ಪ್ರಜ್ವಲ್ ಪ್ರಕರಣ| ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದಲ್ಲಿ ಏರುಪೇರು.!
ದೇವೇಗೌಡರಿಗೆ ಟಿವಿ ನೋಡಬೇಡಿ.. ಸಂಪೂರ್ಣ ರೆಸ್ಟ್ ಮಾಡಿ ಎಂದು ವೈದ್ಯರು ಹೇಳಿದ್ದು, ಸದ್ಯ ದೇವೇಗೌಡರು ವಿಶ್ರಾಂತಿಯಲ್ಲಿದ್ದು ಕುಟುಂಬದ ಆತ್ಮೀಯರು ಹೊರತು ಪಡಿಸಿ ಬೇರೆಯವರಿಗೆ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ.;
ಮಗ ಎಚ್.ಡಿ. ರೇವಣ್ಣ ಮತ್ತು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣ ಪ್ರಕರಣದಿಂದ ಮನನೊಂದಿರುವುದರಿಂದ ಹಾಗೂ ವಯೋಸಹಜ ಅನಾರೋಗ್ಯದಿಂದ ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ.
ಸದ್ಯ ಅವರನ್ನು ಮನೆಯಲ್ಲೇ ಕುಟುಂಬದವರು ಹೆಚ್ಚಿನ ನಿಗಾ ವಹಿಸಿ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅವರ ಆರೋಗ್ಯದ ಬಗ್ಗೆ ಹೆಣ್ಣು ಮಕ್ಕಳು ಸಂಪೂರ್ಣ ಮೇಲ್ವಿಚಾರಣೆ ಹೊತ್ತಿದ್ದಾರೆ ಎನ್ನಲಾಗಿದ್ದು, ದೇವೇಗೌಡರ ಅಳಿಯ ಹಾಗೂ ಹೃದಯ ತಜ್ಞ ಡಾ. ಸಿ.ಎನ್ ಮಂಜುನಾಥ್ ಗೌಡರ ಮನೆಗೆ ಭೇಟಿ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮತ್ತು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ದೇವೇಗೌಡರಿಗೆ ಟಿವಿ ನೋಡಬೇಡಿ.. ಸಂಪೂರ್ಣ ರೆಸ್ಟ್ ಮಾಡಿ ಎಂದು ವೈದ್ಯರು ಹೇಳಿದ್ದು, ಸದ್ಯ ದೇವೇಗೌಡರು ವಿಶ್ರಾಂತಿಯಲ್ಲಿದ್ದು ಕುಟುಂಬದ ಆತ್ಮೀಯರು ಹೊರತು ಪಡಿಸಿ ಬೇರೆಯವರಿಗೆ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ.ಪ