ಕೆಂಧೂಳಿ ರಾಜ್ಯೋತ್ಸವ' ಪ್ರಶಸ್ತಿಗೆ ಸಾಹಿತಿ ಬಿ.ಎಲ್.ವೇಣು ಆಯ್ಕೆ
ಡಾ.ಶಿವಕುಮಾರ್ ಕಂಪ್ಲಿ ಅಧ್ಯಕ್ಷತೆಯಲ್ಲಿ ತುರುವನೂರು ಮಂಜುನಾಥ, ಶ್ರೀದೇವಿ ಕೆರೆಮನೆ ಮತ್ತು ಪರಶಿವ ಧನಗೂರು ನೇತೃತ್ವದ ಆಯ್ಕೆ ಸಮಿತಿಯು ಡಾ.ಬಿ.ಎಲ್. ವೇಣು ಅವರನ್ನು ಪ್ರಶಸ್ತಿಗೆ ಅಯ್ಕೆ ಮಾಡಿದೆ.
By : The Federal
Update: 2025-11-02 15:03 GMT
ಕೆಂಧೂಳಿ ಪತ್ರಿಕೆ ಐದು ವರ್ಷ ಪೂರೈಸಿರುವ ಪ್ರಯುಕ್ತ ಸಾಹಿತ್ಯ, ಪತ್ರಿಕೋದ್ಯಮ,ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿ ವರ್ಷ ಪ್ರಶಸ್ತಿ ಕೊಡಲು ತೀರ್ಮಾನಿಸಿದೆ.
ಈ ನಿಟ್ಟಿನಲ್ಲಿ ಮೊದಲನೇ ವರ್ಷದ ಪ್ರಶಸ್ತಿಗೆ ಹೆಸರಾಂತ ಸಾಹಿತಿ ಡಾ.ಬಿ.ಎಲ್.ವೇಣು ಅವರನ್ನು ಆಯ್ಕೆ ಮಾಡಿದ್ದು, ಅವರಿಗೆ 'ಕೆಂಧೂಳಿ ರಾಜ್ಯೋತ್ಸವ' ಪ್ರಶಸ್ತಿ ನೀಡಲು ನಿರ್ಧರಿಸಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹೊಂದಿರಲಿದೆ. ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಡಾ.ಶಿವಕುಮಾರ್ ಕಂಪ್ಲಿ ಅಧ್ಯಕ್ಷತೆಯಲ್ಲಿ ತುರುವನೂರು ಮಂಜುನಾಥ, ಶ್ರೀದೇವಿ ಕೆರೆಮನೆ ಮತ್ತು ಪರಶಿವ ಧನಗೂರು ನೇತೃತ್ವದ ಆಯ್ಕೆ ಸಮಿತಿಯು ಡಾ.ಬಿ.ಎಲ್. ವೇಣು ಅವರನ್ನು ಪ್ರಶಸ್ತಿಗೆ ಅಯ್ಕೆ ಮಾಡಿದೆ ಎಂದು ಕೆಂಧೂಳಿ ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.