'ನಂಬಿಕೆʼ ಆಧರಿಸಿದ ಭಾರತದ ವಿದೇಶಾಂಗ ನೀತಿ ಪಶ್ಚಿಮದ ತೋಳ್ಬಲಕ್ಕೆ ಸಮವಾಗಲು ಸಾಧ್ಯವೇ?

Update: 2024-05-06 09:58 GMT

ಭಾರತೀಯ ಬೇಹುಗಾರರು, ಹೊರದೇಶದಲ್ಲಿರುವ ರಾಷ್ಟ್ರೀಯತೆಯ ಭಿನ್ನಮತೀಯರು ಮತ್ತು ವಿರೋಧಿಗಳನ್ನು ಹುಡುಕಿ, ಹುಡುಕಿ ಕೊಲ್ಲುತ್ತಿದ್ದಾರೆಯೇ?

ಇದು ಒಂದು ವೇಳೆ ನಿಜವೇ ಆಗಿದ್ದರೆ, ದೇಶದ ವಿದೇಶಾಂಗ ನೀತಿಯಲ್ಲಿ ನಿರ್ಣಾಯಕ ಬದಲಾವಣೆಯಾಗಿದೆ ಎಂದು ಅರ್ಥ. ನೆಹರೂ ಪ್ರಣೀತ ನೈತಿಕತೆಯನ್ನು ಆಧರಿಸಿದ ನೀತಿಯಿಂದ ಪ್ರತೀಕಾರವನ್ನು ಆಧರಿಸಿದ 'ಮೋದಿ' ಅವತಾರಕ್ಕೆ ಸ್ಥಿತ್ಯತರಗೊಂಡಿದೆ ಎನ್ನಬಹುದು.

ಸ್ಪಷ್ಟವಾಗಿ ಹೇಳಬೇಕೆಂದರೆ, ಪಾಕಿಸ್ತಾನದ ವಿಷಯಕ್ಕೆ ಬಂದಾಗ ಮೋದಿ ಸರ್ಕಾರವು ಭಾರತೀಯ ವಿರೋಧಿಗಳನ್ನು ಅಥವಾ ʻಭಯೋತ್ಪಾದಕರನ್ನುʼ (ಅಧಿಕಾರಿಗಳ ಭಾಷೆಯಲ್ಲಿ ಹೇಳುವುದಾದರೆ) ಬೇಟೆಯಾಡುವ ಮತ್ತು ಅವರನ್ನು ಕೊಲ್ಲುವ ತನ್ನ ಉದ್ದೇಶವನ್ನು ಮುಚ್ಚಿಡುವುದಿಲ್ಲ. ಪಾಕಿಸ್ತಾನದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಹೆಸರಾದ ಸುಮಾರು 20 ವ್ಯಕ್ತಿಗಳ ಹತ್ಯೆಗೆ ಭಾರತೀಯ ಗುಪ್ತಚರರು ಕಾರಣ ಎಂದು ಹೇಳಲಾಗಿದೆ.

ಏಪ್ರಿಲ್ 11 ರ ಚುನಾವಣೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ʻಭಯೋತ್ಪಾದಕರನ್ನು ಅವರ ತವರಿನಲ್ಲೇ ಕೊಲ್ಲುತ್ತಿದೆʼ ಎಂದು ಹೇಳಿದ್ದರು.

ಭಾರತದ ಸಂದಿಗ್ಧ: ಆದರೆ, ಕೆನಡಾ ಅಥವಾ ಯುನೈಟೆಡ್ ಸ್ಟೇಟ್ಸ್ ಇಂಥದ್ದೇ ಆರೋಪಗಳನ್ನು ಮಾಡಿದಾಗ ಮೋದಿ ಸರ್ಕಾರ, ಮೊದಲನೆಯದಾಗಿ, ಖಲಿಸ್ತಾನ್ ಪರ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮತ್ತು ಆನಂತರ, ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಆತನ ಸಹೋದ್ಯೋಗಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯಲ್ಲಿ, ಭಾರತದ ಕೈವಾಡವನ್ನು ಖಂಡಿತವಾಗಿ ನಿರಾಕರಿಸುತ್ತದೆ.

ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿದೆ ಎನ್ನಲಾದ ಹತ್ಯೆ ತಂಡದ ಮೂವರನ್ನುಕೆನಡಾ ಸರ್ಕಾರ ಬಂಧಿಸಿದೆ ಎಂದು ವರದಿಯಾಗಿದೆ. ಪನ್ನುನ್ ಪ್ರಕರಣದಲ್ಲಿ, ಆತನನ್ನು ಕೊಲ್ಲಲು ಹೇಗೆ ಸಂಚು ರೂಪಿಸಲಾಯಿತು ಮತ್ತು ಅದು ಫೆಡರಲ್‌ ಏಜೆಂಟರಿಂದ ಹೇಗೆ ವಿಫಲವಾಯಿತು ಎಂಬುದನ್ನುಅಮೆರಿಕ ಬಹಳ ವಿಸ್ತೃತವಾಗಿ ಬಹಿರಂಗಪಡಿಸಿದೆ.

