ್ ವೆಚ್ಚದ ಎನ್ಐಎಸ್ಎಆರ್ ಉಪಗ್ರಹವನ್ನು ಉಡ್ಡಯನ ಮಾಡಲಿವೆ. ಹವಾಮಾನ ಬದಲಾವಣೆಯನ್ನು ಅಧ್ಯಯನ ಮಾಡಲು ರೂಪಿಸಿರುವ ಈ ಉಪಗ್ರಹವು ಈವರೆಗಿನ ಭೂಮಿಯನ್ನು ಚಿತ್ರಗಳ ಮೂಲಕ ಸೆರೆ ಹಿಡಿಯುವ ಅತ್ಯಂತ ದುಬಾರಿ ಉಪಗ್ರಹವಾಗಿದೆ.

2024 ರಲ್ಲಿ ಗಗನಯಾನ್ ಅಡಿ ಎರಡು ಮಾನವರಹಿತ ಮಿಷನ್ಗಳನ್ನು ಯೋಜಿಸಲಾಗಿದೆ. 2025ಕ್ಕೆ ಭಾರತೀಯನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಲುವಾಗಿ ಇಸ್ರೋ, ಗಗನ್ಯಾನ್ ಕ್ರ್ಯೂ ಎಸ್ಕೇಪ್ ವ್ಯವಸ್ಥೆಯನ್ನು ಸಿದ್ಧಗೊಳಿಸುತ್ತಿದೆ.

ಖಾಸಗಿ ವಲಯ: ಖಾಸಗಿ ಬಾಹ್ಯಾಕಾಶ ವಲಯವು 2024ರಲ್ಲಿ ಮೊದಲ ವಾಣಿಜ್ಯ ಉಡ್ಡಯನಕ್ಕೆ ಸಿದ್ಧತೆ ನಡೆಸುತ್ತಿದೆ. ಸ್ಕೈರೂಟ್ ಏರೋಸ್ಪೇಸ್ ಮತ್ತು ಅಗ್ನಿಕುಲ್ ಕಾಸ್ಮಾಸ್, ಕಡಿಮೆ ಎತ್ತರದ ಕಕ್ಷೆಗಳಲ್ಲಿ ಸಣ್ಣ ಉಪಗ್ರಹಗಳನ್ನು ವಾಣಿಜ್ಯ ಉದ್ದೇಶಗಳಿಗೆ ಉಡ್ಡಯನಕ್ಕೆ ಸಿದ್ಧವಾಗುತ್ತಿವೆ. ʻನಮ್ಮ ಬಾಹ್ಯಾಕಾಶ ಸೇವೆಗಳ ವಾಣಿಜ್ಯೀಕರಣದಲ್ಲಿ 2024 ಒಂದು ಮೈಲುಗಲ್ಲು ಆಗಲಿದೆʼ ಎಂದು ಸ್ಕೈರೂಟ್ ಏರೋಸ್ಪೇಸ್ನ ಸಹ-ಸಂಸ್ಥಾಪಕ ಪವನ್ ಕುಮಾರ್ ಚಂದನ ಹೇಳಿದ್ದಾರೆ. ಮದ್ರಾಸ್ ಐಐಟಿಯ ಬೆಂಬಲಿತ ಅಗ್ನಿಕುಲ್ ಕಾಸ್ಮಾಸ್, 2024 ರಲ್ಲಿ ತನ್ನ 3ಡಿ ಮುದ್ರಿತ ʻಅಗ್ನಿಬಾನ್ʼ ರಾಕೆಟ್ನ ಹಾರಾಟವನ್ನು ನಡೆಸಲು ಸಿದ್ಧವಾಗಿದೆ. ಬೆಂಗಳೂರು ಮೂಲದ ಪಿಕ್ಸೆಲ್, 2025 ರ ವೇಳೆಗೆ 24 ಉಪಗ್ರಹಗಳ ಸಮೂಹದ ಉಡಾವಣೆಯನ್ನು ಯೋಜಿಸಿದೆ. ಮೊದಲ ಆರು ಉಪಗ್ರಹಗಳನ್ನು 2024 ರಲ್ಲಿ ಮತ್ತು ಉಳಿದ 18ನ್ನು 2025 ರಲ್ಲಿ ಉಡಾವಣೆ ಮಾಡಲಾಗುವುದು.

