ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ಸಾತ್ವನ

ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಮತ್ತು ತಂಡ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ವಾಣಿಜ್ಯ ಮಂಡಳಿಯಿಂದ 5 ಲಕ್ಷ ರೂ. ಪರಿಹಾರ ನೀಡಿದರು.;

Update: 2024-06-15 14:10 GMT
ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬಕ್ಕೆ ವಾಣಿಜ್ಯ ಮಂಡಳಿಯಿಂದ ಐದು ಲಕ್ಷ 5 ಲಕ್ಷ ರೂ. ಪರಿಹಾರ ನೀಡಿದರು.
Click the Play button to listen to article

ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಈ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ವಾಣಿಜ್ಯ ಮಂಡಳಿಯಿಂದ 5 ಲಕ್ಷ ರೂ. ಪರಿಹಾರ ನೀಡಿತು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ , ಮೃತ ರೇಣುಕಾಸ್ವಾಮಿಯ ತಂದೆ-ತಾಯಿಯ ಪರಿಸ್ಥಿತಿ ಕಂಡು ನಮಗೂ ಕಣ್ಣೀರು ಬಂತು. ಕುಟುಂಬಕ್ಕೆ ಧೈರ್ಯ ಹೇಳಿದ್ದೇವೆ. ನಾವಿಲ್ಲಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಬಂದಿಲ್ಲ, ಸಂತಾಪ ಹೇಳಲು ಇಲ್ಲಿಗೆ ಬಂದಿದ್ದೇವೆ. ಪ್ರಕರಣವನ್ನು ಪೊಲೀಸರು ಕಾನೂನು ಅಡಿಯಲ್ಲಿ ತನಿಖೆ ನಡೆಸಿದ್ದಾರೆ ಎಂದರು.

ನಟನಿಗೆ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಈ ಹಿಂದೆಯೂ ಡಾ. ರಾಜ್​​ಕುಮಾರ, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್​ ಅವರಿಗೂ ಅಭಿಮಾನಿಗಳಿದ್ದರು, ಇಗಲೂ ಇದ್ದಾರೆ. ಆದರೆ, ಇತ್ತೀಚೆಗೆ ಅಭಿಮಾನಿಗಳು ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಯಾರೂ ಕೂಡ ಪ್ರಚೋದನೆಗೆ ಒಳಗಾಗಬಾರದು ಎಂದು ಸುರೇಶ್ ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಸಾ ರಾ ಗೋವಿಂದ್ ಮಾತನಾಡಿ, ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅವರು ತಪ್ಪು ಮಾಡಿರಬಹುದು. ಆದರೆ, ಆ ತಪ್ಪನ್ನು ವಿಕಾರವಾಗಿ ತೆಗೆದುಕೊಂಡು ಹೋಗಬಾರದಿತ್ತು. ನಡೆದಿರುವ ಘಟನೆಗೆ ಚಿತ್ರರಂಗ ಹೊಣೆಯಲ್ಲ, ಇದಕ್ಕೆ ಸಂಬಂಧಪಟ್ಟ ವ್ಯಕ್ತಿಯೇ ಹೊಣೆ. ಅವರಿಂದ ಚಿತ್ರರಂಗ ತಲೆತಗ್ಗಿಸುವ ಕೆಲಸ ಆಗಿದೆ. ನಾವೂ ಕೂಡ ತಲೆತಗ್ಗಿಸುವ ಕೆಲಸ ಆಗಿದೆ. ಸಿನಿಮಾ ಅಂದರೆ ಜನರು ಕೊಡುವ ಗೌರವವೇ ಬೇರೆ. ರಾಜ್​​ಕುಮಾರ, ಶಂಕರ್ ನಾಗ್, ವಿಷ್ಣು ವರ್ದನ್ ಇದ್ದ ಕಾಲ ಈಗ ಇಲ್ಲ. ರಾಜ್​​ಕುಮಾರ್ ಅಭಿಮಾನಿಗಳ ಸಂಘ ಮಾಡಿ ಸಾಕಷ್ಟು ಹೋರಾಟ ಮಾಡಿದ್ದೇವೆ. ಚಿತ್ರದುರ್ಗದಲ್ಲಿ ಕೂಡ ಹೋರಾಟ ನಡೆಸಿದ್ದೇವೆ. ಆದರೆ, ನಡೆದಿರುವ ಘಟನೆ ಸಂತೋಷ ಕೊಡುವಂತಹದ್ದಲ್ಲ. ಇತ್ತೀಚೆಗೆ ಯುವ ನಟರು ದಾರಿ ತಪ್ಪುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಚಿತ್ರರಂಗಕ್ಕೂ ಕೆಟ್ಟ ಹೆಸರು ಬರುತ್ತಿದೆ ಎಂದರು.

ಚಿನ್ನೆಗೌಡರು ಮಾತನಾಡಿ, ಆಗಬಾರದಾಗಿತ್ತು ಆಗೋಗಿದೆ. ನೋವು ಕುಟುಂಬಕ್ಕೆ ಅಲ್ಲ, ಇಡೀ ಚಿತ್ರರಂಗಕ್ಕೆ ಆಗಿದೆ. ಮನುಷ್ಯ ವಿವೇಕವನ್ನ ಕಳೆದುಕೊಳ್ಳಬಾರದು, ಸಹನೆ ಕಳೆದುಕೊಳ್ಳಬಾರದು. ಅಂದು ಸ್ವಲ್ಪ ಸಮಾಧಾನ ತೆಗೆದುಕೊಂಡಿದ್ದರೇ ಅನಾಹುತ ನಡೆಯುತ್ತಿರಲಿಲ್ಲ. ತಂದೆ-ತಾಯಿ ಗತಿಯೇನು, ಇದೆಲ್ಲಾವೂ ಆಕಸ್ಮಿಕ ಆಗಿರುವ ಘಟನೆ. ಮುಂದೆ ಯಾರು ಕೂಡ ಈ ಪರಿಸ್ಥಿತಿಗೆ ಹೋಗಬಾರದು ಎಂದರು.

ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷರುಗಳಾದ ಚಿನ್ನೇಗೌಡ, ಸಾರಾ ಗೋವಿಂದು, ಕೆ.ವಿ. ಚಂದ್ರಶೇಖರ್ ಸೇರಿದಂತೆ ಹಲವರು ಚಿತ್ರದುರ್ಗಕ್ಕೆ ತೆರಳಿದ್ದರು.

Tags:    

Similar News