ತೀರಾ ಇತ್ತೀಚೆಗೆ ಪನ್ನುನ್‌ನ ಕೊಲೆ ಪ್ರಯತ್ನದಲ್ಲಿ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ನ ಭಾರತೀಯ ಏಜೆಂಟ್‌ ಒಬ್ಬ ಭಾಗಿಯಾಗಿದ್ದ ಎಂದು ವರದಿಗಳು ಹೇಳಿದ್ದವು. ಭಾರತ ಸರ್ಕಾರದ ಪ್ರತಿಕ್ರಿಯೆ‌ಗಳು ಪಾಕಿಸ್ತಾನ ಮತ್ತು ಕೆನಡಾ- ಅಮೆರಿಕಕ್ಕೆ ಬೇರೆಯದೇ ರೀತಿ ಇರುವುದು ದೇಶದ ಇಕ್ಕಟ್ಟನ್ನು ತೋರಿಸುತ್ತದೆ. ನೆರೆಯ ದೇಶದಲ್ಲಿ ಭಾರತ ವಿರೋಧಿಗಳ ಹತ್ಯೆಯಲ್ಲಿ ತನ್ನ ಪಾಲ್ಗೊಳ್ಳುವಿಕೆಯ ಬಗ್ಗೆ ಮುಕ್ತವಾಗಿ ಮಾತನಾಡಿ, ಅದು ತಪ್ಪಿಸಿಕೊಳ್ಳಬಹುದು. ಮೋದಿಯವರ ಚುನಾವಣಾ ಭಾಷಣವನ್ನು ಯಾವುದೋ ಸೂಚನೆ ಎಂದುಕೊಂಡರೆ, ಇದು ಬಿಜೆಪಿಗೆ ಮತ ಗಳಿಸಿ ಕೊಡಬಹುದು.

ಆದರೆ, ಅಮೆರಿಕ, ಕೆನಡಾ ಅಥವಾ ಆಸ್ಟ್ರೇಲಿಯಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಇಂಥ ಕೃತ್ಯಗಳಲ್ಲಿ ದೇಶದ ಒಳಗೊಳ್ಳುವಿಕೆಯನ್ನು ಒಪ್ಪಿಕೊಳ್ಳುವುದು ಅಪಖ್ಯಾತಿಗೆ ಕಾರಣವಾಗುತ್ತದೆ. ಪಾಶ್ಚಿಮಾತ್ಯರ ವಿರೋಧದ ನಡುವೆಯೂ ಭಾರತ ಆಕ್ರಮಣಶೀಲತೆಯನ್ನು ಮುಂದುವರಿಸಿದರೆ, ನಿರ್ಬಂಧಕ್ಕೆ ಕಾರಣವಾಗಬಹುದು ಮತ್ತು ಇದರಿಂದ ಮೋದಿ ಸರ್ಕಾರಕ್ಕೆ ಮುಖಭಂಗ ಆಗಬಹುದು.

ಉತ್ತಮ ನಡೆಯಲ್ಲ:

ವಿದೇಶಗಳಲ್ಲಿ ಭಾರತ ವಿರೋಧಿಗಳ ಮೇಲೆ ಕ್ರಮಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ವ್ಯವಸ್ಥೆಯು ಯಾವುದೇ ಬದಲಾವಣೆ ಬಗ್ಗೆ ಸ್ಪಷ್ಟವಾಗಿ ಹೇಳದೆ ಇರಲು ಇದೂ ಕೂಡ ಒಂದು ಸಂಭವನೀಯ ಕಾರಣ ಎನ್ನಬಹುದು. ವಿದೇಶಾಂಗ ವ್ಯವಹಾರ ಗಳ ಸಚಿವ ಎಸ್. ಜೈಶಂಕರ್ ಅವರು 2014 ರಿಂದ ಭಾರತದ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಆಗಿದೆ ಮತ್ತು ಅದಕ್ಕೆ ಅನುಗುಣವಾಗಿ ಭಯೋತ್ಪಾದನೆಯನ್ನು ಎದುರಿಸಲಾಗುತ್ತಿದೆ ಎಂದಷ್ಟೇ ಹೇಳಿದ್ದಾರೆ.

ದೇಶ ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವ ವ್ಯಕ್ತಿ ಎಲ್ಲೇ ಇರಲಿ, ಅವರನ್ನು ಬಿಡುವುದಿಲ್ಲ ಎಂದು ಧೈರ್ಯದಿಂದ ಹೇಳಲು ಸಾಧ್ಯವಾಗುವುದು ಅದು ನಿಜವಾಗಿಯೂ ಭಾರಿ ಶಕ್ತಿ ಅಥವಾ ಪ್ರಾಬಲ್ಯ ಹೊಂದಿರುವ ರಾಷ್ಟ್ರವಾಗಿ ಮಾರ್ಪಟ್ಟಿದ್ದರೆ ಮಾತ್ರ ಸಾಧ್ಯ.