ಇನ್ನಿತರ ಯೋಜನೆಗಳು:

ʻಸಮುದ್ರಯಾನʼ ಎಂಬ ಜಲಾಂತರ್ಗಾಮಿ ನೌಕೆಯಲ್ಲಿ ಮಾರ್ಚ್ 2024 ರ ವೇಳೆಗೆ ಮೊದಲಿಗೆ 500 ಮೀಟರ್ ಮತ್ತು ಆನಂತರ 6,000 ಮೀಟರ್ ಆಳದವರೆಗೆ ಅಕ್ವಾನಾಟ್ಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ.

2,600 ಕೋಟಿ ರೂ. ವೆಚ್ಚದ ಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ (ಲಿಗೊ) ಮತ್ತು ಭಾರತ-ಯುಎಸ್ ಸಹಯೋಗದ ಫರ್ಮಿಲ್ಯಾಬ್ ಪ್ರೋಗ್ರಾಂ (900 ಕೋಟಿ ರೂ. ವೆಚ್ಚ ) ಇನ್ನಿತರ ಪ್ರಮುಖ ವೈಜ್ಞಾನಿಕ ಯೋಜನೆಗಳಲ್ಲಿ ಭಾಗವಹಿಸುವ ಪ್ರಸ್ತಾವನೆಗಳನ್ನು ಸರ್ಕಾರ ಅನುಮೋದಿಸಿದೆ. ಮಹಾರಾಷ್ಟ್ರದ ಹಿಂಗೋಲಿಯಲ್ಲಿ ನಿರ್ಮಿಸಿದ ಯೋಜನೆಯು ಲೂಯಿಸಿಯಾನ ಮತ್ತು ವಾಷಿಂಗ್ಟನ್ನಲ್ಲಿರುವ ಎರಡು ಲಿಗೊ ಪ್ರಯೋಗಾಲಯಗಳಿಗೆ ಪೂರಕವಾಗಿರಲಿದೆ.

ಕ್ವಾಂಟಮ್ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲು ರಾಷ್ಟ್ರೀಯ ಕ್ವಾಂಟಮ್ ಮಿಷನ್ ಅನ್ನು ಸರ್ಕಾರ ಅಂಗೀಕರಿದೆ. ಮುಂದಿನ ಎಂಟು ವರ್ಷಗಳಲ್ಲಿ ಯೋಜನೆ ಸರಿಸುಮಾರು 6000 ಕೋಟಿ ರೂ. ಅನುದಾನ ಪಡೆಯುವ ನಿರೀಕ್ಷೆಯಿದೆ. 2029 ರೊಳಗೆ ಅಂಟಾರ್ಟಿಕಾದಲ್ಲಿ ʻಮೈತ್ರಿ-IIʼ ಎಂಬ ಮತ್ತೊಂದು ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಭಾರತ ಯೋಜಿಸಿದೆ.

2023 ರ ಪ್ರಮುಖ ಸಾಧನೆಯೆಂದರೆ, ಜುಲೈ 14 ರಂದು ʻಚಂದ್ರಯಾನ-3ʼ ಉಡಾವಣೆ ಮತ್ತು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ನಡೆದ ಲ್ಯಾಂಡಿಂಗ್. ಇದು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಮಿಷನ್ನ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ರೋವರ್ ʻಪ್ರಗ್ಯಾನ್ʼ ಅನ್ನು ಇರಿಸಿತು. ರೋವರ್ ಚಿತ್ರಗಳನ್ನು ತೆಗೆದುಕೊಂಡಿತು. ಚಂದ್ರನ ಕಲ್ಲುಗಳನ್ನು ಭೂಮಿಗೆ ಮರಳಿ ತರುವ ಸಾಧ್ಯತೆಗಳನ್ನು ಒದಗಿಸಿತು. (ಏಜೆನ್ಸಿ ಇನ್ಪುಟ್ಗಳೊಂದಿಗೆ)

……………………………






Similar News