ಬಸವರಾಜ ಬೊಮ್ಮಾಯಿ ಮುದುಕರಾಗಿದ್ದಾರೆ... ಈಗವರು “ದಾವಣಗೆರೆ ಚಾರ್ಲಿ”: ಪಾಟೀಲ್‌

ಹೇಳಿಕೆಗೆ ಬಸವರಾಜ ಬೊಮ್ಮಾಯಿ ಆಕ್ರೋಶ;

Update: 2024-03-29 08:48 GMT
ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ, ಶಾಸಕ ಹಾಗೂ ಹಾವೇರಿಯ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮುದುಕ ಎಂದು ಸಚಿವ ಎಚ್.ಕೆ.ಪಾಟೀಲ ವ್ಯಂಗ್ಯವಾಡಿದ್ದಾರೆ. ಲೋಕಸಭೆ ಚುನಾವಣೆ ಸಮರದಲ್ಲಿ ನಾಯಕರ ನಡುವೆ ವಾಕ್ಸಮರ ಮುಂದುವರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿ ನಡುವೆ ನೇರ ಹಣಾಹಣಿ ಇದೆ.

ಇದೀಗ ಸಚಿವ ಎಚ್.ಕೆ ಪಾಟೀಲ ಅವರು, ಬಸವರಾಜ ಬೊಮ್ಮಾಯಿ ಅವರು ದಾವಣಗೆರೆ ಚಾರ್ಲಿಯಂತೆ. ಈಗ ಮುದುಕರಾಗಿದ್ದು, ಹೊಸ ಕುಸ್ತಿ ಟು ಬಿಟ್ಟಾಗ ಯಾರು ಗೆಲ್ಲುತ್ತಾರೆ ಅಂತ ತಿಳಿಯುತ್ತೆ ಎಂದು ಕುಹಕವಾಡಿದ್ದಾರೆ. ದಾವಣಗೆರೆ ಚಾರ್ಲಿಯೊಂದಿಗೆ ಹೊಸ ಜಾಣ ಕುಸ್ತಿಪಟು ಕಣದಲ್ಲಿದ್ದು, ಆನಂದ ಗಡ್ಡದ್ದೇವರಮಠ ಗೆಲುವು ನಿಶ್ಚಿತ ಎಂದಿದ್ದಾರೆ.  (ಕುಸ್ತಿ ಫೈಲ್ವಾನ್‌ ನಿಃಶಕ್ತನಾದಾಗ ಬಳಸುವ ಶಬ್ದ - ಚಾರ್ಲಿ ಫೈಲ್ವಾನ್‌)

ಮೋದಿ ಅಂತ ಹೇಳಿದ ಕೂಡಲೇ “15 ಲಕ್ಷ ಆಪ್ ಕಿ ಅಕೌಂಟ್ ಗೆ ಪಂದ್ರ ಲಾಕ್ ಡಾಲೂಂಗಾ ಎನ್ನುವ ಮಾತು ಜನರಲ್ಲಿ ಮೂಡುತ್ತೆ. ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ಡಬ್ಬಲ್ ಆಗುತ್ತೆ ಎಂದು ಹೇಳಿದ್ದರು. ಯಾವುದೂ ಈಡೇರಿಲ್ಲ ಬಿಜೆಪಿಯವರ ಸುಳ್ಳು ಭರವಸೆಗಳಿಂದ ಬೊಮ್ಮಾಯಿ ಎದ್ದು ನಿಲ್ಲಲಾಗದ ಪರಿಸ್ಥಿತಿ ಇದೆ. ಮಾಜಿ ಮುಖ್ಯಮಂತ್ರಿಗಳ ಹಿಂದೆ ದೊಡ್ಡ ಲಗೇಜ್ ಇದೆ ಎಂದಿದ್ದಾರೆ.

ಬಸವರಾಜ ಬೊಮ್ಮಾಯಿ ಆಕ್ರೋಶ

ಸಚಿವ ಎಚ್. ಕೆ ಪಾಟೀಲ ಅವರ “ದಾವಣಗೆರೆ ಚಾರ್ಲಿ” ಹೇಳಿಕೆಗೆ ಬಸವರಾಜ ಬೊಮ್ಮಾಯಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್ ಕೆ ಪಾಟೀಲ ಹಿರಿಯರು ಚುನಾವಣಾ ಸಮಯದಲ್ಲಿ ಈ ರೀತಿ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದರೆ, ಅವರು ಹತಾಶರಾಗಿದ್ದಾರೆ. ಎಚ್.ಕೆ ಪಾಟೀಲ ಅವರು ಈ ವಯಸ್ಸಿನಲ್ಲಿ ಮಂತ್ರಿಗಿರಿದ್ದಾರಲ್ಲವೇ ನಾನು ಸಂಸದನಾಗಿ ಕೆಲಸ ಮಾಡಲು ಸಮಸ್ಯೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಎಚ್.ಕೆ ಪಾಟೀಲ ಅವರನ್ನ ಸುಸಂಸ್ಕೃತ ಮಂತ್ರಿ ಎಂದುಕೊಂಡಿದ್ದೇವೆ. ಅವರಿಗೆ ಒಳಿತಾಗಲಿ ಎಂದರು.

ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇಲ್ಲವೇ ?

ಕಾಂಗ್ರೆಸ್ನವರು ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇದೆ ಎಂದು ಹೇಳುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪರಿಸ್ಥಿತಿ ಏನಾಗಿದೆ ಎಂದು ಅವರು ನೋಡಿಕೊಳ್ಳಲಿ. ಶಿವಕುಮಾರ್ ಅವರು ಬಿಜೆಪಿಯಲ್ಲಿ ಬಂಡಾಯದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಾದ್ಯಂತ ಕಾಂಗ್ರೆಸ್ ಬಂಡಾಯದ ಬಗ್ಗೆ ಅವರ ಪ್ರತಿಕ್ರಿಯೆ ಏನು ಎಂದು ಕೇಳಿದರು. 

Tags:    

Similar News