ಸಜನಾ ಸಜೀವನ್: ಆಟೋರಿಕ್ಷಾ ಚಾಲಕನ ಮಗಳು ಡಬ್ಲ್ಯುಪಿಎಲ್‌ ನ ಸ್ಟಾರ್

Update: 2024-02-24 17:07 GMT
ಯಾಸ್ತಿಕಾ ಅವರೊಟ್ಟಿಗೆ ಸಜನಾ ಸಜೀವನ್

ಬೆಂಗಳೂರು, ಫೆ 24- ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಟವಾಡುವುದಾಗಿ ಸಜನಾ ಹೇಳಿದಾಗ, ಪೋಷಕರಾದ ಸಜೀವನ್ ಮತ್ತು ಶಾರದ ಕಣ್ಣೀರು ತಡೆದುಕೊಳ್ಳಲು ಹೆಣಗಾಡಿದರು.

ಸಜನಾ ಅಂತಿಮ ಚೆಂಡನ್ನು ಸಿಕ್ಸರ್‌ ಹೊಡೆದು ತಂಡಕ್ಕೆ ನಾಲ್ಕು ವಿಕೆಟ್‌ಗಳ ಜಯ ತಂದಿತ್ತರು. ಕೇರಳದ ವಯನಾಡ್‌ನ ಮಾನಂತವಾಡಿ ಎಂಬ ಹಳ್ಳಿಯಲ್ಲಿ ಬೆಳೆದ ಸಜನಾ ನಾಯಕಿಯಾಗಿ ಬದಲಾದರು. 

ಗ್ರಾಮದ ಆಟೋರಿಕ್ಷಾ ಚಾಲಕ ಸಜೀವನ್ ಮತ್ತು ಪಂಚಾಯತ್ ಕೌನ್ಸಿಲರ್ ಮತ್ತು ಲೆಕ್ಕಪರಿಶೋಧಕಿ ಶಾರದ ದಂಪತಿಯ ಆರ್ಥಿಕ ಪರಿಸ್ಥಿತಿ ಸಜನಾ ಅವರ ಕ್ರಿಕೆಟ್‌ ಕನಸನ್ನು ಬೆಂಬಲಿಸುವಷ್ಟು ಗಟ್ಟಿಯಾಗಿರಲಿಲ್ಲ.ʻಆದರೆ, ಅವಳು ಯಾವಾಗಲೂ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದಳು. ಮನೆಯ ಸಮೀಪವಿರುವ ಗದ್ದೆಯಲ್ಲಿ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ತೆಂಗಿನ ದಿಂಡಿನಿಂದ ಆಟವಾಡುತ್ತಿದ್ದಳುʼ. 

ʻಕೃಷ್ಣಗಿರಿ ಕ್ರೀಡಾಂಗಣದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಭೇಟಿಯಾಗಿ, ಬ್ಯಾಟ್‌ ಮೇಲೆ ಹಸ್ತಾಕ್ಷರ ಪಡೆದುಕೊಂಡ ಳು. ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎಲ್ಸಮ್ಮ ಬೇಬಿ ಮಗಳನ್ನು ಪ್ರೋತ್ಸಾಹಿಸಲು ಹೇಳಿದರುʼ ಎಂದು ಹೇಳುತ್ತಾರೆ. 

ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಸಜನಾ, 19 ವರ್ಷದೊಳಗಿನವರ ಪಂದ್ಯಾವಳಿಗಳಲ್ಲಿ ಆಡಲು ಆಯ್ಕೆಯಾದಾಗ ಮಹತ್ವದ ತಿರುವು ಬಂದಿತು.

ʻಜಿಲ್ಲೆಗೆ ಆಡಲು ಆಯ್ಕೆಯಾದಾಗ ಹಣ ಗಳಿಸಲು ಪ್ರಾರಂಭಿಸಿದೆ. 150 ರೂ. ದಿನಭತ್ಯೆ ನನಗೆ ದೊಡ್ಡ ಮೊತ್ತವಾಗಿತ್ತು. ಆನಂತರ ಅದು 900 ರೂ. ಆಯಿತುʼ ಎಂದು ಸಜನಾ ಎಂಐ ವೆಬ್‌ಸೈಟ್‌ನಲ್ಲಿ ಅಳವಡಿಸಿದ ವಿಡಿಯೋದಲ್ಲಿ ಹೇಳಿದ್ದಾರೆ. ಆನಂತರ ಸಜನಾ, 19 ವರ್ಷದೊಳಗಿನ ತಂಡಕ್ಕೆ ನಾಯಕಿಯಾಗಿ ನೇಮಕಗೊಂಡರು. ಬ್ಯಾಟರ್ ಮತ್ತು ಆಫ್ ಸ್ಪಿನ್ನರ್ ಆಗಿ ಭಾರತ ಎ ತಂಡಕ್ಕೆ ಆಯ್ಕೆಯಾದರು. 

ಪ್ರಸ್ತುತ ತರಬೇತುದಾರ ಕೆ. ರಾಜಗೋಪಾಲ್, ʻಹರಾಜಿನ ನಂತರ ನಿರಾಶೆಗೊಳ್ಳಬೇಡಿ ಎಂದು ಹೇಳಿದೆ. ಉತ್ತಮ ಪ್ರದರ್ಶನ ಮುಂದುವರಿಸಿದರೆ ಅವಕಾಶ ಖಂಡಿತವಾಗಿಯೂ ಬರುತ್ತದೆʼ ಎಂದು ಹೇಳಿದ್ದೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ 15 ಲಕ್ಷ ರೂ.ಗೆ ಆಯ್ಕೆಮಾಡಿಕೊಂಡಿತು.

ಚೊಚ್ಚಲ ಪಂದ್ಯದಲ್ಲೇ ಆಫ್ ಸ್ಪಿನ್ನರ್ ಆಲಿಸ್ ಕ್ಯಾಪ್ಸಿ ಎಸೆದ ಚೆಂಡನ್ನು ಸಿಕ್ಸರ್‌ ಎತ್ತುವ ಮೂಲಕ ಮುಂಬೈ ಇಂಡಿಯನ್‌ ತಂಡಕ್ಕೆ ಜಯ ತಂದಿತ್ತರು. ʻಮುಂ ಬೈ ಇಂಡಿಯನ್ಸ್‌ ಗೆ ಆಕೆ ಮೇಲೆ ನಂಬಿಕೆ ಇದೆ. ಅವರು ಮಹಿಳಾ ತಂಡದ ಕೀರಾನ್ ಪೊಲಾರ್ಡ್.‌ ಕ್ರೆಡಿಟ್ ಅವರಿಗೆ ಸಲ್ಲುತ್ತದೆʼ ಎಂದು ಪತ್ರಿಕಾಗೋಷ್ಠಿಯಲ್ಲಿ ಯಾಸ್ತಿಕಾ ಹೇಳಿದರು. 

ʻಸಜನಾ ಈಗ ಮಿನ್ನುಮಣಿ (ಶುಕ್ರವಾರ ದೆಹಲಿ ಪರ ಆಡಿದ ವಯನಾಡಿನ ಕ್ರಿಕೆಟಿಗ)ಯಂತೆ ಭಾರತೀಯ ಜರ್ಸಿಯನ್ನು ಧರಿಸಲು ಬಯಸುತ್ತೇನೆ ಎನ್ನುತ್ತಾಳೆ. ಅವರ ಕನಸುಗಳು ನನಸಾಗಲಿ ಎಂದು ಆಶಿಸುತ್ತೇನೆʼ ಎಂದು ಸಜೀವನ್ ಹೇಳಿದರು.

Tags:    

Similar News