ವನ್ಯಜೀವಿ ಮಂಡಳಿ ರಚನೆ ವಿಳಂಬ: ಕೇಂದ್ರ ಅರಣ್ಯ ಸಚಿವರಿಗೆ ಪತ್ರ

"ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ನಿರ್ದೇಶನ ನೀಡಬೇಕು' ಎಂದು ಒತ್ತಾಯಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ಮನವಿ ಸಲ್ಲಿಕೆಯಾಗಿದೆ.

Update: 2024-07-09 12:17 GMT
ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದರ್ ಯಾದವ್
Click the Play button to listen to article

"ಕರ್ನಾಟಕದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ರಚನೆಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ನಿರ್ದೇಶನ ನೀಡಬೇಕು" ಎಂದು ಒತ್ತಾಯಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ಮನವಿ ಸಲ್ಲಿಕೆಯಾಗಿದೆ.

ಈ ಕುರಿತು ಬೆಂಗಳೂರಿನ ನಿವಾಸಿ ಅಕ್ಷೀವ್‌ ಟಿ. ಎಂಬುವರು ಮನವಿ ಸಲ್ಲಿಸಿದ್ದಾರೆ.

ʻವನ್ಯಜೀವಿ ಮಂಡಳಿಯ ಸದಸ್ಯರ ಅವಧಿ 2023ರ ಅಕ್ಟೋಬರ್‌ಗೆ ಮುಗಿದಿದೆ. ಆದರೆ, 10 ತಿಂಗಳುಗಳಿಂದ ಸದಸ್ಯರ ನೇಮಕ ಮಾಡದೆ ಕಾಲಹರಣ ಮಾಡಲಾಗುತ್ತಿದೆ. ಅರಣ್ಯ ಸಚಿವರು ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡು ವಿಳಂಬ ಮಾಡುತ್ತಿದ್ದಾರೆ. ಅಧಿಕಾರಿಗಳೇ ಇರುವ ಸ್ಥಾಯಿ ಸಮಿತಿಯನ್ನು ರಚಿಸಿಕೊಂಡು ಹಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಇದು ವನ್ಯಜೀವಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ' ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಸ್ಥಾಯಿ ಸಮಿತಿ ರಚನೆಯೇ ಅಕ್ರಮ. ಈ ಸಮಿತಿಯನ್ನು ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ವನ್ಯಜೀವಿ ಮಂಡಳಿಯನ್ನು ಕೂಡಲೇ ರಚಿಸಲು ಸೂಚನೆ ನೀಡಬೇಕು' ಎಂದು ಅವರು ಆಗ್ರಹಿಸಿದ್ದಾರೆ.

Tags:    

Similar News