ದೇಶದೊಳಗೆ ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುವುದು ಮತ್ತು ದೇಶ ಸೂಪರ್ ಪವರ್ ಆಗುವ ಹಾದಿಯಲ್ಲಿದೆ ಎಂದು ಹೇಳಿಕೊಳ್ಳುವುದು ಒಂದು ವಿಷಯ. ತಾನು ಹೇಳಿಕೊಂಡಿದ್ದು ಆಗಿದ್ದೇನೆ ಎಂದು ಜಗತ್ತನ್ನು ನಂಬಿಸುವುದು ಬೇರೆಯದೇ ವಿಷಯ. ವಾಸ್ತವ ಏನೆಂದರೆ, ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಬೆಂಬಲ ಸೇರಿದಂತೆ ಹಲವು ಕಾರಣಗಳಿಂದಾಗಿ ಭಾರತವು ಪಶ್ಚಿಮದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಆದ್ದರಿಂದ, ಒಟ್ಟಾರೆ ವಿದ್ಯಮಾನ ಅಷ್ಟೊಂದು ಉತ್ತಮವಾಗಿಲ್ಲ.

ಭಾರತದ ನಿಲುವು ದುರ್ಬಲಗೊಳಿಸುವುದು: ಒಂದೆಡೆ, ಭಾರತ ಸರ್ಕಾರವು ಪಾಶ್ಚಿಮಾತ್ಯರ ಮುಂದೆ ಹೆದರುತ್ತಿದೆ; ಆದರೆ, ದುರ್ಬಲ ಪಾಕಿಸ್ತಾನದ ಮುಂದೆ ಧೈರ್ಯವನ್ನು ಪ್ರದರ್ಶಿಸುತ್ತಿದೆ. ಸಚಿವ ಜೈಶಂಕರ್ ಅವರು ವಿವಾದಾತ್ಮಕ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಒಂದು ಸಾಲಿನ ಚತುರ ಉತ್ತರ ನೀಡುತ್ತಾರೆ.

ವರದಿಯೊಂದರ ಪ್ರಕಾರ, ಏಪ್ರಿಲ್ ಮಧ್ಯ ಭಾಗದಲ್ಲಿ ಅವರು ಹೇಳಿದ್ದು ಈ ರೀತಿ ಇದೆ. ಗಡಿಯಾಚೆ ಇರುವ ಕಾರಣ ಯಾರೂ ತಮ್ಮನ್ನು ಮುಟ್ಟಲಾರರು ಎಂದು ಭಯೋತ್ಪಾದಕರು ಭಾವಿಸಬಾರದು. ಉಗ್ರರು ಯಾವುದೇ ನಿಯಮಗಳನ್ನು ಅನುಸರಿಸುವುದಿಲ್ಲ. ಭಯೋತ್ಪಾದಕರಿಗೆ ಪ್ರತಿಕ್ರಿಯೆ ಕೂಡ ಯಾವುದೇ ನಿಯಮ ಅನುಸರಿಸುವುದಿಲ್ಲʼ.

ಕೆನಡಾದಲ್ಲಿ ನಿಜ್ಜರ್ ಹತ್ಯೆ ಮತ್ತು ಅಮೆರಿಕದಲ್ಲಿ ಪನ್ನುನ್‌ ಹತ್ಯೆ ಯತ್ನ ಕುರಿತು ಹೆಚ್ಚು ಜಾಗರೂಕತೆಯಿಂದ ಪ್ರತಿಕ್ರಿಯಿಸಿದ್ದ ಜೈಶಂಕರ್, ಭಾರತವು ಜವಾಬ್ದಾರಿಯುತ ದೇಶವಾಗಿದೆ. ಇಂಥ ಕೃತ್ಯಗಳಲ್ಲಿ ಭಾರತೀಯ ಏಜೆಂಟರ ಭಾಗಿಯಾಗಿರುವ ಆರೋಪಗಳನ್ನು ಪರಿಶೀಲಿಸಲಾಗುತ್ತದೆ ಎಂದಿದ್ದರು.

ನೆಹರೂ ಪ್ರಣೀತ ವಿದೇಶಾಂಗ ನೀತಿ: ವಿದೇಶಾಂಗ ನೀತಿಯಲ್ಲಿ ಆಗಿರುವ ಶಕ್ತಿ ಪ್ರದರ್ಶನದ ಬದಲಾವಣೆಯು, ವಿಶ್ವ ರಾಜಕೀಯ ದಲ್ಲಿ ದೇಶದ ನೈತಿಕ ಸ್ಥಾನವನ್ನು ದುರ್ಬಲಗೊಳಿಸಿದೆ. 

Tags:    

Similar News